Advertisement
ಜೆಡಿಎಸ್ ಬದಲು ನಮ್ಮದೇ ಅಭ್ಯರ್ಥಿಯಾಗಿ ಕಣದಲ್ಲಿದ್ದರೆ ಪ್ರಬಲ ಸ್ಪರ್ಧೆಯನ್ನಾದರೂ ನೀಡ ಬಹುದಿತ್ತು ಎಂಬ ಮಾತು ಕಾಂಗ್ರೆಸ್ ಮುಖಂಡರಿಂದ ಕೇಳಿಬಂದಿದೆ. ಹಾಗಾಗಿ ಕಾಂಗ್ರೆಸ್ ಮಂದಿ ಪ್ರಮೋದ್‌ರನ್ನು ಬಿಟ್ಟುಕೊಡಲಾರರು ಎಂದು ಭಾವಿಸಬಹುದು. ಆದರೆ ಜೆಡಿಎಸ್ ಕಡೆಯಿಂದ ಮಹತ್ವದ ಜವಾಬ್ದಾರಿಯ ಆಫರ್ ಬಂದರೆ ಅದನ್ನು ಒಪ್ಪಲೂ ಬಹುದು. ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಮುಖಂಡನಾಗಿಯೇ ಉಳಿದು ಮುಖ್ಯಮಂತ್ರಿ, ದೇವೇಗೌಡರ ಜತೆಗೆ ನಿಕಟ ಸಂಪರ್ಕ ಮುಂದು ವರಿಸುವ ಇರಾದೆಯೂ ಇರುವಂತಿದೆ. ಇದು “ಮೈತ್ರಿ ಧರ್ಮ’ಕ್ಕೂ ಸೂಕ್ತವಾದೀತು. ಆದರೆ ಮುಂದೆ ಚುನಾವಣೆಗಳು ಬಂದಾಗ ಇಲ್ಲವೆ ಅದಕ್ಕೂ ಮೊದಲು ಕಾಂಗ್ರೆಸ್‌ನಿಂದ ಆಕ್ಷೇಪ ಬಂದರೆ ಗಟ್ಟಿ ನಿರ್ಧಾರ ಅನಿವಾರ್ಯ.
ಮೊದಲ ಬಾರಿಗೆ 2013ರಲ್ಲಿ ಶಾಸಕನಾಗಿ ಆಯ್ಕೆಯಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ದಲ್ಲಿ ಸಚಿವರಾಗಿದ್ದ ಪ್ರಮೋದ್ ಕಾಂಗ್ರೆಸ್ ಕಟ್ಟಾಳು. ಆದರೆ ಕಳೆದ ವಿಧಾನಸಭಾ ಚುನಾವಣೆ ವೇಳೆ “ಬಿಜೆಪಿ ಸೇರುತ್ತಾರಂತೆ’ ಎಂಬ ವದಂತಿಗಳಿಗೆ ವಸ್ತುವಾದರು. ಆದಾಗ್ಯೂ ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 12,044 ಮತಗಳಿಂದ ಸೋಲುಂಡಿದ್ದರು. ಈ ಬಾರಿಯ
ಲೋಕಸಭಾ ಚುನಾವಣೆಯಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ 47,276 ಮತಗಳ ಹಿನ್ನಡೆ ಅನು ಭವಿಸಿದ್ದರು. ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ತನ್ನ ರಾಜಕೀಯ ವರ್ಚಸ್ಸು ಹೆಚ್ಚಿಸಿಕೊಂಡರೋ ಅಥವಾ ಕಾಂಗ್ರೆಸ್-ಜೆಡಿಎಸ್ ವರಿಷ್ಠರ ನಿರ್ಧಾರಕ್ಕೆ ಕಟ್ಟುಬಿದ್ದು ಕಾಂಗ್ರೆಸ್‌ನಲ್ಲಿ ತನ್ನ ಪ್ರಭಾವ ಕುಗ್ಗಿಸಿಕೊಂಡರೋ ಹೇಳಲಾಗದು. ಆದರೆ ದೇಶ ದಲ್ಲೇ ಮೊದಲ ಬಾರಿ ಎಂಬಂತೆ ಒಂದು ಪಕ್ಷದ ಮುಖಂಡನಾಗಿದ್ದುಕೊಂಡು ಮತ್ತೂಂದು ಪಕ್ಷದಿಂದ ಬಿ ಫಾರಂ ಪಡೆದಿದ್ದಂತೂ ಹೌದು. ಎರಡೂ ಪಕ್ಷಗಳಿಗೆ ನಾಯಕ
“ನಾನು ಎರಡು ಪಕ್ಷಗಳ ಮೈತ್ರಿ ಅಭ್ಯರ್ಥಿ. ಗೆದ್ದರೆ ಎರಡೂ ಪಕ್ಷದ ವರನ್ನು ಸಮಾನವಾಗಿ ಕಾಣುತ್ತೇನೆ. ಅದಕ್ಕಾಗಿಯೇ ಎರಡೂ ಪಕ್ಷಗಳ ಚಿಹ್ನೆ ಇರುವ ಶಾಲನ್ನು ಹಾಕಿ ಕೊಂಡಿದ್ದೇನೆ’ ಎಂದು ಪ್ರಮೋದ್ ಹೇಳುತ್ತಿದ್ದರು. ಆದರೆ ಕಾಂಗ್ರೆಸ್ ಸದಸ್ಯತ್ವದ ಕುರಿತ ಪ್ರಶ್ನೆಗೆ “ಅದನ್ನು ಪಕ್ಷದವರು ನೋಡಿಕೊಳ್ಳುತ್ತಾರೆ’ ಎಂದಷ್ಟೇ ಪ್ರತಿ ಕ್ರಿಯಿಸಿದ್ದರು. ಸದ್ಯ ಪ್ರಮೋದ್ ಕಾಂಗ್ರೆಸ್- ಜೆಡಿಎಸ್ ಮುಖಂಡರಾಗಿದ್ದಾರೆ.
Related Articles
Advertisement
ಕಾರ್ಯಕರ್ತರು ಕೈಕೊಟ್ಟರೆ?ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟ ವರಿಷ್ಠರ ಬಗ್ಗೆ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಎದ್ದಿತ್ತು. ಎಐಸಿಸಿ ಸದಸ್ಯ ಅಮೃತ್ ಶೆಣೈ ಬಂಡಾಯವಾಗಿ ಕಣಕ್ಕಿಳಿದಿದ್ದರು. ಕಟ್ಟಾ ಕಾಂಗ್ರೆಸಿಗರು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಲು ಹಿಂದೇಟು ಹಾಕಿರಬಹುದು ಎಂಬ ಲೆಕ್ಕಾಚಾರಗಳು ಮುನ್ನೆಲೆಗೆ ಬಂದಿವೆ. ಪ್ರಮೋದ್ ನಿರ್ಧಾರ
ಪ್ರಮೋದ್ ಕಾಂಗ್ರೆಸ್ ಅಭ್ಯರ್ಥಿಯಾಗಿಯೇ ಇದ್ದಿದ್ದರೆ ಪ್ರಬಲ ಸ್ಪರ್ಧೆ ನೀಡುತ್ತಿದ್ದೆವು. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಮುಂದುವರಿಸುತ್ತೇವೆ. ಪ್ರಮೋದ್ ಮುಂದಿನ ನಿರ್ಧಾರ ಅವರಿಗೆ ಬಿಟ್ಟದ್ದು.
– ಎಂ.ಎ. ಗಫೂರ್,
ಕೆಪಿಸಿಸಿ ಕಾರ್ಯದರ್ಶಿ ಜೆಡಿಎಸ್ ಸೇರಿ ತಪ್ಪು ಮಾಡಿದರು
ಪ್ರಮೋದ್‌ಗೆ ಕಾಂಗ್ರೆಸ್ ಅನ್ಯಾಯ ಮಾಡಿಲ್ಲ. ಅವರು ಮೊದಲ ಬಾರಿ ಶಾಸಕನಾದಾಗಲೇ ಅವರಿಗೆ ಸಚಿವ ಸ್ಥಾನ ನೀಡಿದರು. ಪ್ರಮೋದ್ ಮೇಲೆ ಗೌರವ ಇದೆ. ಆದರೆ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿ ದೊಡ್ಡ ತಪ್ಪು ಮಾಡಿದ್ದಾರೆ. ಅವರು ಯಾವ ಆಧಾರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು, ಅವರ ಮುಂದಿನ ನಡೆ ಏನು ಎಂಬುದು ಯಕ್ಷ ಪ್ರಶ್ನೆ.
-ಶೋಭಾ ಕರಂದ್ಲಾಜೆ