Advertisement
ಮೇಷ: ಕಾರ್ಯಕ್ಷೇತ್ರದಲ್ಲಿ ಕೀರ್ತಿಶಾಲಿಗಳಾಗುವಿರಿ. ಹಾಗೇ ಆತ್ಮೀಯರ ಸಲಹೆ, ಸಹಕಾರಗಳು ಮುನ್ನಡೆಗೆ ಸಾಧಕವಾಗಲಿದೆ. ಋಣ ಪರಿಹಾರದ ಚಿಂತೆ ನಿವಾರಣೆಯಾದೀತು. ಸಾಂಸಾರಿಕವಾಗಿ ಕಾಲೋಚಿತವಾದ ವರ್ತನೆ, ನಡೆನುಡಿ ನಿಮ್ಮ ಸ್ಥಾನಮಾನ, ವರ್ತನೆಯನ್ನು ವರ್ಧಿಸೀತು. ವ್ಯಾಪಾರಿ ವರ್ಗದವರಿಗೆ, ಬ್ಯಾಂಕಿಂಗ್ ಉದ್ಯಮಗಳಲ್ಲಿ ಶ್ರಮಕ್ಕೆ ತಕ್ಕುದಾದ ಆದಾಯ ಲಾಭದಾಯಕವಾಗಲಿದೆ. ಮನೆಯಲ್ಲಿ ಮಂಗಲ ಮಹೋತ್ಸವ ಸಂಭ್ರಮದ ಚಿಂತೆ ಕಾರ್ಯಗತವಾಗಲಿದೆ. ವಿದ್ಯಾರ್ಥಿಗಳ ಮನೋಕಾಮನೆ ಪೂರ್ಣವಾಗಲಿದೆ.ಶುಭವಾರ: ಬುಧ, ಗುರು, ಶನಿವಾರ
ಶುಭವಾರ: ಸೋಮ, ಗುರು, ಶುಕ್ರವಾರ ಮಿಥುನ: ಸಾರ್ಥಕತೆಯಿಂದ ಶತ್ರು ಭಯ ನಿವಾರಣೆಯಾದರೂ ಹಿತಶತ್ರುಗಳ ಬಾಧೆ ಬಿಡದು. ಆರ್ಥಿಕವಾಗಿ ಯಾರಿಗೂ ಸಾಲ ನೀಡದಿರಿ. ಆಗಾಗ ವ್ಯಯಾಧಿಕ್ಯವಾಗಿ ವ್ಯಾಪಾರಗಳಲ್ಲಿ ಹೊಸ ಹೂಡಿಕೆಯಿಂದ ಅಲ್ಪಸ್ವಲ್ಪ ಆದಾಯವನ್ನು ತಂದುಕೊಟ್ಟಿತು. ಪತ್ನಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದೀತು. ವೈಯಕ್ತಿಕವಾಗಿ ರಸಮಯ ಕ್ಷಣವಿದೆ. ನ್ಯಾಯಾಲಯದ ವಿವಾದಗಳು ಸದ್ಯಕ್ಕೆ ಮುಕ್ತಾಯಗೊಳ್ಳುವ ಲಕ್ಷಣಗಳು ತೋರಿಬರಲಾರದು. ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ನಿರಾಸೆ ತಂದೀತು.
ಶುಭವಾರ: ಮಂಗಳ, ಬುಧ, ಶುಕ್ರವಾರ
Related Articles
ಶುಭವಾರ: ಗುರು, ಶುಕ್ರ, ಶನಿವಾರ
Advertisement
ಸಿಂಹ: ನಿರೀಕ್ಷಿತ ಸ್ಥಾನವಲ್ಲದಿದ್ದರೂ ಸ್ಥಿತಿಗೆ ಮೋಸವಿಲ್ಲ. ಸಹೋದ್ಯೋಗಿಗಳೊಂದಿಗೆ ಅನಾವಶ್ಯಕ ನಿಷ್ಠುರಕ್ಕೆ ಕಾರಣರಾಗದಿರಿ. ಕಾಳಜಿ ವಹಿಸಿರಿ. ಕೈಗಾರಿಕೆ, ಬ್ಯಾಂಕಿಂಗ್ ಕ್ಷೇತ್ರ, ವೈಜ್ಞಾನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮುಂಭಡ್ತಿಯ ಯೋಗವಿದೆ. ಧನಭಾಗ್ಯ ವೃದ್ಧಿಯಾಗಲಿದೆ. ಶುಭಕಾರ್ಯದ ಸಮಾಲೋಚನೆಗಳು ಮನೆಯಲ್ಲಿ ನಡೆದಾವು. ನ್ಯಾಯಾಲಯದ ಕಡತಗಳ ವಿಲೇವಾರಿಯಲ್ಲಿ ವಿಳಂಬ ತೋರಿ ಬಂದರೂ ಸದ್ಯದಲ್ಲೇ ಮುಕ್ತಾಯ ಹಂತವನ್ನು ತಲುಪಲಿದೆ. ವಿದ್ಯಾರ್ಥಿಗಳು ಸಮಸ್ಯೆಗಳಿಂದ ಪಾರಾಗಿ ನೆಮ್ಮದಿ ಪಡೆಯಲಿದ್ದಾರೆ.ಶುಭವಾರ: ಸೋಮ, ಗುರು, ಭಾನುವಾರ ಕನ್ಯಾ: ಗೃಹದಲ್ಲಿ ಗೃಹಿಣಿಯ ಬೇಡಿಕೆಗೆ ಸ್ಪಂದಿಸಬೇಕಾದೀತು. ವೃತ್ತಿರಂಗದಲ್ಲಿ ಅಭಿವೃದ್ಧಿಯು ತೋರಿಬಂದರೂ ಆಗಾಗ ಮುಜು ಗರವನ್ನು ಅನುಭವಿಸುವಂತಾದೀತು. ಹೊಸ ಹೂಡಿಕೆಗೆ ಇದು ಸಕಾಲವಲ್ಲ. ಗೆಳೆತನದಲ್ಲಿ ವಿರಸ ಮೂಡೀತು. ವ್ಯರ್ಥ ದುರಭಿಮಾನಕ್ಕೆ ಒಳಗಾಗಿ ಉನ್ನತಿಯನ್ನು ಕಳೆದುಕೊಂಡೀರಿ. ಜಾಗ್ರತೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ಲಾಭದಿಂದ ಕೊಂಚ ಆಸರೆ ಕಂಡೀತು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಶಸ್ಸು, ಸಾಧನೆ ತರಲಿದೆ.
ಶುಭವಾರ: ಮಂಗಳ, ಗುರು, ಶನಿವಾರ ತುಲಾ: ಸ್ವತಂತ್ರ ಉದ್ಯೋಗಿಗಳು, ವ್ಯಾಪಾರಸ್ಥರು ಹೆಚ್ಚಿನ ಎಚ್ಚರಿಕೆಯಿಂದ ಇದ್ದರೆ ಮೂಲಧನ ಇಮ್ಮಡಿಯಾದೀತು. ಆಗಾಗ ತೋರಿಬರುವ ಕಾರ್ಯಸಾಧನೆಯ ಅಡ್ಡಿಯನ್ನು ನಿವಾರಿಸಿಕೊಳ್ಳಿರಿ. ಬೇಡಿಕೆ, ಈಡೇರಿಕೆಗಳ ತಾಕಲಾಟದಿಂದ ಕಿರಿಕಿರಿ ತಂದೀತು. ಕೌಟುಂಬಿಕವಾಗಿ ಆಕ್ಷೇಪ, ಭಿನ್ನಾಭಿಪ್ರಾಯದಿಂದ ಮನೋವ್ಯಾಕುಲ ಹೆಚ್ಚಲಿದೆ. ಹಿರಿಯರ ಸಲಹೆಗೆ ಕಿವಿಗೊಡಿರಿ. ಸಮಾಧಾನವಾಗಲಿದೆ. ಉದ್ಯೋಗಿಗಳಿಗೆ ವಾರಾಂತ್ಯದಲ್ಲಿ ಸ್ಥಾನ ಬದಲಾವಣೆ ಸೂಚನೆ ತಂದೀತು.
ಶುಭವಾರ: ಬುಧ, ಶುಕ್ರ, ಭಾನುವಾರ ವೃಶ್ಚಿಕ: ಹೊಸ ಯೋಜನೆಯ ಯೋಚನೆ ಕಾರ್ಯಗತವಾಗಲಿದೆ.ಅತಿಥಿ ಅಭ್ಯಾಗತರ ಆಗಮನದಿಂದ ಮನಸ್ಸಿಗೆ ಶಾಂತಿಯಿದೆ. ವಿವೇಚನೆಯಿಂದ ಕಾರ್ಯವೆಸಗಿರಿ. ಜಯ ನಿಮ್ಮ ಪಾಲಿಗಿದೆ. ಹಾಗೇ ಅದೃಷ್ಟ ಅನುಕೂಲವೂ ಇದೆ. ನೂತನ ಧನಾದಾಯದ ಮೂಲಕ ಧನಾಭಿವೃದ್ಧಿ ತಂದೀತು. ನೂತನ ವಸ್ತ್ರಾಭರಣ ಯಾ ನಿವೇಶನ ಖರೀದಿಯಿಂದ ಸಂತಸ ತಂದೀತು. ರಾಜಕೀಯ ರಂಗದಾಟದಲ್ಲಿ ದಾಳ ಉರುಳಿದ್ದೇ ಗೊತ್ತಾಗದು. ಸ್ವರ್ಣ, ಲೋಹ, ಗೃಹೋಪಕರಣಗಳ ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ.
ಶುಭವಾರ: ಸೋಮ, ಮಂಗಳ, ಬುಧವಾರ ಧನು: ಆರ್ಥಿಕವಾಗಿ ಆಗಾಗ ಹಿನ್ನಡೆ ತೋರಿಬಂದು ಸಮಸ್ಯೆಗಳು ಎದುರಾಗಲಿವೆ. ದುಡುಕು ನಿರ್ಧಾರದಿಂದ ಅನಾವಶ್ಯಕ ಕಿರಿಕಿರಿಯನ್ನು ಅನುಭವಿಸಲಿದ್ದೀರಿ. ಕಾಳಜಿ ವಹಿಸಿರಿ. ಕಾಲೋಚಿತವಾದ ನಡೆ-ನುಡಿ ನಿಮ್ಮ ಗಮನದಲ್ಲಿ ಇರಿಸಿಕೊಳ್ಳಿರಿ. ಕಾರ್ಯರಂಗದಲ್ಲಿ ಅವಿರತವಾಗಿ ಚಟುವಟಿಕೆ ದೇಹಾರೋಗ್ಯದಲ್ಲಿ ಪರಿಣಾಮ ತಂದೀತು. ಉದ್ಯೋಗಿಗಳಿಗೆ ವರ್ಗಾವಣೆಯಕಹಿಸುದ್ದಿ ಆತಂಕ ತಂದೀತು. ವಿದ್ಯಾರ್ಥಿಗಳಿಗೆ ಉದಾಸೀನತೆ ತೋರಿಬಂದು ಹಿನ್ನಡೆಯನ್ನು ಪಡೆಯುವಂತಾದೀತು.
ಶುಭವಾರ: ಬುಧ, ಗುರು, ಶುಕ್ರವಾರ ಮಕರ: ಆರ್ಥಿಕವಾಗಿ ನಿಮ್ಮ ಪರಿಸ್ಥಿತಿಯು ಸುಧಾರಿಸಿ ಹೋಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸಲಾಗುವುದಿಲ್ಲ. ಹಿರಿಯರ ಮಾತಿಗೆ ಬೆಲೆ ಇರಲಿ. ತಾಳ್ಮೆ, ಎಚ್ಚರಿಕೆಯಿಂದ ಹೊಸ ಕಾರ್ಯದಲ್ಲಿ ಹೆಜ್ಜೆ ಇರಿಸುವುದು ಅಗತ್ಯವಿದೆ. ಸಹೋದ್ಯೋಗಿಗಳ ದುವ್ಯವಹಾರ ಮುಂದಿನ ಅಭಿವೃದ್ಧಿಗೆ ಮಾರಕವಾದೀತು. ಎಚ್ಚರವಿರಲಿ. ಅವಿರತವಾದ ಸಂಚಾರ ದೇಹಾಯಾಸಕ್ಕೆ ಕಾರಣವಾಗಲಿದೆ. ಮನದಿನಿಯನ ಮನವರಿತು ನಡೆವ ಗೃಹಿಣಿಗೆ ಹಿಗ್ಗಿನ ಸುದ್ದಿ ಕಾದಿದೆ.
ಶುಭವಾರ: ಬುಧ, ಶುಕ್ರ, ಭಾನುವಾರ ಕುಂಭ: ಶುಭದ ಆಶಾಕಿರಣ ತೋರಿಬರಲಿದೆ. ಆರೋಗ್ಯಭಾಗ್ಯ ವರ್ಧಿಸಲಿದೆ. ಎಚ್ಚರಿಕೆಯಿಂದ ಹೆಜ್ಜೆ ಇರಿಸಿದಲ್ಲಿ ಖರ್ಚುವೆಚ್ಚವೂ ಸಮತೋಲನದಲ್ಲಿ ಇದ್ದೀತು. ಯಾತ್ರೆ, ಪ್ರವಾಸಧರ್ಮ ಕಾರ್ಯಗಳು ನಡೆದಾವು. ಅವಿವಾಹಿತರ ನೆಂಟಸ್ತಿಕೆಯ ವಿಚಾರದಲ್ಲಿ ಮಧ್ಯವರ್ತಿಗಳ ಸಹಕಾರದ ಅಗತ್ಯವಿದೆ. ಸ್ಥಗಿತಗೊಂಡ ಕಾರ್ಯಕ್ಕೆ ಪುನಃ ಚಾಲನೆ ದೊರೆತು, ಸಂತಸ ತಂದೀತು. ವಿದ್ಯಾರ್ಥಿಗಳ ಅಭ್ಯಾಸಬಲ ಸಫಲವಾದರೂ ಆಗಾಗ ಉದಾಸೀನತೆ ಕಾಡಲಿದೆ.
ಶುಭವಾರ: ಶುಕ್ರ, ಶನಿ, ಭಾನುವಾರ. ಮೀನ: ಎಡರುತೊಡರುಗಳಿದ್ದರೂ ಹಂತ ಹಂತವಾಗಿ ನವಚೈತನ್ಯ ಉಂಟಾಗಲಿದೆ. ಅತಿಥಿ ಅಭ್ಯಾಗತರ ಆಗಮನ, ನೆರೆಹೊರೆಯವರಿಂದ ದ್ವೇಷ ಸಾಧನೆ, ನೂತನ ಬಾಂಧವ್ಯ ವೃದ್ಧಿ ಮುಂತಾದ ಮಿಶ್ರಫಲ ತಂದೀತು. ಕಾರ್ಯರಂಗದಲ್ಲಿ ನಿಮ್ಮ ಕಾರ್ಯವೈಖರಿ ಇತರರಿಗೆ ಅಸೂಯೆಗೆ ದಾರಿ ಮಾಡೀತು. ವಿವಿಧ ಮೂಲಗಳಿಂದ ಧನಾಗಮನವಿದ್ದು ಆದಾಯಕ್ಕೆ ಕೊರತೆ ಬಾರದು. ಸಾಮರ್ಥ್ಯದಲ್ಲಿ ವಿಶ್ವಾಸವಿಡಿ.
ಶುಭವಾರ: ಸೋಮ, ಗುರು, ಶನಿವಾರ ಏನ್. ಎಸ್. ಭಟ್