Advertisement

ಕುಬೇರರ ಬಳಿ 4 ಪಟ್ಟು ಆಸ್ತಿ : ದೇಶದ ಬಡವರ ಒಟ್ಟು ಆಸ್ತಿ ಮೀರಿಸುವ ಶ್ರೀಮಂತರ ಸಂಪತ್ತು

10:19 AM Jan 22, 2020 | Hari Prasad |

ದಾವೋಸ್‌: ಭಾರತದ ಜನಸಂಖ್ಯೆಗೆ ಹೋಲಿಸಿದರೆ ಶೇ. 1ರಷ್ಟು ಇರುವ ಕುಬೇರರಲ್ಲಿ ಇರುವ ಸಂಪತ್ತು ದೇಶದ ಜನಸಂಖ್ಯೆಯಲ್ಲಿ ಶೇ.70ರಷ್ಟಿರುವ ಬಡವರ ಒಟ್ಟಾರೆ ಆಸ್ತಿಪಾಸ್ತಿಗಿಂತ ನಾಲ್ಕು ಪಟ್ಟು ಹೆಚ್ಚು ಎಂದು ಆಕ್ಸ್‌ಫಾಮ್‌ ಎಂಬ ಸಂಸ್ಥೆ ನಡೆಸಿರುವ ‘ಟೈಮ್‌ ಟು ಕೇರ್‌’ ಎಂಬ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

Advertisement

ದಾವೋಸ್‌ನಲ್ಲಿ ಆಯೋಜಿಸಲಾಗಿರುವ ’50ನೇ ವಿಶ್ವ ಆರ್ಥಿಕ ಸಮ್ಮೇಳನ’ಕ್ಕೂ (ಡಬ್ಲ್ಯುಇಎಫ್) ಮುನ್ನ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಜತೆಗೆ, ಈ ಕುಬೇರರ ಬಳಿಯಿರುವ ಸಂಪತ್ತು, ಭಾರತದ ಆರು ತಿಂಗಳ ಬಜೆಟ್‌ಗೆ ಸಮನಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತಕ್ಕೆ ಕೆಳಕ್ರಮಾಂಕ: ಇನ್ನೊಂದೆಡೆ, ಸಾಮಾಜಿಕ ಚಲನಶೀಲತೆಯ ಅವಕಾಶಗಳನ್ನು ತನ್ನ ಪ್ರಜೆಗಳಿಗೆ ಕಲ್ಪಿಸಿರುವ ವಿಶ್ವದ 82 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 76ನೇ ಸ್ಥಾನ ಪಡೆದಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ, ತನ್ನ ಜೀವನದ ಅಗತ್ಯತೆಗಳನ್ನು ಪಡೆಯಲು ಇರುವ ಸಮಾನ ಅವಕಾಶಗಳನ್ನು ಸಾಮಾಜಿಕ ಚಲನಶೀಲತೆ ಎನ್ನಲಾಗುತ್ತದೆ.

ಆರೋಗ್ಯ, ಶಿಕ್ಷಣ, ತಂತ್ರಜ್ಞಾನ, ಉದ್ಯೋಗ, ಸಾಮಾಜಿಕ ಸುರಕ್ಷತೆ, ಸಾಂಸ್ಥಿಕ ಬೆಂಬಲ… ಇವೆ ಮುಂತಾದುವನ್ನು ಮಾನದಂಡವಾಗಿರಿಸಿ ಈ ಪಟ್ಟಿ ತಯಾರಿಸಲಾಗಿದೆ. ದಾವೋಸ್‌ನ ವಿಶ್ವ ಆರ್ಥಿಕ ಶೃಂಗಸಭೆಗೂ ಮುನ್ನ ರವಿವಾರ ಈ ಕುರಿತ ವರದಿಯೊಂದನ್ನು ಬಿಡುಗಡೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next