ಬೆಂಗಳೂರು: ‘ಒಂದು ದೇಶ- ಒಂದು ಚುನಾವಣೆ’ ವಿಚಾರದ ಬಗ್ಗೆ ರಾಜ್ಯ ವಿಧಾನ ಮಂಡಲ ಕಲಾಪದಲ್ಲಿ ಚರ್ಚೆ ನಡೆಸುತ್ತಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒನ್ ನೇಷನ್ ಒನ್ ಎಲೆಕ್ಷನ್ ಬಗ್ಗೆ ಚರ್ಚೆಯಿದೆ. ಇದರ ಚರ್ಚೆಗೆ ಅವಕಾಶ ಕೊಟ್ಟಿದ್ದು ಯಾರು? ಕೇಂದ್ರ ಸರ್ಕಾರವೇನಾದರೂ ಇದನ್ನು ಮಾಡಿ ಎಂದಿದೆಯೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಜಾರಕಿಹೊಳಿ ರಾಜೀನಾಮೆ: ರಾಜ್ಯ ರಾಜಕಾರಣದ ದಿಕ್ಕು ಬದಲಿಸುವ ಸಾಧ್ಯತೆ
ಇವತ್ತು ರಾಜ್ಯದಲ್ಲಿ ಏನೇನು ಸಮಸ್ಯೆಯಿದೆ. ಈ ಸಮಸ್ಯೆಗಳ ಬಗ್ಗೆ ಯಾಕೆ ಚರ್ಚೆ ಮಾಡಬಾರದು ಎಂದ ಅವರು, ದುಡ್ಡು ಕೊಟ್ಟು ಶಾಸಕರನ್ನು ಖರೀದಿ ಮಾಡಿದ್ದಾರೆ. ಇವರಿಗೆ ಇನ್ಯಾವ ಮೌಲ್ಯವಿದೆ ಎಂದು ಆರೋಪಿಸಿದರು.
ಈಗ ಒನ್ ನೇಷನ್ ಒನ್ ಎಲೆಕ್ಷನ್ ಎನ್ನುತ್ತಿದ್ದಾರೆ. ಇದನ್ನು ಯಾರ ಒತ್ತಡದ ಮೇಲೆ ತಂದಿದ್ದಾರೆ. ಇದರ ಬಗ್ಗೆ ಸಿಎಲ್ ಪಿ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಇದನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ಸ್ಪೀಕರ್ ನಡೆಗೆ ಡಿ ಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಒಂದು ದೇಶ-ಒಂದು ಚುನಾವಣೆ: ಸಾರ್ಥಕ ಚರ್ಚೆಯಾಗಲಿ