Advertisement

ವಾರಾಂತ್ಯ ರೈಲು ವಿಳಂಬ?

09:52 AM Jun 19, 2018 | Harsha Rao |

ಹೊಸದಿಲ್ಲಿ: ವಾರಾಂತ್ಯ ಅಥವಾ ರವಿವಾರ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಸೂಚನೆ. ಈ ಅವಧಿಯಲ್ಲಿಯೇ ರೈಲಿನ ಎಂಜಿನ್‌ ಮತ್ತು ಬೋಗಿಯ ದುರಸ್ತಿ ಕಾರ್ಯಗಳನ್ನು ನಡೆಸಲು ಭಾರತೀಯ ರೈಲ್ವೆ ತೀರ್ಮಾನಿಸಿದ್ದು, ಪ್ರಮುಖ ರೈಲುಗಳ ಸಂಚಾರದಲ್ಲಿ ವಿಳಂಬವಾಗುವ ಸಾಧ್ಯತೆಯಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಸೋಮವಾರ ತಿಳಿಸಿದ್ದಾರೆ.

Advertisement

ಊಟದ ಅವಧಿಯಲ್ಲಿ ರೈಲು ವಿಳಂಬ ವಾಗುವುದಿದ್ದರೆ ಪ್ರಯಾಣಿಕರಿಗೆ (ಟಿಕೆಟ್‌ ಕಾಯ್ದಿಟ್ಟಿದ್ದಂಥ) ಉಚಿತವಾಗಿ ಆಹಾರ ಮತ್ತು ನೀರು ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಆ.15ರಿಂದ ರೈಲುಗಳ ವೇಳಾಪಟ್ಟಿ  ಪುನಾರಚಿಸಿದ ಬಳಿಕ ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳನ್ನು ನಡೆಸಲಿದೆ ಎಂದಿದ್ದಾರೆ. ವಿಳಂಬವಿದ್ದಲ್ಲಿ ಪ್ರಯಾಣಿಕರಿಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದೂ ಹೇಳಿದ್ದಾರೆ.

ಬದಲಾಗಲಿದೆ ಬಣ್ಣ: ಸದ್ಯ ರೈಲ್ವೆ ಬೋಗಿಗಳು ಹೊಂದಿರುವ ಕಡು ನೀಲಿ ಬಣ್ಣ ಶೀಘ್ರದಲ್ಲಿಯೇ ಬದಲಾಗಲಿದೆ. ವಿಶೇಷವಾಗಿ ಎಕ್ಸ್‌ಪ್ರೆಸ್‌ ಮತ್ತು ಮೈಲ್‌ ರೈಲುಗಳ ಬೋಗಿಗಗಳು ಕಂದು ಮತ್ತು ಬೀಜ್‌ (ಬೂದು ಮತ್ತು ಹಳದಿ ಮಿಶ್ರಿತ ಬಣ್ಣ) ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ. ದಿಲ್ಲಿ-ಪಠಾಣ್‌ಕೋಟ್‌ ರೈಲಿಗೆ ಪ್ರಾಯೋಗಿಕವಾಗಿ ಹೊಸ  ಬಣ್ಣ ನೀಡಲಾಗಿದೆ. ರಾಜಧಾನಿ, ಶತಾಬ್ದಿ ಮತ್ತು ತುರಂತೊಂ ರೈಲುಗಳ ಬಣ್ಣ ಬದಲಿಸದಿರಲು ನಿರ್ಧರಿಸಲಾಗಿದೆ. ಚೆನ್ನೈಯಲ್ಲಿ ಉತ್ಪಾದಿಸ ಲಾಗುವ ಬೋಗಿಗಳಿಗೆ ಹೊಸ ಬಣ್ಣ ಬಳಿಯಲಾಗುತ್ತದೆ. ಈಗಿನ ಕಡು ನೀಲಿ ಬಣ್ಣವನ್ನು 1990ರಲ್ಲಿ ಜಾರಿಗೆ ತರಲಾಗಿತ್ತು. ಇದಕ್ಕಿಂತ ಮೊದಲು ಇಟ್ಟಿಗೆ ಕೆಂಪು ಬಣ್ಣ ಹೊಂದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next