ಕಲಬುರಗಿ: ಕೊರೊನಾ ಮೂರನೇ ಅಲೆ ನಿಯಂತ್ರಣ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಿಕೆಂಡ್ ಕಪ್ಯೂ೯ ಪಾಲಿಸುವುದಿಲ್ಲ. ಎಂದಿನಂತೆ ವ್ಯಾಪಾರ ವಹಿವಾಟು ನಡೆಸುತ್ತೇವೆ ಎಂದು ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (HKCCI) ಹಾಗೂ ವಿವಿಧ ವ್ಯಾಪಾರದ ಸಂಘಗಳು ಜಂಟಿಯಾಗಿ ಎಚ್ಚರಿಕೆ ನೀಡಿವೆ.
ಚುನಾವಣೆ ನಡೆಯುತ್ತವೆ, ರಾಜಕೀಯ ಸಭೆಗಳು ನಡೆಯುತ್ತವೆ ಬ್ಯಾಂಕ್ ಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಮದುವೆ ಇನ್ನಿತರ ಕಾರ್ಯಕ್ರಮಗಳು ನಡೆಯಲು ಅನುಮತಿಯಿದೆ. ಆದರೆ ಬರೀ ಸಣ್ಣ ಪುಟ್ಟ ವ್ಯಾಪಾರ, ವ್ಯವಹಾರ ಕ್ಕೆ ವಾರಾಂತ್ಯ ಕಪ್ಯೂ೯ ಕಲಬುರಗಿ ಜಿಲ್ಲೆಯಲ್ಲಿ ಜಾರಿಗೆ ತರುವುದು ಅವೈಜ್ಞಾನಿಕ ಹಾಗೂ ಸಮಂಜಸವಾಗಿದೆ. ಅದಲ್ಲದೇ ಪಾಸಿಟಿವಿಟಿ ಪ್ರಮಾಣವು ಬಹಳ ಕಡಿಮೆಯಿದೆ. ಹೀಗಾಗಿ ಮುಂಬರುವ ವಾರಾಂತ್ಯ ಕಪ್ಯೂ೯ ಸಂಪೂರ್ಣ ವಾಗಿ ಕಾರ್ಯನಿರ್ವಹಿಸುವುದರ ಮುಖಾಂತರ ಜತೆಗೇ ಇತರ ಹೋರಾಟ ಕೈಗೊಳ್ಳುವುದರ ನಿಟ್ಟಿನಲ್ಲಿ ಸರ್ಕಾರಕ್ಕೆ ಸವಾಲು ಹಾಕುತ್ತೇವೆ ಎಂದು ಎಚ್ಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ್, ಗೌರವ ಕಾರ್ಯದರ್ಶಿ ಶರಣ ಬಸಪ್ಪ ಎಂ ಪಪ್ಪಾ, ಸರಾಫ್ ಬಜಾರ್ ಸಂಘದ ಅಧ್ಯಕ್ಷ ರಾಘವೇಂದ್ರ ಮೈಲಾಪುರ, ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಣ ನರಸಿಂಹ್ ಮೆಂಡನ್, ಬಟ್ಟೆ ಮಾರಾಟ ಸಂಘದ ಕಾರ್ಯದರ್ಶಿ ಆನಂದ ದಂಡೋತಿ ಹೇಳಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆಯ ಮಹಾರಾಷ್ಟ್ರ ದಲ್ಲೇ ಕಪ್ಯೂ೯ ಜಾರಿ ಇಲ್ಲ. ಅದಲ್ಲದೇ ರೈಲು, ಬಸ್ ಗಳ ಮೂಲಕ ಸರಳವಾಗಿ ಮಹಾರಾಷ್ಟ್ರ ದಿಂದ ಬರಲಾಗುತ್ತಿದೆ. ಚೆಕ್ ಪೋಸ್ಟ್ ನಲ್ಲಿ ಪ್ರವೇಶಾತಿಗೆ ಯಾವುದೇ ನಿರ್ಬಂಧ ಇಲ್ಲ.
ಇದನ್ನೂ ಓದಿ :ವಾಯುಭಾರ ಕುಸಿತ : ಆ.29, 30ರಂದು ರಾಜ್ಯದ ಆರು ಜಿಲ್ಲೆಗಳಿಗೆ ಹೈ ಅಲರ್ಟ್
ಕಳೆದ ಎರಡು ವರ್ಷಗಳಿಂದ ವ್ಯಾಪಾರ ಇಲ್ಲದಿದ್ದಕ್ಕೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಅಂಗಡಿ ಮುಂಗಟ್ಟುಗಳ ಬಾಡಿಗೆ ಹಾಗೂ ವಿದ್ಯುತ್ ಬಿಲ್ ಕಟ್ಟಲಿಕ್ಕಾಗುತ್ತಿಲ್ಲ. ವ್ಯಾಪಾರ ನಡೆಯೋದೇ ಶನಿವಾರ ಹಾಗೂ ರವಿವಾರ ಈ ಎರಡು ದಿನ ಬಂದ್ ಮಾಡಿದರೆ ನಷ್ಟ ವ್ಯಾಪಾರೀಗಳಿಗೆ ಆಗುತ್ತದೆ. ಒಂದು ವೇಳೆ ಕಪ್ಯೂ೯ ಜಾರಿ ಮಾಡುವುದಾದರೆ ಸೋಮವಾರ, ಮಂಗಳವಾರ ಈ ಎರಡು ದಿನ ಸಂಪೂರ್ಣ ಬಂದ್ ಮಾಡಲಿ. ಎಲ್ಲವೂ ಕಾರ್ಯನಿರ್ವಹಿಸಿ ಬರೀ ಸಣ್ಣ ಪುಟ್ಟ ವ್ಯಾಪಾರಕ್ಕೆ ಬ್ರೇಕ್ ಹಾಕಿರುವುದು ಯಾವ ನ್ಯಾಯ. ಕೊವಿಡ್ ನಿಯಂತ್ರಣಕ್ಕೆ ಬೆಂಬಲವಿದೆ. ಆದರೆ ಎಲ್ಲವೂ ಸುಗಮವಾಗಿ ನಡೆದು ತಮಗಷ್ಟೇ ನಿಬಂ೯ಧ ಹಾಕುತ್ತಿರುವುದು ಅನ್ಯಾಯ ಹಾಗೂ ಶೋಷಣೆಯ ಪರಮಾವಧಿಯಾಗಿದೆ. ಪೊಲೀಸ್ ಅವರು ತಮ್ಮನ್ನು ಅತ್ಯಂತ ಕೆಟ್ಟ ದ್ದಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ವ್ಯಾಪಾರೀಗಳು ಅಳಲು ತೋಡಿಕೊಂಡರು.
ಲಾಕ್ ಡೌನ್ ವೇಳೆಯಲ್ಲಿ ರಾಜ್ಯದ ಯಾವುದೇ ನಗರ ಹಾಗೂ ಜಿಲ್ಲೆಯಲ್ಲಿ ಹಾಕಲಾಗದ ಕೆಎಡಿ ಕಾಯ್ದೆಯಡಿ 374 ವ್ಯಾಪಾರಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈಗ ಪೊಲೀಸರು ಜಾಮೀನು ಪಡೆದುಕೊಳ್ಳಿ ಎಂದು ಒತ್ತಡ ಹಾಕುತ್ತಿದ್ದಾರೆ. ಇದನ್ನೆಲ್ಲ ನೋಡುವಾಗ ವಿಷ ಕುಡಿದು ಸಾಯಬೇಕೆನಿಸುತ್ತಿದೆ ಎಂದು ನೋವು ತೋಡಿಕೊಂಡರು. ಎಚ್ಕೆಸಿಸಿಐ ಪದಾಧಿಕಾರಿಗಳು ಹಾಜರಿದ್ದರು.