Advertisement
ಮೊಬೈಲ್ ಸಿಗದಿದ್ರೆ ವಿಚ್ಛೇದನ ನೀಡುತ್ತಿದ್ದರು: ಶಮಿ ಪತ್ನಿ ಹಸಿನ್ನವದೆಹಲಿ: ಶಮಿ ಗೌಪ್ಯವಾಗಿ ಇಟ್ಟುಕೊಂಡಿರುವ ಮೊಬೈಲ್ ನನ್ನ ಕೈಗೆ ಸಿಗದಿದ್ದರೆ ಈಗಾಗಲೇ ಅವರು ತನಗೆ ವಿಚ್ಛೇದನ ನೀಡಿರುತ್ತಿದ್ದರು ಎಂದು ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ಆರೋಪಿಸಿದ್ದಾರೆ.
Related Articles
ಹಸಿನ್ ಜಹಾನ್‌ಗೆ ಶಮಿ ಮೊದಲನೇ ಪತಿ ಅಲ್ಲ ಅನ್ನುವ ಕುತೂಹಲಕಾರಿ ವಿಷಯ ಹೊರಬಂದಿದೆ. ಐಪಿಎಲ್‌ವೊಂದರಲ್ಲಿ ಭೇಟಿಯಾದ ಶಮಿ ಮತ್ತು ಹಸಿನ್ ಸ್ನೇಹಿತರಾಗಿ ನಂತರ ಪ್ರೇಮಿಗಳಾಗಿ 2012 ರಿಂದ ಡೇಟಿಂಗ್ ಆರಂಭಿಸಿದ್ದರು. 2014 ರಲ್ಲಿ ವಿವಾಹವಾಗಿದ್ದು, ಈ ಜೋಡಿಗೆ 3 ವರ್ಷದ ಹೆಣ್ಣು ಮಗಳು ಇದ್ದಾರೆ. ಆದರೆ ಹಸಿನ್ ಇದಕ್ಕೂ ಮುನ್ನ ಮತ್ತೂಬ್ಬನ್ನನು ವಿವಾಹವಾಗಿ ವಿಚ್ಚೇದನ ಪಡೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಹಸಿನ್ ಅವರ ಮೊದಲನೇ ಪತಿ ಸೈಫುದ್ದೀನ್, ಶಮಿ ಮತ್ತು ಹಸಿನ್ ನಡುವಿನ ಘಟನೆಗೂ ನನಗೂ ಸಂಬಂಧವಿಲ್ಲ. ತಾನು 10ನೇ ತರಗತಿಯಲ್ಲಿದ್ದಾಗ ಹಸಿನ್‌ಗೆ ಪ್ರಪೋಸ್ ಮಾಡಿದ್ದೆ. 2002 ರಿಂದ ನಾವು ಜತೆಯಾಗಿಯೇ ಇದ್ದೇವು. ನಮಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. 2010ರಲ್ಲಿ ನಮಗೆ ವಿಚ್ಛೇದನವಾಗಿದೆ. ಆ ನಂತರ ಆಗಾಗ ಫೋನ್ ಮಾಡಿ ಮಕ್ಕಳ ಬಗ್ಗೆ ವಿಚಾರಿಸುತ್ತಿದ್ದಳು ಎಂದು ತಿಳಿಸಿದ್ದಾರೆ ಎಂದು ಆಗ್ಲ ಮಾಧ್ಯಮಗಳು ವರದಿ ಮಾಡಿವೆ.
Advertisement