Advertisement
ಪಾಕಿಸ್ತಾನ ಯಾವುದೇ ರೀತಿಯ ದುಸ್ಸಾಹಸಕ್ಕೆ ಕೈ ಹಾಕಿದರೂ, ನಾವು ಪ್ರಬಲವಾಗಿ ಎದುರಿಸುತ್ತೇವೆ, ನಾವು ಎಲ್ಲದಕ್ಕೂ ಸಿದ್ಧವಾಗಿದ್ದೇವೆಎಂದು ಭಾರತೀಯ ಸೇನೆಯ ಮೂರು ವಿಭಾಗದ ಅಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ, ದೇಶವಾಸಿಗಳಿಗೆ ಅಭಯ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಮೂರು ವಿಭಾಗದ ಹಿರಿಯ ಅಧಿಕಾರಿಗಳು, ಪಾಕಿಸ್ತಾನದ ಸುಳ್ಳಿನ ಸರಮಾಲೆಯನ್ನೇ ಬಯಲು ಮಾಡಿದ್ದಾರೆ. ವರ್ಧಮಾನ್ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿರುವುದನ್ನು ಸ್ವಾಗತಿಸಿರುವ ವಾಯುಸೇನೆಯ ವೈಸ್ ಏರ್ ಮಾರ್ಷಲ್ ಆರ್‌ಜಿಕೆ ಕಪೂರ್, ಇದು ಪಾಕಿಸ್ತಾನದ ಸದ್ಭಾವನೆಯ ನಡೆಯಲ್ಲ, ಜಿನೇವಾ ಒಪ್ಪಂದದ ಪಾಲನೆಯಷ್ಟೇ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ವಾಯು ಸೇನೆ ಕಡೆಯಿಂದ ವೈಸ್ ಏರ್ ಮಾರ್ಷಲ್ ಆರ್‌ಜಿಕೆ ಕಪೂರ್, ಭೂಸೇನೆ ಕಡೆಯಿಂದ ಆರ್ಮಿ ಮೇಜರ್ ಜನರಲ್ ಎಸ್.ಎಸ್.ಮಹಲ್ ಮತ್ತು ನೌಕಾಪಡೆ ಕಡೆಯಿಂದ ನೆವ್ವಿ ರಿಯರ್ ಅಡ್ಮಿರಲ್ ದಲ್ಬಿàರ್ ಸಿಂಗ್ ಗುಜ್ರಾಲ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
Related Articles
Advertisement
ಬಾಲಕೋಟ್ ಮತ್ತು ಇತರ ಎರಡು ಉಗ್ರ ಶಿಬಿರಗಳ ಮೇಲೆ ನಡೆಸಲಾಗಿರುವ ದಾಳಿಯಲ್ಲಿ ಎಷ್ಟು ಮಂದಿ ಉಗ್ರರು ಅಸುನೀಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಕಪೂರ್ ಈ ಸಂದರ್ಭದಲ್ಲಿ ಅದರ ಬಗ್ಗೆ ನಿಖರವಾಗಿ ಹೇಳಲಾಗದು ಎಂದರು.
ನಿರಂತರ ಟಾರ್ಗೆಟ್: ಪಾಕಿಸ್ತಾನ ಉಗ್ರರಿಗೆ ನೀಡುವ ಬೆಂಬಲ ನಿಲ್ಲುವ ವರೆಗೆ ಉಗ್ರರ ತರಬೇತಿ ಶಿಬಿರಗಳನ್ನು ಗುರಿಯಾಗಿರಿಸಿಕೊಂಡು ನಡೆಸುವ ದಾಳಿ ನಿಲ್ಲುವುದಿಲ್ಲ ಎಂದು ಭೂಸೇನೆಯ ಹಿರಿಯ ಅಧಿಕಾರಿ ಮೇ.ಜ.ಸುರೇಂದ್ರ ಸಿಂಗ್ ಮಹಲ್ ಎಚ್ಚರಿಕೆ ನೀಡಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲೂ ಕಟ್ಟೆಚ್ಚರ ಮುಂದುವರಿಯಲಿದೆ ಎಂದಿದ್ದಾರೆ. ಬುಧವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯ ಎರಡು ಪ್ರಮುಖ ಕೇಂದ್ರಗಳನ್ನು ಉಡಾಯಿಸಲು ಮುಂದಾಗಿತ್ತು ಎಂದಿದ್ದಾರೆ. ನೌಕಾಪಡೆಯ ಉಪ ಮುಖ್ಯಸ್ಥ ರಿಯರ್ ಎಡ್ಮಿರಲ್ ಡಿ.ಎಸ್.ಗುಜ್ರಾಲ್ ಮಾತನಾಡಿ, ನೌಕಾಪಡೆ ಕೂಡ ಎಲ್ಲಾ ರೀತಿಯ ಸವಾಲು ಎದುರಿಸಲು ಸಿದ್ಧವಾಗಿದೆ ಎಂದರು.
ಈಗಷ್ಟೇ ಒಂದು ‘ಪೈಲಟ್’ ಯೋಜನೆ ಪೂರ್ಣಗೊಂಡಿತು. ಪ್ರಾಯೋಗಿಕ ಯೋಜನೆ ಮುಗಿದ ಬಳಿಕ ನೈಜ ಯೋಜನೆ ಶುರುವಾಗುತ್ತದೆ. ಅಂತೆಯೇ, ನೈಜ ಯೋಜನೆ ಇನ್ನು ಆರಂಭವಾಗುತ್ತದೆ. ಇಷ್ಟು ದಿನ ನಡೆದಿದ್ದು ಕೇವಲ ಪ್ರಾಕ್ಟೀಸ್ ಅಷ್ಟೆ.– ನರೇಂದ್ರ ಮೋದಿ, ಪ್ರಧಾನಿ