Advertisement
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಅನರ್ಹ ಶಾಸಕರ ಪರ ಬಿಜೆಪಿ ನಾಯಕರು ವ್ಯತಿರೀಕ್ತ ಹೇಳಿಕೆ ನೀಡುತ್ತಿರುವ ವಿಚಾರದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಯಾವುದೇ ಬೇಸರ ವ್ಯಕ್ತಪಡಿಸಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ಅವರ ಪರವಾಗಿ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಪಕ್ಷ ಏನು ಹೇಳುತ್ತದೆ ನಾವು ಆ ಕೆಲಸ ಮಾಡುತ್ತೇವೆ ಅವರ ಪರವಾಗಿ ನಾವು ನಿಲ್ಲುತ್ತೇವೆ. ಪಕ್ಷದ ನಿರ್ಣಯಕ್ಕೆ ಬದ್ಧ ಎಂದರು.
Related Articles
Advertisement
ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಪರಿಹಾರ ಕೊಟ್ಟಿಲ್ಲ ಎನ್ನುವುದನ್ನ ತಮ್ಮ ಬದಾಮಿಯಲ್ಲಿಯೇ ತೋರಿಸಿ ಕೊಡಲಿ. ಯಾರಿಗೆ 1 ಲಕ್ಷ ಪರಿಹಾರ ಕೊಟ್ಟಿಲ್ಲ ಎಂದು ಸಾಬೀತು ಪಡಿಸಲಿ. ಪಠ್ಯ ಪುಸ್ತಕ ಕೊಟ್ಟಿಲ್ಲ ಎಂದು ಹೇಳಿದ್ದಾರಲ್ಲ. ಅದನ್ನು ತೋರಿಸಿ ಕೊಡಲಿ ಎಂದರು.
ಹಿಂಬಾಗಿಲಿನ ರಾಜಕಾರಣ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು ಕಾಂಗ್ರೆಸ್ ಏನು ಮುಂಬಾಗಿಲಿನ ಮೂಲಕ ಅಧಿಕಾರ ಹಿಡಿದಿದೆಯಾ ? ಒಂದಿ ದಿನವಾದರೂ ಶಾಸಕಾಂಗ ಸಭೆ ನಡೆಸಿ ಮಾತನಾಡಿದ್ದಾರಾ ? 14 ತಿಂಗಳ ಅಧಿಕಾರ ನಡೆಸಿದ್ದಾರಲ್ಲ. ಸರಿಯಾಗಿ ಸಂಸಾರ ನಡೆಸಿದ್ದಾರಾ ? ಎಂದರು.
ಇನ್ನೂ ಮರಳು ನೀತಿಗೆ ತಿದ್ದುಪಡಿ ಕುರಿತಂತೆ ನಮ್ಮ ಶಾಸಕರ ತಂಡವು ಗುಜರಾತ್ ರಾಜ್ಯಕ್ಕೆ ತೆರಳಿ ಅಲ್ಲಿನ ಮರಳು ತೆಗೆಯುವ ಕುರಿತಂತೆ ಮಾಹಿತಿ ಪಡೆದು ವಾಪಾಸ್ಸಾಗಿದೆ. ಅಲ್ಲಿನ ಮರಳು ನೀತಿಯ ಕುರಿತು ಸಿಎಂ ಜೊತೆ ಚರ್ಚಿಸಿ ಅದು ಸೂಕ್ತವೆನಿಸಿದರೆ ರಾಜ್ಯದಲ್ಲಿ ಅದನ್ನ ಅಳವಡಿಕೆ ಮಾಡುತ್ತೇವೆ. ಈಗಗಲೆ ಅಕ್ರಮದ ಬಗ್ಗೆ ಕಡಿವಾಣ ಹಾಕಲಾಗಿದೆ. ಆದರೂ ಸ್ವಲ್ಪ ಅಕ್ರಮ ನಡೆಯುತ್ತಿವೆ. ದಕ್ಷ ಅಧಿಕಾರಿ ನಿಯೋಜಿಸಿ ಕ್ರಮ ಕೈಗೊಳ್ಳಲಿದ್ದೇವೆ ಎಂದರು.