Advertisement

ಬುಧವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

07:41 AM Nov 24, 2021 | Team Udayavani |

ಮೇಷ: ಹಿರಿಯರಿಂದ ಸುಖ ಸಂತೋಷ. ಸರಕಾರೀ ಕೆಲಸಗಳಲ್ಲಿ ಪ್ರಗತಿ. ಗಣ್ಯರ ಸಂಪರ್ಕ ಮಾನ್ಯತೆ. ಸ್ವಸಾಮರ್ಥ್ಯದಿಂದ ಧನ ಸಂಪಾದನೆ. ಸಹೋದ್ಯೋಗಿಗಳ ಸಹಕಾರ. ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ.

Advertisement

ವೃಷಭ: ಧೈರ್ಯ ಶೌರ್ಯ ಪರಾಕ್ರಮದಿಂದ ಕೂಡಿದ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಕಾರ್ಯ ವೈಖರಿ. ಸಂಪತ್ತು ವೃದ್ಧಿ. ದಾನಧರ್ಮದಲ್ಲಿ ಆಸಕ್ತಿ ಶ್ರದ್ಧೆ. ಬಂಧುಮಿತ್ರರ ಸಹಕಾರ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ.

ಮಿಥುನ: ಸಂಶೋಧನಾತ್ಮಕ ಪ್ರವೃತ್ತಿ. ಆರೋಗ್ಯ ಗಮನಿಸಿ. ವ್ಯವಹರಿಸುವಾಗ ಮಾತಿನಲ್ಲಿ ಕಠೊರತೆಗೆ ಆಸ್ಪದ ನೀಡದಿರಿ. ಹಣಕಾಸಿನ ಸಂಪತ್ತಿನ ವಿಚಾರದಲ್ಲಿ ಸಾಹಸ ಪ್ರವೃತ್ತಿ ಸಲ್ಲದು. ಅನಿರೀಕ್ಷಿತ ಧನಾಗಮನ ಸಂಭವ.

ಕರ್ಕ: ಸಾಂಸಾರಿಕ ಸುಖ ವೃದ್ಧಿ. ದಂಪತಿಗಳ ಅನುರಾಗ ಹೆಚ್ಚಾದೀತು. ದೀರ್ಘ‌ ಪ್ರಯಾಣ ಸಂಭವ. ಉತ್ತಮ ಜನರ ಒಡನಾಟದಿಂದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ಪ್ರಾಪ್ತಿ.

ಸಿಂಹ: ಆರೊಗ್ಯ ತೃಪ್ತಿದಾಯಕ. ಸದಾ ವಿದ್ಯಾರ್ಜನೆಯಲ್ಲಿ ಆಸಕ್ತಿ. ಉತ್ತಮ ಗೌರವದಿಂದ ಕೂಡಿದ ಧನಸಂಪತ್ತಿನ ವೃದ್ಧಿ. ಮಕ್ಕಳಲ್ಲಿ ವಿಶೇಷ ಪ್ರೀತಿ ಸುಖ ಸಂತೋಷ. ದೂರದ ವ್ಯವಹಾರದಲ್ಲಿ ಪ್ರಗತಿ. ಸ್ಥಾನ ಸುಖಾದಿ ಲಭ್ಯ.

Advertisement

ಕನ್ಯಾ: ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ಮಾಡಿ ನಿರ್ಣಯ ಮಾಡಿ. ಉದ್ಯೋಗ, ಸಂಪತ್ತು ವಿಚಾರದಲ್ಲಿ ಉತ್ತಮ ಪ್ರಗತಿದಾಯಕ ಬದಲಾವಣೆ ತೋರಿ ಬರುವುವು. ಸಂಶೋಧಕರಿಗೆ ಅನುಕೂಲಕರ ಪರಿಸ್ಥಿತಿ.

ತುಲಾ: ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಲಾಭ. ಗೌರವಾದಿ ವೃದ್ಧಿ. ಎಲ್ಲರೂ ನೆನಪಿಡುವಂತಹ ಕಾರ್ಯ ಶೈಲಿ. ಸ್ವರ್ಜಿತ ಧನಸಂಪತ್ತು ವೃದ್ಧಿ. ಆದ್ದರಿಂದ ಸಹಾಯ ನಿರೀಕ್ಷಿಸದಿರಿ. ಚರ್ಚೆಗೆ ಆಸ್ಪದ ನೀಡದಿರಿ. ಆರೋಗ್ಯ ಉತ್ತಮ.

ವೃಶ್ಚಿಕ: ಅನಿರೀಕ್ಷಿತ ಧನ ಸಂಪತ್ತಿನ ವೃದ್ಧಿ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಬಂಧುಮಿತ್ರರ ಸಹಾಯ ಲಭಿಸದು. ನಿಮ್ಮ ಪರಿಶ್ರಮದಲ್ಲಿ ವಿಶ್ವಾಸವಿಟ್ಟು ಕಾರ್ಯ ಸಾಧಿಸಿ. ಮಕ್ಕಳಿಂದ ಸಂತೋಷ.

ಧನು: ಕೆಲಸ ಕಾರ್ಯಗಳಲ್ಲಿ ಚಾಣಕ್ಷತನ ಜವಾಬ್ದಾರಿ ಯಿಂದ ಯಶಸ್ಸು. ಹಣಕಾಸಿನ ವಿಚಾರಗಳಲ್ಲಿ ದಾಕ್ಷಿಣ್ಯದಿಂದ ನಷ್ಟ ಸಂಭವ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ. ಪ್ರಗತಿಪರ ಬದಲಾವಣೆ. ಗುರುಹಿರಿಯರ ಆರೋಗ್ಯ ಸ್ಥಿರ.

ಮಕರ: ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿ. ಮನೆಯಲ್ಲಿ ಸಂತಸದ ವಾತಾವರಣಕ್ಕೆ ತೊಂದರೆ ಆಗದಂತೆ ಕಾರ್ಯ ಪ್ರವೃತ್ತರಾಗಿ. ಮಾತಿನಲ್ಲಿ ತಾಳ್ಮೆ ಸಹಕಾರ ಅಗತ್ಯ. ಬಂಧುಮಿತ್ರರಲ್ಲಿ ನಿಷ್ಠುರ ವರ್ತನೆ ಸಲ್ಲದು. ಆತುರದ ನಿರ್ಧಾì ಮಾಡದಿರಿ.

ಕುಂಭ: ಸಣ್ಣ ಪ್ರಯಾಣ ಸಂಭವ. ಅಧ್ಯಯನದಲ್ಲಿ ಮಗ್ನತೆ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ಆರೋಗ್ಯ ಗಮನಿಸಿ. ಸಾಂಸಾರಿಕ ಸುಖ ಮಧ್ಯಮ. ಉದ್ಯೋಗ ವ್ಯವಹಾರಗಳಲ್ಲಿ ಎಲ್ಲರ ಸಹಕಾರದಿಂದ ಪ್ರಗತಿ.

ಮೀನ: ನಷ್ಟ ವಸ್ತುಗಳು ಪ್ರಯತ್ನಿಸಿದರೆ ಸಿಗುವ ಸಂಭವ. ಧನಸಂಪತ್ತಿನ ಅನಿರೀಕ್ಷಿತ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ಆದರದ ಮನ್ನಣೆ. ಆಸ್ತಿವಿಚಾರಗಳಲ್ಲಿ ಬದಲಾವಣೆ ಸಂಭವ. ಸಹೋದ್ಯೋಗಿಗಳಿಂದ ಅಲ್ಪ ಸಹಾಯ.

Advertisement

Udayavani is now on Telegram. Click here to join our channel and stay updated with the latest news.

Next