Advertisement

Mining; ಸಂಡೂರ ಪ್ರದೇಶದಲ್ಲಿ ಗಣಿಗಾರಿಕೆಗೆ ನಮ್ಮ ವಿರೋಧವಿದೆ: ಕರಡಿ ಸಂಗಣ್ಣ

10:06 PM Jul 07, 2024 | Team Udayavani |

ಕುಷ್ಟಗಿ: ಸಂಡೂರ ಪ್ರದೇಶದಲ್ಲಿ ಗಣಿಗಾರಿಕೆಗೆ ನಮ್ಮ ವಿರೋಧವಿದೆ ಎಂದು ಮಾಜಿ ಸಂಸದ ಕರಡಿ ಸಂಗಣ್ಣ ಹೇಳಿದರು.

Advertisement

ಕುಷ್ಟಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಿನ ಮಳೆ ಪ್ರಮಾಣ ಅವಲೋಕಿಸಿದರೆ ಕೊಪ್ಪಳ ಜಿಲ್ಲೆಗೆ ಶಾಕಿಂಗ್ ಆಗಿದೆ. ಎಲ್ಲೆಡೆ ಮಳೆಯಾಗುತ್ತಿದ್ದು ಇಲ್ಲಿ ಮಾತ್ರ ಮಳೆ ಇಲ್ಲ. ಸೊಂಡೂರು ಪ್ರದೇಶದಲ್ಲಿ ಗಣಿಗಾರಿಕೆ ನಡೆದರೆ ಅರಣ್ಯ ಪ್ರದೇಶ ಬರಿದಾಗಲಿದೆ. 99ಸಾವಿರ ಗಿಡಗಳನ್ನು ತೆರವುಗೊಳಿಸುವ ಮಾಹಿತಿ ಇದ್ದು ಅಲ್ಲಿನ ವನ್ಯ ಜೀವಿಗಳಿಗೆ ಧಕ್ಕೆ ಆಗಲಿದೆ. ಮುಂದುವರಿದ ದೇಶಗಳು ಮುಂದಿನ ಭವಿಷ್ಯದ ಆಸ್ತಿಯಾಗಿ ಖನಿಜ, ಅರಣ್ಯ, ವನ್ಯಜೀವ ಸಂಪತ್ತು ಸಂರಕ್ಷಿಸುತ್ತಿವೆ. ಪಕೃತಿಯ ಎಲ್ಲಾ ಸಂಪತ್ತು ನಮ್ಮ ಕಾಲಕ್ಕೆ ಮುಗಿಯಬಾರದು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ ಎಂದರು.

ದರೋಜಿ-ಗಂಗಾವತಿ ಮಾರ್ಗಕ್ಕೆ ಮಾತ್ರ ಅನುದಾನ ಕಲ್ಪಿಸಿ ಎಂದು ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ಗಂಗಾವತಿ ಮಾಜಿ ಶಾಸಕ ಪರಣ್ಣ ಮನವಳ್ಳಿ ಅವರು ಸಲ್ಲಿಸಿದ ಮನವಿ ಸರಿಯಾದ ಕ್ರಮ ಅಲ್ಲ ಎಂದು ಮಾಜಿ ಸಂಸದ ಕರಡಿ ಸಂಗಣ್ಣ ಹೇಳಿದರು.

ನಾನು ಮಾದ್ಯಮದಲ್ಲಿ ಗಮನಿಸಿದ್ದು, ಈ ಯೋಜನೆ ದರೋಜಿ-ಗಂಗಾವತಿಗೆ ಮಾತ್ರ ಸೀಮಿತವಲ್ಲ ಅದು ಬಾಗಲಕೋಟೆಯವರೆಗೂ ಇದೆ. ಇದಕ್ಕೆ ಅನುದಾನ ನೀಡಿ ಎಂದು ಮನವಿ ಕೊಟ್ಟಿದ್ದರೆ ಸಮಗ್ರ ಅಭಿವೃಧ್ಧಿ ಆಗಿರುತ್ತಿತ್ತು. ದರೋಜಿ-ಗಂಗಾವತಿ- ಬಾಗಲಕೋಟೆ ರೈಲ್ವೇ ಯೋಜನೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ನಮ್ಮ ಸಂಸದ ರಾಜಶೇಖರ ಹಿಟ್ನಾಳ ಅವರಲ್ಲಿ ಈ ಯೋಜನೆ ಅವಶ್ಯದ ಬಗ್ಗೆ ಪ್ರಸ್ತಾಪಿಸಿದ್ದು, ನಮ್ಮದೇ ಪಕ್ಷದ ಸರ್ಕಾರವಿದೆ ಈ ಯೋಜನೆಯ ಡಿಪಿಆರ್ ಈಗಾಗಲೇ ಆಗಿದ್ದು, ಶೇರಿಂಗ್ ಮುಖ್ಯವಾಗಿದೆ ರಾಜ್ಯದ ತನ್ನ ಪಾಲಿನ ಶೇರು ನೀಡಿದರೆ ಆದ್ಯತೆ ಮೇರೆಗೆ ಕಾರ್ಯಗತಗೊಳ್ಳಲು ಸಾದ್ಯವಿದೆ. ಕುಷ್ಟಗಿ-ನರಗುಂದ-ಘಟಪ್ರಭ ಹೊಸ ರೈಲು ಮಾರ್ಗದ ಪ್ರಸ್ತಾಪದ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಈ ಮಾರ್ಗವೂ ಕೂಡ ಸೂಕ್ತವಾಗಿದ್ದು ಸ್ವಾಗತಿಸುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next