ಬನಹಟ್ಟಿ: ರಾಜ್ಯದಲ್ಲಿರುವ ನೇಕಾರ ಸಮುದಾಯಕ್ಕೆ ದೊರೆಯಬೇಕಾದ ಸೌಲಭ್ಯಗಳುದೊರೆಯದೆ ಇರುವುದರಿಂದ ನೇಕಾರರುವಂಚಿತರಾಗುತ್ತಿದ್ದಾರೆ. ಆದ್ದರಿಂದ ನೇಕಾರರನ್ನು ಪ್ರವರ್ಗ-1ರಲ್ಲಿ ಸೇರಿಸುವ ನಿಟ್ಟಿನಲ್ಲಿ ಹೋರಾಟ ಅಗತ್ಯವಾಗಿದೆ ಎಂದು ನೇಕಾರ ಮುಖಂಡ ಮನೋಹರ ಶಿರೋಳ ಹೇಳಿದರು.
ಶನಿವಾರ ಸ್ಥಳೀಯ ಬಂಗಾರೆವ್ವ ತಟ್ಟಿಮನಿ ಸಭಾಭವನದಲ್ಲಿ ನಡೆದ ನೇಕಾರ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.ಈ ನಿಟ್ಟಿನಲ್ಲಿ ನೇಕಾರ ಸಮುದಾಯದ ಪ್ರಮುಖರು ಪಕ್ಷ ಬೇಧ ಮರೆತು ಒಂದಾಗಿಹೋರಾಟ ಮಾಡಬೇಕಾಗಿದೆ. ಪ್ರವರ್ಗ-1ಕ್ಕೆಸೇರಿದಾಗ ಮಾತ್ರ ಮುಂಬರುವ ನೇಕಾರರ ಮಕ್ಕಳಿಗೆ ಅನುಕೂಲವಾಗಲಿದೆ. ನೇಕಾರರು ಕೂಡಾ ಸಾಮಾಜಿಕ, ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಡಿ.ಎಸ್.ಮಾಚಕನೂರ ಮಾತನಾಡಿ, ಈಗಾಗಲೇ ನೇಕಾರ ಜಾತಿಯನ್ನುಪ್ರವರ್ಗ-2 ರಲ್ಲಿ ಸೇರಿಸಲಾಗಿದೆ. ಇಲ್ಲಿ ಒಟ್ಟು26 ಜಾತಿಗಳಿವೆ. ಇದರಿಂದಾಗಿ ನೇಕಾರರಿಗೆದೊರೆಯಬೇಕಾದ ಯಾವುದೆ ಸೌಲಭ್ಯಗಳುದೊರೆಯುತ್ತಿಲ್ಲ. ಆದ್ದರಿಂದ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಗಮನ ನೀಡಿ ನೇಕಾರ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದರು.
ಮುಖಂಡ ಶಂಕರ ಸೋರಗಾವಿ ಮಾತನಾಡಿ,ಮಹಾರಾಷ್ಟ್ರ ರಾಜ್ಯದಲ್ಲಿ ಈಗಾಗಲೇ ಅಲ್ಲಿರುವನೇಕಾರರಿಗೆ ವಿಶೇಷ ಸ್ಥಾನಮಾನ ನೀಡಿದ್ದಾರೆ. ರಾಜ್ಯದಲ್ಲೂ ಕೂಡಾ ನೇಕಾರರಿಗೆ ವಿಶೇಷ ಮೀಸಲಾತಿಯನ್ನು ನೀಡುವಲ್ಲಿ ಸರ್ಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ರಾಜ್ಯಾದಂತ ಹೋರಾಟ ಅಗತ್ಯವಾಗಿದೆ. ನೇಕಾರ ಸಮುದಾಯ ಜಾಗೃತವಾಗಬೇಕು ಎಂದರು.
ಜಿ.ಎಸ್.ಗೊಂಬಿ, ಶಂಕರ ಜುಂಜಪ್ಪನವರ ಸೇರಿದಂತೆ ಅನೇಕರು ಮಾತನಾಡಿದರು. ಮಂಗಳವಾರ ಪೇಟೆ ದೈವ ಮಂಡಳಿಯ ಅಧ್ಯಕ್ಷ ಶ್ರೀಶೈಲ ಧಬಾಡಿ ಅಧ್ಯಕ್ಷತೆ ವಹಿಸಿದ್ದರು. ಶಂಕರ ಜಾಲಿಗಿಡದ, ಓಂಪ್ರಕಾಶ ಬಾಗೇವಾಡಿ, ಪ್ರಭುಹಟ್ಟಿ, ಶ್ರೀನಿವಾಸ ಹುಬ್ಬಳ್ಳಿ, ನಗರಸಭಾ ಅಧ್ಯಕ್ಷ ಶ್ರೀಶೈಲ ಬೀಳಗಿ, ಮಲ್ಲಿನಾಥ ಕಕಮರಿ, ಈರಣ್ಣ ಚಿಂಚಕಂಡಿ, ರವಿ ಬಾಡಗಿ, ರವಿ ಚನಪನ್ನವರ, ರಾಜೇಂದ್ರ ಭದ್ರನವರ, ಬಸವರಾಜ ಗುಡೋಡಗಿ, ಶಿವಾನಂದ ಬುದ್ನಿ, ಡಾ| ಶಂಕರ ವಸ್ತ್ರದ ಇದ್ದರು.