Advertisement
ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 6ರ ವರೆಗೆ ಅಗತ್ಯ ವಸ್ತುಗಳು, ಸೇವೆ ಗಳಿಗೆ ನಿಗದಿತ ಸಮಯ ಮತ್ತು ಕೆಲವು ವಲಯಗಳಿಗೆ ವಿನಾಯಿತಿ ನೀಡಿ ರುವುದು ಹೊರತುಪಡಿಸಿದರೆ ಬೇರೆ ವ್ಯಾಪಾರ-ವಹಿವಾಟಿಗೆ ಅನುಮತಿ ಇಲ್ಲ. ಹೀಗಾಗಿ ಬಹುತೇಕ ರಾಜ್ಯ ಬಂದ್ ಆಗಲಿದೆ.
Related Articles
ಸಿಎಂ ಯಡಿಯೂರಪ್ಪ ಅವರು ವಾರಾಂತ್ಯದ ಕರ್ಫ್ಯೂ ಸಂಬಂಧ ಪ್ರಮುಖ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿಗಳ ಜತೆ ಶುಕ್ರವಾರ ಬೆಳಗ್ಗೆ ಸಭೆ ನಡೆಸಿದರು. ಅನಂತರ ಎಲ್ಲ ಜಿಲ್ಲೆಗಳಲ್ಲೂ ವಾರಾಂತ್ಯ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ ಗಳಿಗೆ ನಿರ್ದೇಶನ ನೀಡಲಾಯಿತು.
Advertisement
ಸಿಎಂ ನಿರ್ದೇಶನ ಬೆನ್ನಲ್ಲೇ ಎಲ್ಲ ಜಿಲ್ಲೆಗಳಲ್ಲೂ ಶುಕ್ರವಾರ ಸಂಜೆ ಯಿಂದಲೇ ವಾರಾಂತ್ಯ ಕರ್ಫ್ಯೂ ಜಾರಿಗೆ ಮುಂದಾದ ಪೊಲೀಸ್ ಇಲಾಖೆ ರಾತ್ರಿ 9 ಗಂಟೆ ವೇಳೆಗೆ ಅಂಗಡಿ ಮುಂಗಟ್ಟು ಮುಚ್ಚಿಸಿತು. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಪ್ರವೇಶ ನಿರ್ಬಂಧ ಮಾಡಿತು.
ಶನಿವಾರ ಮತ್ತು ರವಿವಾರ ಮಾಲ್ ಗಳು ಸಂಪೂರ್ಣ ಬಂದ್ ಇರ ಲಿದ್ದು, ಮಾರುಕಟ್ಟೆಗಳಲ್ಲೂ ಜನ ದಟ್ಟಣೆ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ಅಂತಾರಾಜ್ಯ ಮತ್ತು ಜಿಲ್ಲಾ ಗಡಿಗಳಲ್ಲಿ ಬಿಗಿ ಕ್ರಮ ಕೈಗೊಂಡಿದ್ದು ಜನರ ಸಂಚಾರಕ್ಕೆ ತಡೆ ಹಾಕಲಾಗಿದೆ. ಎರಡು ದಿನಗಳ ಕಾಲ ಗಡಿ ಭಾಗದಲ್ಲಿ ನಿಗಾ ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.
ವಿನಾಯಿತಿಕೈಗಾರಿಕೆಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿ ರಾಜ್ಯ ಸರಕಾರ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದ್ದು, ಯಾವ್ಯಾವ ವಲಯಗಳು ಕಾರ್ಯ ನಿರ್ವ ಹಿಸಲಿವೆ ಎಂಬು ದರ ಬಗ್ಗೆ ಮಾಹಿತಿ ನೀಡಿದೆ. ಕೈಗಾರಿಕೋದ್ಯಮಿಗಳ ಮನವಿ ಮೇರೆಗೆ ಈ ಅಧಿಸೂಚನೆ ಹೊರಡಿಸಲಾಗಿದೆ. ಅಗತ್ಯ ಕೈಗಾರಿಕೆ ಸೇವೆಗೆ ಅವಕಾಶ
ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಅಗತ್ಯ, ತುರ್ತು ಸೇವೆಗೆ ಸಂಬಂಧಪಟ್ಟ ಕೈಗಾರಿಕಾ ಚಟುವಟಿಕೆ ಗಳಿಗೆ ಮಾತ್ರ ದಿನದ 24 ತಾಸು ಕಾರ್ಯ ನಿರ್ವ ಹಿಸಲು ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಮಾರ್ಗಸೂಚಿ ಹೊರಡಿಸಲಾಗಿದೆ. ಓಡಾಟಕ್ಕೂ ತಡೆ
ವಾರಾಂತ್ಯ ಕರ್ಫ್ಯೂ ವೇಳೆ ಅನಗತ್ಯ ಓಡಾಟಕ್ಕೆ ತಡೆ ಹಾಕಲಾಗಿದ್ದು, ಕೊರೊನಾ ಸಹಿತ ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆ ಗಳಲ್ಲಿ ದಾಖಲಾಗಿರುವವರ ಕುಟುಂಬ ಸದಸ್ಯರು ಸಂಬಂಧ ಪಟ್ಟ ದಾಖಲೆ ತೋರಿಸಿ ಓಡಾಡ ಬಹುದು. ಬಸ್ ಮತ್ತು ರೈಲು ಸಂಚಾರಕ್ಕೆ ಟಿಕೆಟ್ ತೋರಿಸಿ ಓಡಾಡಬಹುದು. ಪ್ರಯಾಣ ನಿರ್ಬಂಧ
ಅಂತಾರಾಜ್ಯ ರೈಲುಗಳ ವೈಟಿಂಗ್ ಲಿಸ್ಟ್ ಟಿಕೆಟ್ ಪಡೆದಿರುವ ಪ್ರಯಾಣಿಕರು ರೈಲು ಏರುವುದನ್ನು ನಿರ್ಬಂಧಿಸಲಾಗಿದೆ. ಅಂತಹ ಪ್ರಯಾಣಿಕರು ರೈಲು ನಿಲ್ದಾಣಗಳಿಗೆ ಆಗಮಿಸದಂತೆ ಸೂಚಿಸಲಾಗಿದೆ. ರೈಲಿನ ನಿಗದಿತ ನಿರ್ಗಮನದ 30 ನಿಮಿಷ ಮುಂಚಿತವಾಗಿ ಟಿಕೆಟ್ ರದ್ದುಗೊಳಿಸಿ ಹಣ ಮರುಪಾವತಿ ಪಡೆಯಬಹುದು ಎಂದು ರೈಲ್ವೇ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ. ಏನೇನು ಇರುತ್ತದೆ?
– ಹಾಲು, ತರಕಾರಿ, ಹಣ್ಣು, ದಿನಸಿ ಅಂಗಡಿ: (ಬೆಳಗ್ಗೆ 6ರಿಂದ 10.)
– ದಿನಪತ್ರಿಕೆ ಸಾಗಣೆ ಮತ್ತು ವಿತರಣೆ
– ಹೋಟೆಲ್, ಬಾರ್ ಆ್ಯಂಡ್ ರೆಸ್ಟೋ ರೆಂಟ್: (ಪಾರ್ಸೆಲ್ ಮಾತ್ರ.)
– ಆಹಾರ ಸಂಸ್ಕರಣೆ ಘಟಕ, ಶೈತ್ಯಾಗಾರ, ಉಗ್ರಾಣ, ಕೈಗಾರಿಕೆ
– ವಿಮಾ ಕಚೇರಿ, ಎಟಿಎಂ
– ಇ-ಕಾಮರ್ಸ್ ಸೇವೆ
– ಸಲೂನ್, ಬ್ಯೂಟಿ ಪಾರ್ಲರ್
– ನಿರ್ಮಾಣ ಸಾಮಗ್ರಿ
– ಕಟ್ಟಡ ನಿರ್ಮಾಣ ಚಟುವಟಿಕೆ: ಕಾರ್ಮಿಕರು ಸ್ಥಳದಲ್ಲೇ ಇರ ಬೇಕು. ಹೊರಗಿಂದ ಬರುವಂತಿಲ್ಲ. ವಾರಾಂತ್ಯ ಕರ್ಫ್ಯೂ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಜನತೆ ಸಹಕಾರ ನೀಡುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಜತೆಗೂಡಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳು ವಾರಾಂತ್ಯ ಕರ್ಫ್ಯೂ ಮಾರ್ಗಸೂಚಿ ಪಾಲನೆಗೆ ಗಮನಹರಿಸಬೇಕು.
– ಬಿ.ಎಸ್. ಯಡಿಯೂರಪ್ಪ , ಸಿಎಂ