Advertisement

ಮಾಸ್ಕ್ ನಿಬಂಧನೆ ತೆರವು ಆವಶ್ಯಕವೇ?

02:51 AM May 20, 2021 | Team Udayavani |

ಅಮೆರಿಕದ ರೋಗ ನಿಯಂತ್ರಣ ಹಾಗೂ ತಡೆ ಸಂಸ್ಥೆ (ಸಿಡಿಸಿ) ಎರಡು ಡೋಸ್‌ ಲಸಿಕೆ ಪಡೆದ ಅಮೆರಿಕನ್ನರು ಮಾಸ್ಕ್ ಧರಿಸುವುದು ಬೇಡ ಎಂಬ ಪ್ರಕಟನೆೆ ನೀಡಿದ್ದು, ಅಮೆರಿಕ ಹಾಗೂ ಇತರೆಡೆ ಚರ್ಚೆಗೆ ಗ್ರಾಸವಾಗಿದೆ. ಭಾರತದಲ್ಲಿಯೂ ಈ ನಿಯಮ ಜಾರಿಗೊಳಿಸಬಹುದೇ ಎಂಬ ಪ್ರಶ್ನೆಯನ್ನು ಮುಂದಿಟ್ಟಾಗ ನಮ್ಮ ತಜ್ಞರು ಹೀಗೆ ಹೇಳಿದ್ದಾರೆ.

Advertisement

ವೈಜ್ಞಾನಿಕ ಆಧಾರವಿಲ್ಲ
ಅಮೆರಿಕದ ಸಿಡಿಸಿ ಸಿದ್ಧಾಂತಕ್ಕೆ ವಿಜ್ಞಾನಲೋಕದ ಬೆಂಬಲವಿಲ್ಲ. ಯಾವುದೇ ದೇಶದ ಶೇ. 70ರಷ್ಟು ಜನಸಂಖ್ಯೆಗೆ ಲಸಿಕೆ ಪೂರ್ಣಪ್ರಮಾಣದಲ್ಲಿ ದೊರತರೆ ಮಾತ್ರ ಆ ದೇಶದಲ್ಲಿ ತಕ್ಕಮಟ್ಟಿಗಿನ ರೋಗ ನಿರೋಧಕತೆ ಸೃಷ್ಟಿಯಾಗಿದೆ ಎಂದರ್ಥ. ಅಷ್ಟಾಗುವ ಮೊದಲೇ ಕೊರೊನಾ ನಿಬಂಧನೆಗಳನ್ನು ಸಡಿಲಿಸುವುದು ಸರಿಯಲ್ಲ. ಭಾರತದಲ್ಲಂತೂ ಹಾಗೆ ಮಾಡಲು ಸಾಧ್ಯವೇ ಇಲ್ಲ ಎಂದು ಭಾರತೀಯ ವೈದ್ಯಕೀಯ ಸಂಸ್ಥೆಯ (ಐಎಂಸಿ) ಡಾ| ಜೆ.ಎ. ಜಯಲಾಲ್‌ ಹೇಳಿದ್ದಾರೆ.

ಅಮೆರಿಕ-ಭಾರತ ಪರಿಸ್ಥಿತಿ ಭಿನ್ನ
ಕೊರೊನಾ ವೈರಾಣುಗಳು ವೇಗವಾಗಿ ರೂಪಾಂತರಗೊಳ್ಳುತ್ತಿವೆ. ಹಾಲಿ ಲಸಿಕೆಗಳು ಹೊಸ ಪೀಳಿಗೆಯ ವೈರಾಣುಗಳನ್ನು ಎದುರಿಸುವಲ್ಲಿ ಶಕ್ತಿಶಾಲಿಯಲ್ಲ. ಹಾಗಾಗಿ, ಎರಡು ಡೋಸ್‌ ಲಸಿಕೆ ಪಡೆದವರೂ ಸೇಫ್ ಆಗಿ ಇರಲೇಬೇಕು ಎಂದು ದಿಲ್ಲಿಯ ಗಂಗಾರಾಮ್‌ ಆಸ್ಪತ್ರೆಯ ಡಾ| ಚಾಂದ್‌ ವಟ್ಟಾಲ್‌ ತಿಳಿಸಿದ್ದಾರೆ. ಜನಸಂಖ್ಯೆ ಹಾಗೂ ಲಸಿಕೆ ಅಭಿಯಾನ ವಿಚಾರದಲ್ಲಿ ಭಾರತ- ಅಮೆರಿಕದ ಪರಿಸ್ಥಿತಿ ಪರಸ್ಪರ ವಿಭಿನ್ನ. ನಮ್ಮಲ್ಲಿ ಅಮೆರಿಕದ ಹಾಗೆ ನಿಬಂಧನೆ ತೆರವುಗೊಳಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಆರೋಗ್ಯ ಸಚಿವಾಲಯ ಏನು ಹೇಳುತ್ತದೆ?
ಕೇಸ್‌ಗಳು ತಕ್ಕಮಟ್ಟಿಗೆ ಇಳಿದಿವೆಯಾದರೂ ಸಂಪೂರ್ಣವಾಗಿ ನಿಂತಿಲ್ಲ. ಹಾಗಾಗಿ, ಕೊರೊನಾ ನಿಬಂಧನೆಗಳನ್ನು ಸಡಿಲ ಮಾಡುವಂತೆಯೇ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆಗೆ ತಜ್ಞರ ಸಲಹಾ ಸಮಿತಿ ಈಗಾಗಲೇ ಶಿಫಾರಸು ಮಾಡಿದೆ. ಸಮಿ ತಿಯ ಸದಸ್ಯರೊಬ್ಬರಾದ ಏಮ್ಸ್‌ ನಿರ್ದೇಶಕ ಡಾ| ಗುಲೇರಿಯಾ, ಕೊರೊನಾ ವೈರಾಣುವಿನ ಹೊಸ ಪೀಳಿಕೆಯ ವೈರಾಣುಗಳು ಬಹುಬೇಗನೇ ರೂಪಾಂತರಗೊಳ್ಳುತ್ತಿದೆ. ಹಾಗಾಗಿ ನಿಯಮ ಹಿಂಪಡೆದರೆ ಅಪಾಯ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next