Advertisement

1857 ಸಿಪಾಯಿ ದಂಗೆ ಕಾಲದ ಶಸ್ತ್ರಾಸ್ತ್ರ ಹೊಲದಲ್ಲಿ ಪತ್ತೆ!

01:37 AM Nov 09, 2024 | Team Udayavani |

ಶಹಜಹಾನ್‌ಪುರ್‌: 1857ರ ಸಿಪಾಯಿ ದಂಗೆಯಲ್ಲಿ ಬಳಸಿರಬಹುದು ಎಂದು ಶಂಕಿಸಲಾದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಉತ್ತರಪ್ರದೇಶದ ಶಹಜಹಾನ್‌ಪುರದ ಕೃಷಿ ಭೂಮಿಯೊಂದರಲ್ಲಿ ಪತ್ತೆ ಯಾಗಿವೆ. ಬಾಬುರಾಮ್‌ ಎಂಬ ರೈತ ತನ್ನ ಹೊಲದಲ್ಲಿ ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ಖಡ್ಗವನ್ನು ಹೋಲುವ ಕಬ್ಬಿಣದ ರಚನೆಯೊಂದು ದೊರೆತಿದೆ. ಬಳಿಕ ಇನ್ನಷ್ಟು ಅಗೆದಾಗ ಮಣ್ಣಿ ನೊಳಗೆ ಹೂತಿಟ್ಟಿದ್ದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.

Advertisement

ಒಟ್ಟು 23 ಖಡ್ಗಗಳು, 12 ರೈಫ‌ಲ್‌ಗ‌ಳು ಮತ್ತು ಒಂದೊಂದು ಈಟಿ ಮತ್ತು ಕಠಾರಿಗಳು ಸಿಕ್ಕಿವೆ. ಅಲ್ಲದೇ ಲಭ್ಯ ರೈಫ‌ಲ್‌ಗ‌ಳ ಕಬ್ಬಿಣದ ಭಾಗ ಮಾತ್ರ ಉಳಿದುಕೊಂಡಿದ್ದು, ಮರದಿಂದ ರಚಿತವಾದ ಇತರ ಭಾಗಗಳು ನಾಶವಾಗಿದೆ. ಒಂದು ಬಂದೂಕಿನೊಳಗೆ ಗನ್‌ ಪೌಡರ್‌ ಕೂಡ ಪತ್ತೆಯಾಗಿದೆ. ವಿನ್ಯಾಸದ ಆಧಾರದಲ್ಲಿ ಇವು ಮ್ಯಾಚ್‌ಲಾಕ್‌ ಬಂದೂಕುಗಳಾಗಿರಬಹುದು ಎಂದು ಶಂಕಿಸಲಾಗಿದೆ.

ಈ ಶಸ್ತ್ರಾಸ್ತ್ರಗಳ ಕುರಿತು ಇತಿಹಾಸ ತಜ್ಞರೊಬ್ಬರು ಮಾಹಿತಿ ನೀಡಿದ್ದು, ಲಭ್ಯ ಶಸ್ತ್ರಾಸ್ತ್ರಗಳು ಮೊಘಲರ ಕಾಲದಲ್ಲಿದ್ದ ರೋಹಿಲ್ಲಾ ಪಂಗಡದವರಿಗೆ ಸೇರಿರಬಹುದು ಇಲ್ಲವೇ ಸಿಪಾಯಿ ದಂಗೆಯ ಸಂದರ್ಭದಲ್ಲಿ ಕ್ರಾಂತಿಕಾರಿಗಳು ಬ್ರಿಟಿಷರ ಕಣ್ತಪ್ಪಿಸಲು ಬಚ್ಚಿಟ್ಟಿದ್ದಾಗಿರಬ ಹುದು ಎಂದು ಶಂಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next