Advertisement

ಡಿ.ಟಿ.ಎಸ್‌ನಲ್ಲಿ “ವೀಕೆಂಡ್‌’

05:35 AM Feb 13, 2019 | |

ಮಂಜುನಾಥ್‌ ಡಿ ಅವರು ನಿರ್ಮಿಸುತ್ತಿರುವ “ವೀಕ್‌ ಎಂಡ್‌’ ಚಿತ್ರದ ರೀರೆಕಾರ್ಡಿಂಗ್‌ ಪೂರ್ಣಗೊಂಡಿದ್ದು, ಸದ್ಯ ಬಾಲಾಜಿ ಡಿಜಿಟಲ್‌ ಸ್ಟುಡಿಯೋದಲ್ಲಿ ಡಿ.ಟಿ.ಎಸ್‌ ಅಳವಡಿಸಲಾಗುತ್ತಿದೆ. ಸದ್ಯದಲ್ಲೇ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಲಿದೆ. 

Advertisement

ಶೃಂಗೇರಿ ಸುರೇಶ್‌ ನಿರ್ದೇಶ‌ನದ ಈ ಚಿತ್ರಕ್ಕೆ ಶಶಿಧರ್‌ ಅವರ ಛಾಯಾಗ್ರಹಣದೆ. ಮನೋಜ್‌ ಸಂಗೀತ ನಿರ್ದೇಶನ, ರುದ್ರೇಶ್‌ ಸಂಕಲನ, ಬಾಬು ಖಾನ್‌ ಕಲಾ ನಿರ್ದೇಶನ, ಮಂಜುನಾಥ್‌ ಜಂಬೆ ಸಹ ನಿರ್ದೇಶನ ಹಾಗೂ ರಾಮು, ಯೋಗಾನಂದ್‌ ನಿರ್ಮಾಣ ನಿರ್ವಹಣೆ ಇದೆ. 

ಮಿಲಿಂದ್‌ ಅವರು ನಾಯಕನಾಗಿರುವ ಈ ಚಿತ್ರದ ನಾಯಕಿ ಸಂಜನಾ ಬುರ್ಲಿ. ಹಿರಿಯ ನಟ ಅನಂತನಾಗ್‌, ಗೋಪಿನಾಥ್‌ ಭಟ್‌, ಮಂಜುನಾಥ್‌, ನಾಗಭೂಷಣ್‌, ನೀನಾಸಂ ರಘು, ನವನೀತ್‌, ನಟನ ಪ್ರಶಾಂತ್‌, ನೀತು ಬಾಲಾ, ಬ್ಯಾಂಕ್‌ ಸತೀಶ್‌, ಶಿವಕುಮಾರ್‌, ಸಂಜಯ್‌ ನಾಗೇಶ್‌, ಮಂಜುನಾಥ್‌ ಶಾಸ್ತ್ರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next