Advertisement

ಬುಧ‌ವಾರದ ರಾಶಿ ಫಲ: ಸಾಲ ಕೊಡುವಾಗ ಪಡೆಯುವಾಗ ಎಚ್ಚರದಿಂದಿರಿ, ಆರೋಗ್ಯದ ಕಡೆ ಗಮನವಿರಲಿ

07:38 AM Nov 16, 2022 | Team Udayavani |

ಮೇಷ: ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ವಿದ್ಯಾರ್ಥಿಗಳಿಗೆ ಜಿಜ್ಞಾಸುಗಳಿಗೆ ಅನುಕೂಲಕರ ಅವಕಾಶಗಳು ಲಭ್ಯ. ಸತ್ಕರ್ಮಕ್ಕಾಗಿ ಧನವ್ಯಯ ಹಾಗೂ ಉತ್ತಮ ಉಳಿತಾಯಕ್ಕಾಗಿ ಕಾರ್ಯಗತ. ಅವಿವಾಹಿತರಿಗೆ ವಿವಾಹ ಭಾಗ್ಯ.

Advertisement

ವೃಷಭ: ಸರಿಯಾದ ಜವಾಬ್ದಾರಿಯುತ ಕಾರ್ಯ ಪ್ರವೃತ್ತಿಯಿಂದ ಜನಮನ್ನಣೆ. ಪೂಜ್ಯತೆ ಗೌರವ ಆದರಗಳು ಪ್ರಾಪ್ತಿ. ಅಧಿಕ ಪರಿಶ್ರಮದಿಂದ ಕೂಡಿದ ದಿನ. ದೇಹಾರೋಗ್ಯ ಬಗ್ಗೆ ಉದಾಸೀನತೆ ಸಲ್ಲದು. ಪಾಲುದಾರಿಕಾ ವ್ಯವಹಾರದಲ್ಲಿ ಪ್ರಗತಿ.

ಮಿಥುನ: ಕೆಲಸ ಕಾರ್ಯಗಳಲ್ಲಿ ಸರಿಯಾದ ವಿವೇಚನೆ ಯೋಜನೆ ಅಗತ್ಯ. ಅನಗತ್ಯ ಅಪವಾದಕ್ಕೆ ಗುರಿಯಾಗದಿರಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ದಾಂಪತ್ಯ ತೃಪ್ತಿದಾಯಕ.

ಕರ್ಕ: ನಿರೀಕ್ಷಿತ ಧನ ಸಂಪತ್ತು ವೃದ್ಧಿ. ವಾಕ್‌ ಚತುರತೆಯಿಂದ ಕೂಡಿದ ಕಾರ್ಯವೈಖರಿ. ಗೌರವ ಲಭ್ಯ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಮಾನಸಿಕ ಒತ್ತಡ ಕಂಡುಬಂದೀತು. ಮಕ್ಕಳ ಬಗ್ಗೆ ಚಿಂತೆ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ.

ಸಿಂಹ: ದೀರ್ಘ‌ ಪ್ರಯಾಣ. ಆರೋಗ್ಯ ಗಮನಿಸಿ. ದೂರದ ವ್ಯವಹಾರಗಳಲ್ಲಿ ಎಚ್ಚರಿಕೆಯ ನಡೆಯಿಂದ ಪರಿಸ್ಥಿತಿ ಅನುಕೂಲಕರವಾದೀತು. ದಾಂಪತ್ಯ ಸುಖ ಉತ್ತಮ. ಗುರುಹಿರಿಯರ ಮಾರ್ಗದರ್ಶನದಿಂದ ಸಫ‌ಲತೆ. ಆಸ್ತಿ ವಿಚಾರಗಳಲ್ಲಿ ನಿಣಯ ನಡೆಯುವುದು.

Advertisement

ಕನ್ಯಾ: ಉಪಕಾರ ಮಾಡಲು ಹೋಗಿ ತೊಂದರೆಗೊಳಗಾಗಬೇಡಿ. ಭೂಮ್ಯಾದಿ ಆಸ್ತಿ ವಿಚಾರಗಳಲ್ಲಿ ಪ್ರಗತಿ. ದಾಕ್ಷಿಣ್ಯ ತೊರೆದು ವ್ಯವಹರಿಸಿದರೆ ಅಭಿವೃದ್ಧಿ ಕಂಡೀತು. ಹಣಕಾಸಿನ ಆದಾಯ ಮಾರ್ಗ ಸುಗಮ. ನಾನಾ ರೀತಿಯ ಹೂಡಿಕೆ ಸಂಭವ.

ತುಲಾ: ಸಣ್ಣ ಪ್ರಯಾಣ. ಜನ ಸಮೂಹದಲ್ಲಿ ಮಾನ್ಯತೆ ಗೌರವ ಅಧಿಕಾರ ಲಭ್ಯ. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ. ಸದ್‌ವ್ಯಯ. ಗುರುಹಿರಿಯರ ಸೇವೆಯಿಂದ ಮನಃತೃಪ್ತಿ. ಆರ್ಥಿಕ ಪ್ರಗತಿ ಉತ್ತಮ. ಆರೋಗ್ಯ ಸುದೃಢ. ಕೆಲಸ ಕಾರ್ಯಗಳಲ್ಲಿ ಸಫ‌ಲತೆ.

ವೃಶ್ಚಿಕ: ಆರೋಗ್ಯ ಮಧ್ಯಮ. ಸರಿಯಾದ ನಿಯಮ ಪಾಲಿಸುವುದು ಅಗತ್ಯ. ಹಿರಿಯರಿಂದ ಮಕ್ಕಳಿಂದ ಸಂತೋಷದ ವಾರ್ತೆ. ವಿದ್ಯಾರ್ಥಿಗಳಿಗೆ ಸಂದಭೋìಚಿತ ಸಹಾಯ ಒದಗಿ ಬರುವುದು. ಅಧ್ಯಯನದಲ್ಲಿ ಪ್ರಗತಿ ಕಾಣುವುದು.

ಧನು: ಉತ್ತಮ ಆರೋಗ್ಯ. ಆಸ್ತಿ ಸಂಪಾದನೆಯಲ್ಲಿ ತಲ್ಲೀನತೆ. ಸಾಲ ಕೊಡುವಾಗ ಪಡೆಯುವಾಗ ಪೂರ್ವಾಪರ ತಿಳಿದು ನಿರ್ಧರಿಸಿ. ಅನಿರೀಕ್ಷಿತ ಸ್ಥಾನ ಪ್ರಾಪ್ತಿ. ಧಾರ್ಮಿಕ ಕಾರ್ಯಗಲ್ಲಿ ಹೆಚ್ಚಿದ ಜವಾಬ್ದಾರಿ. ಅಧಿಕ ಶ್ರಮ. ದಾಂಪತ್ಯ ಸುಖ ತೃಪ್ತಿದಾಯಕ.

ಮಕರ: ಮಕ್ಕಳ ವಿಚಾರದಲ್ಲಿ ಸುವಾರ್ತೆ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ ಪ್ರಗತಿ ಕಂಡು ಬರುವುದು. ಅನಾಯಾಸವಾಗಿ ಧನ ಸಂಪಾದನೆ. ಸತ್ಕಾರ್ಯಕ್ಕೆ ಧನವ್ಯಯ. ಮಿತ್ರರಿಂದ ಉತ್ತಮ ಸಹಕಾರ. ಜವಾಬ್ದಾರಿ ಪ್ರದರ್ಶನ. ಸಾಂಸಾರಿಕ ಸುಖ ಉತ್ತಮ.

ಕುಂಭ: ಆರೋಗ್ಯ ಗಮನಿಸಿ. ಅನಗತ್ಯ ವಿಚಾರಗಳಲ್ಲಿ ತೊಡಗಿಸಿಕೊಳ್ಳದಿರಿ. ಬುದ್ಧಿವಂತಿಕೆ ತಾಳ್ಮೆ ಸಹನೆಯಿಂದ ವರ್ತಿಸಿ. ನಿಮ್ಮ ಕಾರ್ಯಗಳನ್ನು ಸಫ‌ಲಗೊಳಿಸಿಕೊಳ್ಳಿ. ಗುರುಹಿರಿಯರೊಂದಿಗೂ ಮಿತ್ರರೊಂದಿಗೂ ವಿವೇಚನೆಯಿಂದ ವ್ಯವಹರಿಸಿ.

ಮೀನ: ಸುದೃಢ ಆರೋಗ್ಯ. ಉತ್ತಮ ಸ್ಥಾನ ಮಾನ ಗೌರವಾದಿ ಲಭ್ಯ. ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿ. ಯಶಸ್ಸುಗಳಿಸಿದುದರಿಂದ ಮನಃ ಸಂತೋಷ. ದೂರದ ಮೂಲದಿಂದ ಹಣಕಾಸು ವೃದ್ಧಿ. ನಾನಾರೀತಿಯ ಹೂಡಿಕೆ ಸಂಭವ. ಗೃಹೋಪಯೋಗಿ ವಸ್ತುಗಳಿಗಾಗಿ ಧನವ್ಯಯ. ಮಿತ್ರರಿಂದ ಸೂಕ್ತ ಪ್ರೋತ್ಸಾಹ ಲಭ್ಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next