Advertisement

DMK; ಮೋದಿಯನ್ನು ಮನೆಗೆ ಕಳಿಸೋವರೆಗೂ ನಾವು ನಿದ್ದೆ ಮಾಡಲ್ಲ: ಉದಯನಿಧಿ ಸ್ಟಾಲಿನ್‌

12:05 AM Mar 27, 2024 | Team Udayavani |

ಚೆನ್ನೈ: “ಡಿಎಂಕೆ ನಾಯಕರಿಗೆ ನಿದ್ರೆಯೇ ಬರುತ್ತಿಲ್ಲ’ ಎಂದು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿರುವ ಡಿಎಂಕೆ ನಾಯಕರೂ ಆಗಿರುವ ಸಚಿವ ಉದಯನಿಧಿ ಸ್ಟಾಲಿನ್‌, “ನಿಮ್ಮನ್ನು (ಮೋದಿ) ಮತ್ತು ಬಿಜೆಪಿ ಯನ್ನು ಮನೆಗೆ ಕಳುಹಿಸೋವರೆಗೂ ನಾವು ನಿದ್ದೆ ಮಾಡಲ್ಲ’ ಎಂದು ಹೇಳಿದ್ದಾರೆ.

Advertisement

ಮಂಗಳವಾರ ತಿರುವಣ್ಣಾಮಲೈನಲ್ಲಿ ಆಯೋಜಿಸಲಾಗಿದ್ದ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್‌, “2014ರಲ್ಲಿ ಗ್ಯಾಸ್‌ ಸಿಲಿಂಡರ್‌ ಬೆಲೆ 450 ರೂಪಾಯಿ ಇತ್ತು. ಅದೀಗ 1,200 ರೂ. ಆಗಿದೆ. ಚುನಾವಣೆ ಎದುರಾಗುತ್ತಿದ್ದಂತೆ ಪ್ರಧಾನಿ ಮೋದಿ 100 ರೂ. ಇಳಿಕೆ ಮಾಡಿ ನಾಟಕ ಮಾಡುತ್ತಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ಅವರು ಮತ್ತೆ ಗ್ಯಾಸ್‌ ಸಿಲಿಂಡರ್‌ ಬೆಲೆಯನ್ನು 500 ರೂ. ಹೆಚ್ಚಿಸುತ್ತಾರೆ’ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next