Advertisement

ಬುಧವಾರದ ರಾಶಿ ಭವಿಷ್ಯ : ಯಾವ ರಾಶಿಗೆ ಲಾಭ… ಯಾವ ರಾಶಿಗೆ ನಷ್ಟ…?

07:18 AM Sep 21, 2022 | Team Udayavani |

ಮೇಷ: ಸರಕಾರೀ ವ್ಯವಹಾರಗಳಲ್ಲಿ ಪ್ರಗತಿ. ಹಿರಿಯರಿಗೆ ಸಂತೋಷ ನೀಡಿದ ತೃಪ್ತಿ. ಸಮಾಜದಲ್ಲಿ ಗೌರವ ಪ್ರಾಪ್ತಿ. ಸ್ವಸಾಮರ್ಥ್ಯದಿಂದ ಧನಾರ್ಜನೆ. ಮಕ್ಕಳ ಸಾಧನೆಯಿಂದ ನೆಮ್ಮದಿ. ಸುದೃಢ ಆರೋಗ್ಯಕ್ಕಾಗಿ ಸರಿಯಾದ ನಿಯಮ ಪಾಲಿಸುವುದು ಅಗತ್ಯ.

Advertisement

ವೃಷಭ: ಸಂತುಷ್ಟವಾದ ದೈಹಿಕ ಮಾನಸಿಕ ಆರೋಗ್ಯ. ಜನರಿಂದ ಮಾನ್ಯತೆ. ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿ. ಆಸ್ತಿ ವಿಚಾರಗಳಲ್ಲಿ ಪ್ರಗತಿ. ಬಂಧುಮಿತ್ರರ ಸಹಕಾರ. ದಾಂಪತ್ಯ ಸುಖ ವೃದ್ಧಿ. ಮಕ್ಕಳ ಪ್ರಗತಿ ವಿಚಾರದಲ್ಲಿ ಧನವ್ಯಯ ಸಂಭವ. ಧಾರ್ಮಿಕ ಚಟುವಟಿಕೆ.

ಮಿಥುನ: ಗುರುಹಿರಿಯರಿಂದ ಸರ್ವವಿಧದ ಸುಖ ಪ್ರಾಪ್ತಿ. ದೈರ್ಯ ಪರಾಕ್ರಮದಿಂದ ಕೂಡಿದ ಕಾರ್ಯ ವೈಖರಿ. ದಾನ ಧರ್ಮದಲ್ಲಿ ಆಸಕ್ತಿ. ಸಂದರ್ಭಕ್ಕೆ ಸರಿಯಾಗಿ ವಿವೇಕದ ನಡೆ ನುಡಿ. ಉತ್ತಮ ಬಂಧುಮಿತ್ರರಿಂದ ಕೂಡಿದ ಸುಖ. ಬಂಧುಮಿತ್ರರಿಂದ ಕೂಡಿದ ಸುಖ.

ಕರ್ಕ: ಲೋಕಪ್ರಿಯತೆ. ದೇವತಾ ಭಕ್ತಿ ಶ್ರದ್ಧೆ ವೃದ್ಧಿ. ಚತುರ ನಡೆನುಡಿ ನಿರೀಕ್ಷೆಗೂ ಮೀರಿದ ಧನ ಸಂಪತ್ತಿನ ವೃದ್ಧಿ. ಕುಟುಂಬದವರಿಂದ ಪ್ರೋತ್ಸಾಹ. ಮನೆಯಲ್ಲಿ ಸಂತಸದ ವಾತಾವರಣ. ಗಣ್ಯರ ಸಹಾಯ ಸಹಕಾರದಿಂದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ.

ಸಿಂಹ: ಆರೋಗ್ಯ ಸ್ಥಿರ ವೃದ್ಧಿ. ಸರ್ವಸಾಮರ್ಥ್ಯ ಲೋಕ ಪ್ರಸಿದ್ಧ. ಜನಮನ್ನಣೆ. ತಾಳ್ಮೆ ಕಳೆದುಕೊಳ್ಳದೇ ವ್ಯವಹರಿಸಿ. ದೀರ್ಘ‌ ಪ್ರಯಾಣ ಸಂಭವ. ಅಧ್ಯಯನದಲ್ಲಿ ಆಸಕ್ತಿ. ಉತ್ತಮ ಧನಾರ್ಜನೆ. ಧನ ಸಂಪತ್ತಿನ ವೃದ್ಧಿ.

Advertisement

ಕನ್ಯಾ: ದೈಹಿಕ ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸಿ. ವ್ಯರ್ಥವಾಗಿ ಧನವ್ಯಯವಾಗದಂತೆ ಜಾಗೃತೆ ವಹಿಸಿ. ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಮುನ್ನಡೆ. ದಾಂಪತ್ಯ ಸುಖ ತೃಪ್ತಿದಾಯಕ.

ತುಲಾ: ಅವಿವಾಹಿತರಿಗೆ ಸೂಕ್ತ ಸಂಬಂಧ ಒದಗುವ ಸಮಯ. ದಾಂಪತ್ಯ ಸುಖ ವೃದ್ಧಿ. ರಾಜಕೀಯ ಕ್ಷೇತ್ರದವರಿಗೂ, ಸರಕಾರಿ ವರ್ಗದವರಿಗೂ ಅಭ್ಯುದಯ. ವಿದ್ಯಾರ್ಥಿಗಳಿಗೆ ಸೌಕರ್ಯ ವೃದ್ಧಿ. ಅನಿರೀಕ್ಷಿತ ಧನಾಗಮ. ಅಧಿಕ ವ್ಯಯ. ಪರ್ವತಾದಿ ಬೆಟ್ಟಗಳಲ್ಲಿ ಸಂಚರಿಸುವ ಅವಕಾಶ.

ವೃಶ್ಚಿಕ: ನಿರೀಕ್ಷಿತ ಸ್ಥಾನ ಸುಖ. ಮೇಲಧಿಕಾರಿಗಳಿಂದ ಸಹಾಯ. ಉತ್ತಮ ಧನ ಸಂಪತ್ತು. ಸಾಂಸಾರಿಕ ಸುಖ, ವಿದ್ಯಾರ್ಥಿಗಳಿಗೆ ಅವಿವಾಹಿತರಿಗೆ ಅನುಕೂಲಕರ ಪರಿಸ್ಥಿತಿ. ಆಹಾರೋದ್ಯಮ, ಹೈನುಗಾರಿಕೆ, ವಸ್ತ್ರೋದ್ಯಮ, ಆಭರಣ ವ್ಯವಹಾರಸ್ಥರಿಗೆ ಅಭಿವೃದ್ಧಿ.

ಧನು: ಆರೋಗ್ಯ ಗಮನಿಸಿ. ನಿರೀಕ್ಷಿತ ಸಹಾಯ ಸಿಗದು. ಸ್ವಂತ ಪ್ರಯತ್ನದಲ್ಲಿ ವಿಶ್ವಾಸವಿಟ್ಟು ಕಾರ್ಯ ಸಾಧಿಸಿಕೊಳ್ಳಿ. ಮೇಲಧಿಕಾರಿಗಳಲ್ಲಿ ಸಂಯಮದಿಂದ ವ್ಯವಹರಿಸಿ. ಪಾಲುಗಾರಿಕಾ ಕ್ಷೇತ್ರದವರು ತಾಳ್ಮೆ ಕಳೆದುಕೊಳ್ಳದಿರಿ. ದೇವತಾ ಸ್ಥಳ ಸಂದರ್ಶನ.

ಮಕರ: ಮಾತೃ ಸಮಾನರ ಕಾರ್ಯ ನಿರ್ವಹಿಸಿದ ಸಮಾದಾನ. ಆರೋಗ್ಯ ಸ್ಥಿರ. ಧನಾರ್ಜನೆಗೆ ಸಮನಾದ ವ್ಯಯ. ನೇರ ಮಾತುಗಾರಿಕೆ ಸಲ್ಲದು. ಅಧ್ಯಯನ ಪ್ರವೃತ್ತರಿಗೆ ಅನುಕೂಲಕರ ಸಮಯ. ಉದ್ಯೋಗದಲ್ಲಿ ಅಧಿಕ ಜವಾಬ್ದಾರಿ. ನೂತನ ಮಿತ್ರರ ಸಮಾಗಮ.

ಕುಂಭ: ಬಂದ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಆತುರತೆ ಸಲ್ಲದು. ಪ್ರಯಾಣದಿಂದ ಸುಖ ಸಮೃದ್ಧಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ. ಆರೋಗ್ಯ ಗಮನಿಸಿ. ವ್ಯಾಪಾರಸ್ಥರಿಗೆ ಉತ್ತಮ ದಿನ.

ಮೀನ: ಮಕ್ಕಳ ಆರೋಗ್ಯದ ಕಡೆ ಗಮನಿಸಿ. ಪ್ರಯಾಣದಿಂದ ಲಾಭ. ದೂರದ ಕಾರ್ಯದಲ್ಲಿÉ ಜಯ. ವಿದ್ಯಾರ್ಥಿಗಳಿಗೆ ಅಧ್ಯಯನಶೀಲರಿಗೆ ಪರಿಶ್ರಮದಿಂದ ನಿರೀಕ್ಷಿತ ಸ್ಥಾನ ಸುಖ. ಧನಾರ್ಜನೆ ಉತ್ತಮವಿದ್ದರೂ ವಿಳಂಬಕ್ಕೆ ದೊರಕುವುದು. ಉನ್ನತ ಅಧಿಕಾರಿಗಳು ಗುರುಹಿರಿಯರ ಆಶೀರ್ವಾದದಿಂದ ಅಭಿವೃದ್ಧಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next