Advertisement

ಬುಧವಾರದ ರಾಶಿ ಫಲ: ಅಧಿಕ ಧನ ಸಂಪಾದನೆಯ ಅಪೇಕ್ಷೆ, ಸಾಹಸ ಪ್ರವೃತ್ತಿ ಮಾಡದಿರಿ

07:30 AM Nov 23, 2022 | Team Udayavani |

ಮೇಷ: ಅಧಿಕ ಜನಸಂಪರ್ಕ. ಸಾಂಸಾರಿಕ ಸುಖದಲ್ಲಿ ತಲ್ಲೀನತೆ. ನಾನಾ ರೀತಿಯ ಮನೋರಂಜನೆಯಲ್ಲಿ ಆಸಕ್ತಿ. ಅವಿವಾಹಿತರಿಗೆ ವಿವಾಹ ಸಮಯ. ದೀರ್ಘ‌ ಪ್ರಯಾಣ. ಪಾಲುಗಾರಿಕೆ ವ್ಯವಹಾರಗಳಲ್ಲಿ ಅಭಿವೃದ್ಧಿ.

Advertisement

ವೃಷಭ: ಅಧಿಕ ಧನ ಸಂಪಾದನೆಯ ಅಪೇಕ್ಷೆ. ಉತ್ತಮ ಜ್ಞಾನ ತಿಳುವಳಿಕೆಯಿಂದ ಕೂಡಿದ ಮಾತುಗಾರಿಕೆಗೆ ಪ್ರಯತ್ನ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ ಪರಿಶ್ರಮ. ಗುರುಹಿರಿಯರ ಪ್ರೋತ್ಸಾಹದಿಂದ ಕಾರ್ಯ ಸಫ‌ಲತೆ.

ಮಿಥುನ: ಆರೋಗ್ಯ ಗಮನಿಸಿ. ಸಾಹಸ ಪ್ರವೃತ್ತಿ ಮಾಡದಿರಿ. ಉದ್ಯೋಗದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಲಭಿಸಲಿದೆ. ಅಧ್ಯಯನದಲ್ಲಿ ಆಸಕ್ತಿ. ದಾಂಪತ್ಯ ಸುಖಕರ. ಸಂದರ್ಭಕ್ಕೆ ಸರಿಯಾಗಿ ಪಾಲುಗಾರರ ಸಹಕಾರ ಲಭ್ಯ.

ಕರ್ಕ: ನಕಾರಾತ್ಮಕ ಚಿಂತನೆಗೆ ಆದ್ಯತೆ ನೀಡದಿರಿ. ತಾಳ್ಮೆ ಸಹನೆಯಿಂದ ಕಾರ್ಯ ಪ್ರವೃತ್ತರಾಗಿ. ದೂರದ ಬಂಧುಮಿತ್ರರಿಂದ ಸಹಕಾರ ಲಭಿಸುವುದು. ದಾಂಪತ್ಯ ಸುಖ ವೃದ್ಧಿ. ಕ್ಷಮಾಗುಣಕ್ಕೆ‌ ಆದ್ಯತೆ ನೀಡುವುದರಿಂದ ಜನರಿಂದ ಲಘು ಪ್ರಕಟಣೆ ಲಭಿಸುವುದು.

ಸಿಂಹ: ಭೂಮಿ ವಾಹನ ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನಾದಾಯ ಲಭಿಸುವುದು. ದಂಪತಿಗಳಲ್ಲಿ ಅನುರಾಗ ವೃದ್ಧಿ. ಪರಸ್ಪರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಜಾಣತನದ ಪ್ರದರ್ಶನದಿಂದ ಅತೀಸಫ‌ಲತೆ.

Advertisement

ಕನ್ಯಾ: ಆರೋಗ್ಯ ವೃದ್ಧಿ. ಗುರುಹಿರಿಯರ ಆಶೀರ್ವಾದ ಬಲದಿಂದ ಕೆಲಸಕಾರ್ಯಗಳಲ್ಲಿ ಅಭಿವೃದ್ಧಿ ಕೀರ್ತಿ ಸಂಪಾದನೆ. ಹಣಕಾಸಿನ ವಿಚಾರದಲ್ಲಿ ಆಯಕ್ಕೆ ಸರಿಯಾಗಿ ವ್ಯಯ ಸಂಭವ. ಮಾತಿನಲ್ಲಿ ಜವಾಬ್ದಾರಿ ಹೆಚ್ಚಾಗಿ ಕಂಡೀತು. ಅನಗತ್ಯ ತೊಂದರೆಗೊಳಗಾಗದಿರಿ.

ತುಲಾ: ಅನಿರೀಕ್ಷಿತ ಧನ ಲಾಭ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಗೌರವ ಮನ್ನಣೆ ಲಭ್ಯ. ಉತ್ತಮ ತಿಳುವಳಿಕೆ ಜ್ಞಾನ ವಾಕ್‌ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಬಹು ಜನಸಂಪರ್ಕ. ಅವಿವಾಹಿತರಿಗೆ ವಿವಾಹ ಭಾಗ್ಯ. ದಾಂಪತ್ಯ ಸುಖ ವೃದ್ಧಿ.

ವೃಶ್ಚಿಕ: ದೂರ ಪ್ರಯಾಣ. ಆರೋಗ್ಯ ಗಮನಿಸಿ. ಅನಿರೀಕ್ಷಿತ ನೂತನ ಉದ್ಯೋಗ ಕೆಲಸ ವ್ಯವಹಾರಗಳ ಜವಾಬ್ದಾರಿ. ಧಾರ್ಮಿಕ ಕಾರ್ಯಗಳಿಗೆ ಧನ ವ್ಯಯ ಮನಃ ತೃಪ್ತಿ. ಭೂಮ್ಯಾದಿ ವಾಹನಗಳ ಸುಖ ಪ್ರಾಪ್ತಿ. ನೂತನ ಮಿತ್ರರ ಭೇಟಿ. ಗೃಹದಲ್ಲಿ ಸಂತಸ.

ಧನು: ದೈರ್ಯ ಶೌರ್ಯ ಪರಾಕ್ರಮ ಪ್ರದರ್ಶನ. ಸಹೋದರ ಸಮಾನರಿಂದ ಸುಖ ಸಂತೋಷ. ಹಣಕಾಸಿನ ವಿಚಾರದಲ್ಲಿ ಜಾಗರೂಕತೆ. ಅನಗತ್ಯ ಖರ್ಚುಗಳಿಗೆ ತಡೆ. ಸಣ್ಣ ಪ್ರಯಾಣ. ಪರರಿಂದ ಜ್ಞಾನ ತಿಳಿಯುವ ಹಂಬಲ. ಅಧ್ಯಯನಶೀಲತೆ ಸಂಭವ.

ಮಕರ: ಆರೋಗ್ಯ ಗಮನಿಸಿ. ಹೆಚ್ಚಿನ ಪರಿಶ್ರಮದಿಂದ ದೇಹಾಯಾಸ ಸಂಭವ. ಹಣಕಾಸಿನ ವಿಚಾರದಲ್ಲಿ ಆದಾಯ ಖರ್ಚು ಸಮಾನಗಿರುವುದು. ಆತುರದ ನಿರ್ಧಾರ ಮಾಡದಿರಿ. ಬಂಧುಮಿತ್ರರ ಸಹಾಯ ಸಹಕಾರ ಲಭಿಸುವುದು.

ಕುಂಭ: ಮನೋರಂಜನೆಯಲ್ಲಿ ಆಸಕ್ತಿ. ದೂರ ಪ್ರಯಾಣ. ಅವಿವಾಹಿತರಿಗೆ ವಿವಾಹ ಭಾಗ್ಯ. ಉತ್ತಮ ವಾಕ್‌ಚತುರತೆ. ಕೆಲಸ ಕಾರ್ಯಗಳಲ್ಲಿ ಚುರುಕುತನ ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.

ಮೀನ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಸತ್ಕಾರ್ಯಕ್ಕೆ ಧನವ್ಯಯ. ಮಾನಸಿಕ ನೆಮ್ಮದಿ ಕಂಡುಬರುವುದು. ಬಂಧುಮಿತ್ರರಿಗಾಗಿ ಹೆಚ್ಚಿದ ಸಮಯ ಕಳೆಯುವಿಕೆ. ಅನಗತ್ಯ ಸಾಲ ನೀಡದಿರಿ ಅಥವಾ ಪಡೆಯದಿರಿ. ದಾಕ್ಷಿಣ್ಯ ತೊರೆದು ವ್ಯವಹರಿಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next