Advertisement

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಿಲ್ಲ : ಅಚ್ಚರಿಯ ನಿರ್ಣಯ ಕೈಗೊಂಡ ಈ ದೇಶ..!

12:14 PM Apr 19, 2021 | Team Udayavani |

ಇಸ್ರೇಲ್ : ದೇಶದಾದ್ಯಂತ ಕೋವಿಡ್ ಸೋಂಕು ಹಠಾತ್ ಏರಿಕೆಯಿಂದಾಗಿ ನಾಗರಿಕ ವ್ಯವಸ್ಥೆಯನ್ನೇ ಅಡಿಮೇಲಾಗಿಸಿದೆ. ಸೋಂಕನ್ನು ನಿಯಂತ್ರಣ ಮಾಡುವ ುದ್ದೇಶದಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಕಠಿಣ ಕ್ರಮಗಳನ್ನು ಹೇರುತ್ತಿವೆ.

Advertisement

ಏತನ್ಮಧ್ಯೆ, ಕೋವಿಡ್ ಸೋಂಕಿನ ಕಾರಣದಿಂದಾಗಿ ಮೃತಪಟ್ಟವರ ಸಂಖ್ಯೆ 30 ಲಕ್ಷ ಮೀರಿದೆ. ಈ ನಡುವೆ ಇಸ್ರೇಲ್ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲವೆಂದು ಆಶ್ಷರ್ಯ ಹುಟ್ಟಿಸುವ ಒಂದು ನಿರ್ಧಾರವನ್ನು ತೆಗೆದುಕೊಂಡಿದೆ.

ಓದಿ : ಕೋವಿಡ್ 2ನೇ ಅಲೆ: ಭಾರತದಲ್ಲಿ 24 ಗಂಟೆಗಳಲ್ಲಿ 2.73 ಲಕ್ಷ ಪ್ರಕರಣ ಪತ್ತೆ

ಹೌದು, ಇಸ್ರೇಲ್ ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣ ಇಳಿಮುಖವಾಗುತ್ತಿದ್ದಂತೆ ಹಾಗೂ ಗುಣಮುಖ ಆಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವವರ ನಡುವೆ ಅಲ್ಲಿನ ಆರೋಗ್ಯ ಮಂತ್ರಿ ಪ್ರೊ. ಹೇಜಿ ಲೇವಿ ಹೊಸ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂದು ಅವರು ತಿಳಿಸಿದ್ದಾರೆ ಎಂಬ ವರದಿಯಾಗಿದೆ.

ಇಸ್ರೇಲ್ ದೇಶದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಆದ್ಯತೆ ನೀಡಿದ ಕಾರಣ ಹೆಚ್ಚಿನ ಜನರಲ್ಲಿ ಕೋವಿಡ್ ಸೋಂಕಿನ ವಿರುದ್ಧ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿದೆ. ಇನ್ನು, ಇಸ್ರೆಲ್ ನಲ್ಲಿ ಈ ಹಿಂದೆ ದಿನವೊಂದಕ್ಕೆ ಸುಮಾರು ಹತ್ತು ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದಿದ್ದು, ಈಗ ಅದು ನೂರರ ಸಂಖ್ಯೆಗೆ ಇಳಿದಿದೆ. ಮತ್ತು ಮರಣ ಪ್ರಮಾಣವೂ ಕೂಡ ಇಳಿದಿದೆ ಎಂದು ವರದಿಗಳು ತಿಳಿಸಿವೆ.

Advertisement

ಇನ್ನು, ಸೋಂಕು ಇಸ್ರೇಲ್ ನಲ್ಲಿ ಗಣನೀಯವಾಗಿ ಇಳಿಕೆ ಕಂಡಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ಪುನರಾಂಭಗೊಂಡಿದ್ದು, ಒಳಾಂಗಣ ಕ್ರೀಡಾಂಗಣಗಳಲ್ಲಿ ಅವಕಾಶವನ್ನು ಒದಗಿಸಲಾಗಿದೆ.  ಹೆಚ್ಚು ಗುಂಪು ಸೇರುವಲ್ಲಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ ಎಂದು ವರದಿ ತಿಳಿಸಿದೆ. ಇನ್ನು, ಮೇ ತಿಂಗಳಿನಿಂದ ವಿದೇಶಿಯರಿಗೆ ಇಸ್ರೇಲ್ ದೇಶಕ್ಕೆ ಆಗಮಿಸಲು ಅವಕಾಶ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.

ಓದಿ : ರಾಷ್ಟ್ರಪ್ರಶಸ್ತಿ ವಿಜೇತೆ, ಮರಾಠಿ ಚಿತ್ರರಂಗದ ಖ್ಯಾತ ನಿರ್ದೇಶಕಿ ಸುಮಿತ್ರಾ ಭಾವೆ ಇನ್ನಿಲ್ಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next