Advertisement

ಇಂದಿನ ಗ್ರಹಫಲ: ಈ ವಾರಾಂತ್ಯ ಯಾರಿಗೆ ಶುಭ-ಯಾರಿಗೆ ಲಾಭ?

08:27 AM Sep 04, 2021 | Team Udayavani |

04-09-2021

Advertisement

ಮೇಷ: ಅನಿರೀಕ್ಷಿತ ಧನ ಸಂಪತ್ತು ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಪರರಿಂದ ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಬರುವುದು. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಉತ್ತಮ ಜವಾಬ್ದಾರಿಯುತ ವಾಕ್‌ ಚತುರತೆ.

ವೃಷಭ: ದೂರದ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗುರಿ ಸಾಧನೆಯಿಂದ ನೆಮ್ಮದಿ. ಉತ್ತಮ ಧನಾರ್ಜನೆ. ಬಂಧುಮಿತ್ರರ ಸಹಕಾರ. ದಾಂಪತ್ಯದಲ್ಲಿ ಪ್ರೀತಿ ಅನುರಾಗ ವೃದ್ಧಿ. ಆಸ್ತಿ ವಿಚಾರಗಳಲ್ಲಿ ಪರಿಶ್ರಮದಿಂದ ಮುನ್ನಡೆ.

ಮಿಥುನ: ಆರೋಗ್ಯ ಗಮನಿಸಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ದೂರದ ವ್ಯವಹಾರಗಳಲ್ಲಿ, ಪಾಲು ದಾರಿಕಾ ವೃತ್ತಿಯಲ್ಲಿ ಪ್ರಗತಿ. ನಿರೀಕ್ಷಿತ ಧನಾಗಮನ. ಸಾಂಸಾರಿಕ ಸುಖವೃದ್ಧಿ. ಮಕ್ಕಳ ನಿಮಿತ್ತ ಶ್ರಮ.

ಕರ್ಕ: ಸಣ್ಣ ಪ್ರಯಾಣ ಸಂಭವ. ನಿರೀಕ್ಷೆಗೂ ಮೀರಿದ ಧನಾರ್ಜನೆ. ಮನಃಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಾನ ಗೌರವ ವೃದ್ಧಿ. ಅಧಿಕಾರಯುತ ನಡೆಯಿಂದ ಸಫ‌ಲತೆ. ಬಂಧುಮಿತ್ರರ ಸಹಾಯ ಸಹಕಾರ ಲಭ್ಯ.

Advertisement

ಸಿಂಹ: ಆರೋಗ್ಯ ಸುಧಾರಣೆ. ಆಲೋಚಿಸಿದ ರೀತಿಯಲ್ಲಿ ಕಾರ್ಯ ವೃದ್ಧಿಯಾದುದರಿಂದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಜನಮನ್ನಣೆ, ಗೌರವ ಪ್ರಾಪ್ತಿ. ಮಾತಿನಲ್ಲಿ, ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ನಷ್ಟ ಸಂಭವ.

ಕನ್ಯಾ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ, ನೇತೃತ್ವ. ಗುರು ಹಿರಿಯರ ಸಲಹೆ ಸಹಕಾರ ಆಶೀರ್ವಾದ ಪ್ರಾಪ್ತಿ. ಧನಾರ್ಜನೆಗೆ ಸರಿಸಮನಾಗಿ ಧನವ್ಯಯ ತೋರೀತು. ಮಕ್ಕಳಿಂದ ತೃಪ್ತಿ. ಆಸ್ತಿ ವಿಚಾರಗಳಲ್ಲಿ ಉತ್ತಮ ಬದಲಾವಣೆ ಸಂಭವ.

ತುಲಾ:ಧನಾಗಮನದನಿರೀಕ್ಷೆ ವಿಳಂಬತೆಯಿಂದ ಪ್ರಾಪ್ತಿ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿ ಸಲ್ಲದು. ಬಂಧುಮಿತ್ರರ ಜವಾಬ್ದಾರಿ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಶ್ರೇಯಸ್ಸು . ಗುರುಹಿರಿಯರ ಸಹಕಾರ.

ವೃಶ್ಚಿಕ: ದೂರ ಪ್ರಯಾಣ. ಬಹುಜನರ ಒಡನಾಟದಿಂದ ಸಂತೋಷ. ಹೆಚ್ಚಿದ ವರಮಾನ. ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ಉತ್ತಮ ಬದಲಾವಣೆ. ಗುರುಹಿರಿಯರ ಪ್ರೀತಿ ಆಶೀರ್ವಾದ ಪ್ರಾಪ್ತಿ. ಗೃಹದಲ್ಲಿ ಸಂತಸದ ವಾತಾವರಣ.

ಧನು: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಪ್ರಗತಿ. ಹೆಚ್ಚಿದ ಜವಾಬ್ದಾರಿ. ದೈಹಿಕ ಆರೋಗ್ಯ ಸುದೃಢವಾಗಿದ್ದರೂ ಮಾನಸಿಕ ಚಿಂತೆ ತೋರಿಬಂದೀತು. ಗುರುಹಿರಿಯರ ಬಗ್ಗೆ ಗಮನವಿರಲಿ.

ಮಕರ: ಸಮಯ ಸಂದರ್ಭಕ್ಕೆ ಸರಿಯಾಗಿ ವ್ಯವಹಾರ ಕುಶಲತೆ. ಹೆಚ್ಚಿದ ಧನಾಗಮನ. ಬಂಧುಮಿತ್ರರ ಸಹಕಾರ. ಉದ್ಯೋಗ ವ್ಯವಹಾರದಲ್ಲಿ ಅನಿರೀಕ್ಷಿತ ಯಶಸ್ಸು. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ದಾಂಪತ್ಯ ಸುಖಕರ.

ಕುಂಭ: ಆಸ್ತಿ ವ್ಯವಹಾರಗಳಲ್ಲಿ ತಲ್ಲೀನತೆ. ನಿರೀಕ್ಷಿತ ಫ‌ಲಿತಾಂಶ ಸಂಭವ. ಉತ್ತಮ ಧನಸಂಪತ್ತು ವೃದ್ಧಿ. ವಾಕ್‌ಚತುರತೆಯಿಂದ ಜನಮನ್ನಣೆ. ಬಂಧುಮಿತ್ರರ ಸಹಾಯ ಸಹಕಾರ. ಗೃಹದಲ್ಲಿ ಸಂತಸದ ಸಂಭ್ರಮ.

ಮೀನ: ಹಠ ಮಾಡದೇ ವಿವೇಕದಿಂದ ಕಾರ್ಯ ಪ್ರವೃತ್ತರಾಗಿ. ಯಶಸ್ಸು ಗಳಿಸಿ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ದೇಹಾಯಾಸ ಆಗದಂತೆ ಎಚ್ಚರ ವಹಿಸಿ. ನಿರೀಕ್ಷಿತ ಧನಾಗಮನ. ಮಕ್ಕಳಿಂದ ತೃಪ್ತಿ. ದಾಂಪತ್ಯ ಸುಖಕರ.

ಜಯತೀರ್ಥ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next