Advertisement

ಪೌರಕಾರ್ಮಿಕರಿಗೆ ವಾರದ ರಜೆ

12:28 PM Dec 23, 2020 | Suhan S |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರಿಗೂ ವಾರಕ್ಕೆ ಒಂದು ದಿನ ರಜೆ, ರಾಷ್ಟ್ರೀಯ ರಜೆ ಹಾಗೂ ಹಬ್ಬದ ದಿನಗಳಲ್ಲಿ ರಜೆ ನೀಡುವ ನಿಟ್ಟಿನಲ್ಲಿ ಶೇ.16 ರಷ್ಟು ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಳ್ಳಲು ಕ್ರಮ ವಹಿಸುವಂತೆ ಕಾರ್ಮಿಕ ಇಲಾಖೆ ಬಿಬಿಎಂಪಿಗೆ ಸ್ಪಷ್ಟೀಕರಣ ನೀಡಿದೆ.

Advertisement

ನಗರದಲ್ಲಿ ಕಸ ವಿಲೇ ವಾರಿಯರ್ಸ್ ನಲ್ಲಿ ಜವಾಬ್ದಾರಿ ನಿರ್ವಹಿಸುತ್ತಿರುವ ಗುತ್ತಿಗೆ ದಾರರ ಬಿಲ್‌ ಪಾವತಿ ಮಾಡುವ ಸಂಬಂಧ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌, ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಡಿ.ರಂದೀಪ್‌ ಹಾಗೂ ಗುತ್ತಿಗೆದಾರರೊಂದಿಗೆ ಇತ್ತೀಚೆಗೆ ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ಆಂತರಿಕ ಸಭೆ ನಡೆಸಲಾಗಿದ್ದು, ವಿವಿಧ ವಿಚಾರ ಚರ್ಚೆ ಆಗಿದೆ.

ಕಾರ್ಮಿಕ ಇಲಾಖೆ ಪ್ರಕಾರ ವಾರಕ್ಕೆ ಒಂದು ದಿನ ರಾಷ್ಟ್ರೀಯ ರಜೆ, ಹಬ್ಬದ ರಜೆ ಸೇರಿ 10 ದಿನ ಕಡ್ಡಾಯ ರಜೆ ನೀಡಬೇಕಾಗುತ್ತದೆ. ಇದಕ್ಕಾಗಿ ಶೇ.16ಹೆಚ್ಚುವರಿ ಸಿಬ್ಬಂದಿನೇಮಕಮಾಡಿಕೊಳ್ಳುವ ಅವಶ್ಯಕತೆ ಇದೆ. ಅಲ್ಲದೆ, ಪ್ರತಿ ತಿಂಗಳು 10ರ ಒಳಗಾಗಿ ವೇತನ ಪಾವತಿ ಸೇರಿ ಹಲವು ಸಲಹೆ ನೀಡಿದೆ.

ಇದನ್ನೂ ಓದಿ : ಎಪಿಎಂಸಿ ನಷ್ಟ ಸರ್ಕಾರವೇ ಭರಿಸಲಿದೆ: ಸಚಿವ ಸೋಮಶೇಖರ್

ಈ ಆಧಾರದ ಮೇಲೆ ನಗರದಲ್ಲಿ ಶೇ.16 ಹೆಚ್ಚುವರಿ ಪೌರಕಾರ್ಮಿಕರು (ಚಾಲಕರು ಹಾಗೂ ಸಹಾಯಕ) ನೇಮಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಬಿಬಿಎಂಪಿ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಕಡ್ಡಾಯ ಜಿಪಿಎಸ್‌: ಎಲ್ಲಾ ಗುತ್ತಿಗೆದಾರರು ಆಟೋ ಟಿಪ್ಪರ್‌ ಹಾಗೂ ಕಾಂಪ್ಯಾಕ್ಟರ್‌ಗಳ ಮಾಹಿತಿ ಸಂಗ್ರಹ ಮಾಡಿ ಪಿಎಂಯು ಯೂನಿಟ್‌ನ ಮೂಲಕ ಆರ್‌ಎಫ್ಐಡಿ ಕಾರ್ಡ್‌ ವ್ಯವಸ್ಥೆ ಕಲ್ಪಿಸಬೇಕು. ಎಲ್ಲಾ ಆಟೋ ಟಿಪ್ಪರ್‌ ಹಾಗೂ ಕಾಂಪ್ಯಾಕ್ಟರ್‌ಗಳಿಗೆ ಜಿಪಿಎಸ್‌ ಅಳವಡಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಬಿಲ್‌ ತಡವಾಗಿ ಪಾವತಿ ಆಗುತ್ತಿರುವುದರಿಂದ ಕಾರ್ಮಿಕರಿಗೆ ಸಕಾಲದಲ್ಲಿ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಅಗತ್ಯ ಸೇವೆಗೂ ತೊಡಕಾಗಿದೆ ಎಂದು ಗುತ್ತಿಗೆದಾರರು ಸಭೆಯಲ್ಲಿ ದೂರಿದ್ದಾರೆ.

ಆಯುಕ್ತರ ಪ್ರಮುಖ ನಿರ್ದೇಶನ :

  • ಸಗಟು ತ್ಯಾಜ್ಯ ಉತ್ಪಾದಕರಿಂದ ಮನೆ-ಮನೆಕಸ ಸಂಗ್ರಹ ಮಾಡುವ ವಾಹನಕಸ ಸಂಗ್ರಹ ಮಾಡುವಂತಿಲ್ಲ. ಮಾಡಿದರೆ ಏಜೆನ್ಸಿಕಾರ್ಯಾದೇಶ ರದ್ದು.
  • ಜ.1ರಿಂದ ಜಿಪಿಎಸ್‌ ಹಾಜರಾತಿ ಇರುವ ವಾಹನಗಳಿಗೆ ಮಾತ್ರ ಬಿಲ್‌ ಪಾವತಿ, ಮ್ಯಾನುವಲ್‌ ಬಿಲ್‌ ಪಾವತಿ ಇಲ್ಲ.
  • 2021ರ ಜನವರಿಯಿಂದ ಹೊಸ ಟೆಂಡರ್‌ದಾರರಕಾರ್ಯಕ್ಷಮತೆ ಪರಿಶೀಲನೆ
  • ಭೂಭರ್ತಿ ಹಾಗೂ ಹಸಿಕಸ ಸಂಸ್ಕರಣಾ ಘಟಕಗಳಲ್ಲಿ ಸಂಜೆ 7 ಗಂಟೆವರೆಗೆ ಕಸ ವಿಲೇವಾರಿ ಮಾಡುವುದಕ್ಕೆ ಅವಕಾಶ
  • ಗುತ್ತಿಗೆದಾರರ ಸೇವಾ ತೆರಿಗೆ ಸಮಸ್ಯೆ ಪರಿಹರಿಸಲು ನೋಡಲ್‌ ಅಧಿಕಾರಿ ನೇಮಕಕ್ಕೆ ಕ್ರಮ
Advertisement

Udayavani is now on Telegram. Click here to join our channel and stay updated with the latest news.

Next