Advertisement

ಕರಾವಳಿ ಭಾಗದಲ್ಲಿ ವಿಶೇಷ ಕಠಿಣ ಕ್ರಮ ಜಾರಿ ಮಾಡುತ್ತೇವೆ: ಸಿಎಂ ಬೊಮ್ಮಾಯಿ

11:39 AM Jul 29, 2022 | Team Udayavani |

ಬೆಂಗಳೂರು: ಕರಾವಳಿಯಲ್ಲಿ ನಡೆಯುತ್ತಿರುವ ಕೊಲೆ ಪ್ರಕರಣಗಳ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಅಲ್ಲಿನ ಎಡಿಜಿಪಿಎ ಸೂಚನೆ ನೀಡಿದ್ದೇನೆ. ಪ್ರತಿಯೊಂದು ಕೊಲೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಬೆಂಗಳೂರಿನಲ್ಲಿ ಡಿಜಿ, ಐಜಿಪಿ ಮತ್ತು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಆರ್.ಟಿ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ವಿಶೇಷ ಕಠಿಣ ಕ್ರಮ ಜಾರಿ ಮಾಡುವ ಬಗ್ಗೆ ಚರ್ಚೆ ನಡೆಸುತ್ತೇನೆ. ಕರಾವಳಿ ಕರ್ನಾಟಕ ಭಾಗದಲ್ಲಿ ನಿರ್ಬಂಧ ಹೇರುವ ಬಗ್ಗೆ ಚರ್ಚೆ ನಡೆಸುತ್ತೇನೆ. ಕರ್ನಾಟಕದಿಂದ ಕೇರಳ ಗಡಿಗೆ ಓಡಾಡುವ 58 ರಸ್ತೆಗಳಿದೆ. ಈ ವಿಚಾರವಾಗಿ ಉನ್ನತ ಮಟ್ಟದಲ್ಲಿ ಸಭೆ ನಡೆಸುತ್ತೇನೆ ಎಂದರು.

ಇದನ್ನೂ ಓದಿ:ಜನ್ಮದಿನದಂದೇ ಮಣ್ಣಲ್ಲಿ ಮಣ್ಣಾದ ಫಾಝಿಲ್: ಅಂತಿಮ ದರ್ಶನಕ್ಕೆ ಜನಸಾಗರ; ಪೊಲೀಸ್ ಬಿಗಿ ಭದ್ರತೆ

ಕಾನೂನು ಸುವ್ಯವಸ್ಥೆ ವಿಫಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯ ಇದ್ದಾಗ ಸರಣಿ ಕೊಲೆಯಾಗಿದೆ. ಆಗ ಅವರು ಏನು ಮಾಡುತ್ತಿದ್ದರು? ಎಲ್ಲವನ್ನೂ ರಾಜಕೀಯ ಕನ್ನಡಕದಲ್ಲಿ ನೋಡುವುದಲ್ಲ. ನಾವು ಸರಿಯಾಗಿ ಪರಿಸ್ಥಿತಿ ನಿಭಾಯಿಸಿದ್ದೇವೆ. ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಎಸ್ ಡಿಪಿಐ, ಮತ್ತು ಪಿ‌ಎಫ್ಐ ಮೇಲಿನ ಕೇಸ್ ತೆಗೆದಿದ್ದೆ ಇದಕ್ಕೆಲ್ಲ‌ ಕಾರಣವಾಗಿದೆ. ಸಂಘಟಿತ ಅಪರಾಧವನ್ನು ಮಟ್ಟ ಹಾಕುವ ಕೆಲಸ ಮಾಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next