Advertisement

“ಉ.ಪ್ರ.ದಲ್ಲಿ ಕ್ಷಿಪಣಿಯನ್ನೇ ಉತ್ಪಾದಿಸುತ್ತೇವೆ”: ರಾಜನಾಥ ಸಿಂಗ್‌

09:05 PM Jun 17, 2023 | Team Udayavani |

ಲಕ್ನೋ: ಉತ್ತರ ಪ್ರದೇಶದ ರಕ್ಷಣಾ ಕಾರಿಡಾರ್‌ನಲ್ಲಿ ಬರೀ ನಟ್‌-ಬೋಲ್ಟ್‌ಗಳನ್ನಲ್ಲ, ಶತ್ರುಗಳ ಹಿಮ್ಮೆಟ್ಟಿಸುವ ಬ್ರಹ್ಮೋಸ್‌ನಂಥ ಬಲಿಷ್ಠ ಕ್ಷಿಪಣಿ, ಡ್ರೋನ್‌ಗಳು, ತಂತ್ರಜ್ಞಾನ ಚಾಲಿತ ಯುದ್ಧ ಉಪಕರಣಗಳು, ಯುದ್ಧ ವಿಮಾನಗಳನ್ನು ಉತ್ಪಾದಿಸಲಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಶನಿವಾರ ಹೇಳಿದ್ದಾರೆ.

Advertisement

ಲಕ್ನೋನಲ್ಲಿ ಆತ್ಮನಿರ್ಭರ ಭಾರತದ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜನಾಥ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ಉತ್ತರ ಪ್ರದೇಶ ಹಾಗೂ ತಮಿಳುನಾಡಿನ ರಕ್ಷಣಾ ಕಾರಿಡಾರ್‌ಗಳು ಭಾರತ ಸರ್ಕಾರದ ಮಹತ್ತರ ಯೋಜನೆಗಳಲ್ಲೊಂದಾಗಿವೆ. ಈ ಕಾರಿಡಾರ್‌ಗಳಲ್ಲಿ ರಕ್ಷಣಾ ಪರಿಕರಗಳಿಗೆ ಬೇಕಾಗುವ ನಟ್‌-ಬೋಲ್ಟ್‌ಗಳನ್ನು ಮಾತ್ರವಲ್ಲ, ಸ್ವತಃ ಬ್ರಹ್ಮೋಸ್‌ನಂಥ ಕ್ಷಿಪಣಿಗಳನ್ನೂ ಉತ್ಪಾದಿಸಲಾಗುತ್ತದೆ. ಈ ಮಹತ್ವಾಕಾಂಕ್ಷೆಯ ಕಾರಿಡಾರ್‌ಗಳು ರಕ್ಷಣಾ ವ್ಯವಸ್ಥೆಯಲ್ಲಿ ವಿದೇಶಗಳ ಅವಲಂಬನೆಯನು ತಗ್ಗಿಸುವುದು ಮಾತ್ರವಲ್ಲದೇ, ರಕ್ಷಣಾ ಕ್ಷೇತ್ರವನ್ನು ಅತೀ ಪ್ರಭಾವಶಾಲಿಯನ್ನಾಗಿಸುತ್ತವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next