Advertisement

ರೈತ ಸಂಪರ್ಕ ಕೇಂದ್ರದಲ್ಲಿ ಸಿಗಲಿದೆ ಹವಾಮಾನ ಮಾಹಿತಿ

03:45 AM Jul 11, 2017 | Harsha Rao |

ಬೆಂಗಳೂರು: ಷೇರು ವಿನಿಮಯ ಕೇಂದ್ರಗಳ ಮುಂದೆ ಬಿತ್ತರವಾಗುವ ಷೇರು ಸೂಚ್ಯಂಕದಂತೆಯೇ ಇನ್ಮುಂದೆ ರೈತ ಸಂಪರ್ಕ ಕೇಂದ್ರಗಳ ಮುಂದೆ ದಿನದ 24 ಗಂಟೆ ಮಳೆ ಮತ್ತು ಕೃಷಿ ಸಂಬಂಧಿತ ಮಾಹಿತಿಗಳು ಬಿತ್ತರಗೊಳ್ಳಲಿವೆ!
ವಿಶ್ವ ಬ್ಯಾಂಕ್‌ ಅನುದಾನದಲ್ಲಿ “ಜಲಾನಯನ ಅಭಿವೃದ್ಧಿ ಯೋಜನೆ ಸುಜಲಾ-3’ರ ಹಂತದಡಿ ಹೋಬಳಿಗಳಲ್ಲಿ ಡಿಜಿಟಲ್‌
ಆಧಾರಿತ ಮಳೆ ಮಾಹಿತಿ ಫ‌ಲಕಗಳ ಅಳಡಿಕೆ ಯೋಜನೆಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಕೈಗೆತ್ತಿಕೊಂಡಿದೆ. ಇದರಡಿ ಗ್ರಾಮೀಣ ಜನರಿಗೆ ನಿಮ್ಮ ಹಳ್ಳಿಗಳಲ್ಲಿ ಎಷ್ಟು ಮಳೆಯಾಗಿದೆ? ಮುಂದಿನ ದಿನಗಳಲ್ಲಿ ಎಷ್ಟು ಮಳೆ ಆಗಲಿದೆ? ಅದಕ್ಕೆ ತಕ್ಕಂತೆ ಯಾವ ಬೆಳೆ ಬೆಳೆಯುವುದು ಸೂಕ್ತ? ಬೆಳೆ ವಿಮೆ ಸೇರಿದಂತೆ ಹತ್ತಾರು ಮಾಹಿತಿಗಳನ್ನು ನೀಡಲಾಗುತ್ತದೆ. ಪ್ರಸ್ತುತ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅಥವಾ ಕೃಷಿ ಇಲಾಖೆಗೆ ರೈತರು ಕರೆ ಮಾಡಿ ಮಳೆ ಅಥವಾ ಕೃಷಿಗೆ ಸಂಬಂಧಿಸಿದ ಸಲಹೆಗಳನ್ನು ಪಡೆಯುವ
ವ್ಯವಸ್ಥೆ ಇದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಯಾ ಹೋಬಳಿಗಳಲ್ಲಿನ ರೈತ ಸಂಪರ್ಕ ಕೇಂದ್ರಗಳ ಮುಂದೆಯೇ ಈ ಎಲ್ಲ ಮಾಹಿತಿಯನ್ನು ಡಿಜಿಟಲ್‌ ಫ‌ಲಕಗಳಲ್ಲಿ ಹಾಕಲು ಉದ್ದೇಶಿಸಿದ್ದು, ಈ ಸಂಬಂಧ ಟೆಂಡರ್‌
ಪ್ರಕ್ರಿಯೆಗೆ ಸಿದ್ಧತೆ ನಡೆದಿದೆ.

Advertisement

ಆರಂಭದಲ್ಲಿ 12 ಜಿಲ್ಲೆಗಳ ಹೋಬಳಿಗಳಲ್ಲಿ ಈ ಮಾಹಿತಿ ಫ‌ಲಕಗಳನ್ನು ಅಳವಡಿಸಲಾಗುತ್ತಿದ್ದು, ಮುಂದಿನ ಹಂತದಲ್ಲಿ ಉಳಿದೆಲ್ಲ ಹೋಬಳಿಗಳಿಗೂ ವಿಸ್ತರಿಸಲಾಗುವುದು. ಮುಂಗಾರು ಮುಗಿಯುವ ಮೊದಲೇ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಡಾ.ಸಿ.ಎನ್‌. ಪ್ರಭು ತಿಳಿಸಿದ್ದಾರೆ.

ಪಂಚಾಯ್ತಿಗಳಿಗೂ ವಿಸ್ತರಣೆ: ಸದ್ಯ ಮಳೆ ಮತ್ತು ಕೃಷಿ ಸಂಬಂಧಿತ ಎಲ್ಲ ಪ್ರಕಾರದ ಮಾಹಿತಿಗಳಿಗಾಗಿ ಜನ ಕೆಎಸ್‌ಎನ್‌ಡಿಎಂಸಿ ಮತ್ತು ಕೃಷಿ ಸಹಾಯವಾಣಿಗೆ ಕರೆ ಮಾಡಿ ಪಡೆಯುತ್ತಿದ್ದಾರೆ. ಇನ್ನು ಸುಮಾರು 27 ಲಕ್ಷ ಜನ ತಮ್ಮ ಹೆಸರು ಮತ್ತು ಮೊಬೈಲ್‌ ಸಂಖ್ಯೆಯನ್ನು ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಂಡಿದ್ದು, ವಾರದಲ್ಲಿ ಎರಡು ದಿನಗಳು ಮೊಬೈಲ್‌ ಸಂದೇಶ ನೀಡಲಾಗುತ್ತದೆ. ಅದನ್ನು ಎಷ್ಟು ಜನ ನೋಡುತ್ತಾರೆ? ಅದರ ಉಪಯೋಗ ಎಷ್ಟು ಜನರಿಗೆ ಆಗುತ್ತಿದೆ ಎಂಬುದುಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಗ್ರಾಮ ಪಂಚಾಯ್ತಿ ಮಟ್ಟಕ್ಕೆ ವಿಸ್ತರಿಸುವ ಗುರಿ ಇದೆ. ಇದನ್ನು ಆಧರಿಸಿ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬಹುದು ಎಂದು ಡಾ.ಪ್ರಭು ಹೇಳುತ್ತಾರೆ.

ಮಾಹಿತಿ ಸಂಗ್ರಹ ಹೀಗೆ: ರಾಜ್ಯದಲ್ಲಿ 747 ಹೋಬಳಿಗಳಿದ್ದು, ಪ್ರತಿ ಹೋಬಳಿಯಲ್ಲೂ ಮಳೆ ಮತ್ತು ಹವಾಮಾನ ಮಾಪನ ಕೇಂದ್ರಗಳಿವೆ. ಜತೆಗೆ ಪರಿಹಾರ ಸಾಫ್ಟ್ವೇರ್‌ ಅಡಿ ರಾಜ್ಯ ಸರ್ಕಾರದ ಬಳಿ ರೈತರ ಎಲ್ಲ ಮಾಹಿತಿಯೂ ಇದೆ. ಅಷ್ಟೇ ಅಲ್ಲ, ರೈತ ಸಂಪರ್ಕ ಕೇಂದ್ರಗಳಲ್ಲಿ ಆಯಾ ಹೋಬಳಿ ವ್ಯಾಪ್ತಿಯಲ್ಲಿನ ಕೃಷಿ ಬೆಳೆಗಳ ಮಾಹಿತಿ ಇದೆ. ಮತ್ತೂಂದೆಡೆ ಕೃಷಿ ಇಲಾಖೆ ಹಾಗೂ ರಾಷ್ಟ್ರೀಯ ಮಣ್ಣು ಸರ್ವೇಕ್ಷಣಾ ಕೇಂದ್ರವೂ ಈ ಯೋಜನೆ ಅಡಿ ಬರುತ್ತಿದ್ದು, ಅಲ್ಲಿಂದಲೂ ಪೂರಕ ದತ್ತಾಂಶಗಳನ್ನು ಪಡೆಯಲಾಗುವುದು. ಇದೆಲ್ಲದರ ಸಹಕಾರದೊಂದಿಗೆ ದತ್ತಾಂಶಗಳನ್ನು ಜಿಪಿಆರ್‌
ಎಸ್‌ ಮೂಲಕ ಸರ್ವರ್‌ಗಳಿಗೆ ಹಾಕಿ, ಮಾಹಿತಿ ಬಿತ್ತರಿಸಲಾಗುವುದು ಎಂದು ವಿವರಿಸಿದರು. ಮಳೆ ಮಾತ್ರವಲ್ಲದೇ, ಮಳೆಗೆ ಪೂರಕವಾಗಿ ಬೆಳೆಯಬಹುದಾದ ಕೃಷಿ ಬೆಳೆಗಳು, ಬೆಳೆಹಾನಿ ಮತ್ತು ಪರಿಹಾರ, ಬೆಳೆ ವಿಮೆ, ಕೃಷಿ ಪರಿಕರಗಳು ಸೇರಿದಂತೆ ಹತ್ತಾರು ಮಾಹಿತಿಗಳನ್ನು ರೈತರಿಗೆ ತಲುಪಿಸಲಾಗುವುದು. ಈಗ ವಿವಿಧ ರೂಪದಲ್ಲಿ ಈ ಸಲಹೆ-ಸೂಚನೆಗಳನ್ನು ನೀಡಲಾಗುತ್ತಿದೆ. ಇದು ಮಾಹಿತಿಯನ್ನು ಒದಗಿಸುವ ಮತ್ತೂಂದು ಮಾರ್ಗ ಎಂದು ಕೆಎಸ್‌ಎನ್‌ಡಿಎಂಸಿಯ ಮತ್ತೂಬ್ಬ ವಿಜ್ಞಾನಿ ತಿಳಿಸಿದರು.

– ವಿಜಯಕುಮಾರ್‌ ಚಂದರಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next