Advertisement

ಸಾಂತ್ವನ ಕೇಂದ್ರದಲ್ಲೇ ಪ್ರೇಮಿಗಳ ವಿವಾಹ

04:47 PM Dec 17, 2019 | Team Udayavani |

ಬೇತಮಂಗಲ: ಕಳೆದ ಎರಡು ವರ್ಷಗಳಿಂದ ಪ್ರೀತಿಸುತಿದ್ದ ಪ್ರೇಮಿಗಳಿಬ್ಬರಿಗೆ ಅವರ ಇಚ್ಛೆಯಂತೆ ವಿರೋಧ ವ್ಯಕ್ತಪಡಿಸಿದ್ದ ಪೋಷಕರ ಸಮ್ಮುಖದಲ್ಲೇ ಮಹಿಳಾ ಸಾಂತ್ವನ ಕೇಂದ್ರದಲ್ಲಿ ವಿವಾಹ ನೆರವೇರಿಸಲಾಯಿತು.

Advertisement

ಗ್ರಾಮದ ಸಂತೆಗೇಟ್‌ ನಿವಾಸಿ ಜಯಪಾಲ್‌ ಅವರ ಪುತ್ರ ಪ್ರವೀಣ್‌ಕುಮಾರ್‌(23) ಮತ್ತು ಕೆಜಿಎಫ್ನ ಬಾಲಘಾಟ್‌ ನಿವಾಸಿ ತಿರುಮೂರ್ತಿ ಅವರ ಪುತ್ರಿ ಕವಿಯರಸಿ (20) ಇಬ್ಬರೂ ಅನ್ಯ ಕೋಮಿನವರಾಗಿದ್ದು, ದಾರಸಹೊಸ ಹಳ್ಳಿಯ ಡೆಕ್ಕೇನ್‌ ಹೈಡ್ರಾಲಿಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ವಿವಾಹಕ್ಕೆ ಎರಡೂ ಮನೆಯವರ ಕಡೆ ವಿರೋಧವಿತ್ತು. ನಂತರ ಪ್ರೇಮಿಗಳಿಬ್ಬರು ಬೇತಮಂಗಲ ಮಹಿಳಾ ಸಾಂತ್ವನ ಕೇಂದ್ರಕ್ಕೆ ಮನವಿ ಸಲ್ಲಿಸಿ, ನಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆ ಮಾಡುವಂತೆ ಮನವಿ ಮಾಡಿದ್ದರು. ಸಾಂತ್ವನ ಕೇಂದ್ರದ ಕಾರ್ಯದರ್ಶಿ ಎಂ.ಗೋಪಾಲ್‌ ಮತ್ತು ಆಪ್ತ ಸಮಾಲೋಚಕಿ ಪವಿತ್ರಾ ಇಬ್ಬರೂ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ಮದುವೆಗೆ ಒಪ್ಪಿಸಿದ್ದರು.

ಅದರಂತೆ ಸೋಮವಾರ ಎರಡೂ ಕಡೆಯ ಪೋಷಕರಿಗೆ ಸೂಕ್ತ ಮಾಹಿತಿ ನೀಡಿ, ಸಮಾಲೋಚನೆ ಮೂಲಕ ಹಿಂದೂ ಸಾಂಪ್ರದಾ ಯದಂತೆ ಸಾಂತ್ವನ ಕೇಂದ್ರವನ್ನೇ ಕಲ್ಯಾಣ ಮಂದಿರ ಮಾಡಿ, ಹಾರ ಬದಲಿಸಿ, ತಾಳಿ ಕಟ್ಟಿಸಿ, ಎಲ್ಲರಿಗೂ ಅರಿಶಿಣ, ಕುಂಕುಮ ಅಕ್ಕಿ ನೀಡಿ ಆಶೀರ್ವಾದ ಮಾಡಿಸಿ, ವಿವಾಹ ನೆರವೇರಿಸಿದರು. ನಂತರ ಎರಡೂ ಕಡೆಯವರಿಗೆ ಊಟ ವ್ಯವಸ್ಥೆಯನ್ನೂ ಮಾಡಲಾಗಿತ್ತು ಸಾಂತ್ವನ ಕೇಂದ್ರದ ಆಪ್ತಸಮಾಲೋಚಕಿ ಪವಿತ್ರಾ ಮಾತನಾಡಿ, ಮಹಿಳೆಯರು ತಮ್ಮ ಯಾವುದೇ ಸಮಸ್ಯೆಗಳನ್ನು ಹೇಳಿಕೊಳ್ಳಲು, ತಮ್ಮ ಸಂಸಾರ ಸರಿಪಡಿಸಿಕೊಳ್ಳಲು ಸಾಂತ್ವನ ಕೇಂದ್ರ ಸಂಪೂರ್ಣ ಸಹಕಾರ ನೀಡುತ್ತಿದೆ. ಅಗತ್ಯ ಸಮಾಲೋಚನೆ ಮೂಲಕ ಅವರಿಗೆ ವರದಾನವಾಗುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next