Advertisement

ಶಾಸಕರು ಕೈತಪ್ಪದಂತೆ ಬುಧವಾರ ಮಹತ್ವದ ಸಭೆ

01:04 AM Jul 15, 2019 | Team Udayavani |

ಭೋಪಾಲ: ಕರ್ನಾಟಕ ಮತ್ತು ಗೋವಾದ ಬೆಳವಣಿಗೆಗಳಿಂದ ಭೀತಿಗೊಂಡಿರುವ ಮಧ್ಯಪ್ರದೇಶ ಕಾಂಗ್ರೆಸ್‌ ಶಾಸಕರು ಬುಧವಾರ ತುರ್ತು ಸಭೆ ನಡೆಸಲಿದ್ದಾರೆ.

Advertisement

ಕಮಲ್‌ನಾಥ್‌ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದರೂ, ಅತ್ಯಂತ ಸರಳ ಬಹುಮತದಲ್ಲಿಯೇ ಇದೆ.230ರ ಪೈಕಿ 114 ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದಿದ್ದರೆ, ಪ್ರತಿಪಕ್ಷ ಬಿಜೆಪಿ 109 ಸ್ಥಾನಗಳನ್ನು ಹೊಂದಿದೆ. ಸರಳ ಬಹುಮತಕ್ಕೆ 116 ಸ್ಥಾನಗಳು ಬೇಕು. 11 ದಿನಗಳ ಅವಧಿಯಲ್ಲಿ ಬುಧವಾರದ ಸಭೆ ಮೂರನೇಯದ್ದಾಗಿರಲಿದೆ.

ಗೋವಾದಲ್ಲಿನ 10 ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಸೇರಿದಂತೆ, ಕರ್ನಾ ಟಕ ದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ನಾಯಕತ್ವಕ್ಕೆ ಸೆಡ್ಡು ಹೊಡೆದು 15 ಮಂದಿ ಶಾಸಕರು ರಾಜೀನಾಮೆ ನೀಡಿರುವುದರಿಂದ ಮಧ್ಯಪ್ರದೇಶ ಕಾಂಗ್ರೆಸ್‌ ನಾಯಕರು ಅದೇ ಮಾದರಿ ಪರಿಸ್ಥಿತಿ ಉಂಟಾದರೆ ಸಂಭಾವ್ಯ ಕ್ರಮಗಳೇನು ಎಂಬುದರ ಬಗ್ಗೆ ನಾಡಿದ್ದಿನ ಸಭೆಯಲ್ಲಿ ಮತ್ತೂಮ್ಮೆ ಸಮಗ್ರವಾಗಿ ಚರ್ಚಿಸಲು ನಿರ್ಧರಿಸಿದ್ದಾರೆ. ಮೂಲಗಳ ಪ್ರಕಾರ ಮುಖ್ಯಮಂತ್ರಿ ಕಮಲ್‌ನಾಥ್‌ ತಮ್ಮ ಶಾಸಕರನ್ನು ಭೇಟಿಯಾಗಿ ಅಹವಾಲು ಆಲಿಸಲಿದ್ದಾರೆ. ಸರಕಾರಕ್ಕೆ ಬೆಂಬಲ ನೀಡಿರುವ ಎಸ್‌ಪಿ, ಬಿಎಸ್‌ಪಿ ಮತ್ತು ಪಕ್ಷೇತರ ಶಾಸಕರೂ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಿಎಸ್‌ಪಿ ಶಾಸಕ ರಾಮ್‌ ಭಾಯ್‌ ಕೂಡ ಸಭೆಗೆ ಆಹ್ವಾನ ಇರುವುದನ್ನು ಖಚಿತ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next