Advertisement

ವಾರದ ಬಳಿಕ ಸೂಟ್ ಕೇಸ್ ನೊಳಗೆ ಪತ್ತೆಯಾಯ್ತು ಬಾಲಕಿಯ ಮೃತದೇಹ : ಕೊಲೆ ರಹಸ್ಯ ನಿಗೂಢ

01:06 PM Sep 03, 2022 | Team Udayavani |

ಮುಂಬಯಿ : ವಾರದ ಹಿಂದೆ ನಾಪತ್ತೆಯಾಗಿದ್ದ ಶಾಲಾ ಬಾಲಕಿಯ ಶವ ಬಟ್ಟೆಯಲ್ಲಿ ಸುತ್ತಿ ಸೂಟ್ ಕೇಸ್ ನೊಳಗೆ ತುಂಬಿಸಿದ್ದ ರೀತಿಯಲ್ಲಿ ಫಾಲ್ಗರ್ ಜಿಲ್ಲೆಯ ವಾಲಿವ್ ಪ್ರದೇಶದಲ್ಲಿ ರಸ್ತೆಯ ಬದಿಯಲ್ಲಿ ಪತ್ತೆಯಾಗಿದೆ.

Advertisement

ಮಹಾರಾಷ್ಟ್ರದ ಅಂದೇರಿಯ ಹದಿನಾಲ್ಕು ವರ್ಷದ ಬಾಲಕಿ ಆಗಸ್ಟ್ 25 ರಂದು ನಾಪತ್ತೆಯಾಗಿದ್ದಳು ಈ ಕುರಿತು ಬಾಲಕಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು ಆದರೆ ಘಟನೆ ನಡೆದು ವಾರದ ಬಳಿಕ ಬಾಲಕಿಯ ಶವ ರಸ್ತೆ ಬದಿಯಲ್ಲಿ ಸಿಕ್ಕಿದ ಸೂಟ್ ಕೇಸ್ ನೊಳಗೆ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಕಿಯ ಕೊಲೆ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ರಾತ್ರಿ ಗುಜರಾತ್ ನಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆಯ ಹಿಂದಿನ ಸತ್ಯಾಸತ್ಯತೆ ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಾಗಿದೆ.

ಇದನ್ನೂ ಓದಿ : ಕಾಂಗ್ರೆಸ್ ಬಿಟ್ಟ ಮುದ್ದಹನುಮೇಗೌಡರ ಬಿಜೆಪಿ ಸೇರ್ಪಡೆ ಬಹುತೇಕ ಫಿಕ್ಸ್!

Advertisement
Advertisement

Udayavani is now on Telegram. Click here to join our channel and stay updated with the latest news.

Next