ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ನಗರಪ್ರದೇಶ ವ್ಯಾಪ್ತಿಯಲ್ಲಿ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದ್ದು, ಎರಡನೆಯ ದಿನವೂ ನಗರದಲ್ಲಿ ಯಾವುದೇ ಚಟುವಟಿಕೆಗಳು ನಡೆಯಲಿಲ್ಲ.
ವೀಕೆಂಡ್ ಕರ್ಪ್ಯೂ ನಿಮಿತ್ತವಾಗಿ ಬನಹಟ್ಟಿಯ ಶನಿವಾರ ಸಂತೆಯನ್ನು ರದ್ದುಗೊಳಿಸಲಾಗಿತ್ತು. ಭಾನುವಾರ ಬೆಳಗ್ಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಕೆಲವೇ ಕೆಲವು ಜನ ತರಕಾರಿ ಮಾರುವವರು ಮಾರಾಟಕ್ಕೆ ಆಗಮಿಸಿದ್ದರು. ಖರೀದಿಸುವವರ ಸಂಖ್ಯೆಯೂ ಕಡಿಮೆ ಇತ್ತು. ಕಿರಾಣಿ ಅಂಗಡಿಗಳು, ಹೊಟೇಲ್‌ಗಳು, ಚಲನಚಿತ್ರ ಮಂದಿರಗಳು ಎರಡು ದಿನಗಳ ಕಾಲ ಸಂಪೂರ್ಣವಾಗಿ ಬಂದಾಗಿದ್ದವು.
ನಗರದ ಅಸ್ಪತ್ರೆಗಳು, ಔಷಧಿ ಅಂಗಡಿಗಳು, ಹಾಲಿನ ಅಂಗಡಿಗಳು ತೆರೆದಿದ್ದವು. ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸ್‌ರ ಕಣ್ಗಾವಲು ಇತ್ತು. ಶನಿವಾರ ವೀಕೆಂಡ ಕರ್ಪ್ಯೂ ಬಿಗಿಯಾಗಿದ್ದರೆ. ಭಾನುವಾರ ಸ್ವಲ್ಪ ಪ್ರಮಾಣದಲ್ಲಿ ಸಡಿಲಗೊಂಡಿತ್ತು.
ಭಾನುವಾರ ಸಾರ್ವಜನಿಕರ ಅನಗತ್ಯ ಓಡಾಟ ಹೆಚ್ಚಾಗಿತ್ತು. ಟಂಟAಗಳು ರಸ್ತೆಗಿಳಿದ್ದವು. ಮಾರುಕಟ್ಟೆಯಲ್ಲಿ ಸಾರ್ವಜನಿಕರು ಅಂಗಡಿಗಳ ಮುಂದಿ ಗುಂಪು ಗುಂಪಾಗಿ ಕುಳಿತುಕೊಂಡಿರುವುದು ಕಂಡು ಬಂದಿತು. ಎಂದಿನಂತೆ ಬಸ್ ಓಡಾಟವಿದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.
ತಹಶೀಲ್ದಾರ್ ಸಂಜಯ ಇಂಗಳೆ, ಸಿಪಿಐ ಜೆ.ಕರುಣೇಶಗೌಡ, ಪೌರಾಯುಕ್ತ ಶ್ರೀನಿವಾಸ ಜಾಧವ, ಪಿಎಸ್‌ಐ ಸುರೇಶ ಮಂಟೂರ ನಗರದ ಪ್ರಮುಖ ಬೀದಿಗಳಲ್ಲಿ ವೀಕೆಂಡ್ ಕರ್ಫ್ಯೂ ಕುರಿತು ವೀಕ್ಷಣೆ ಮಾಡಿದರು.