Advertisement

“ಆಲೋಚನೆ ನಿಯಂತ್ರಿಸುವ ಶಕ್ತಿ ನಮ್ಮಲ್ಲಿರಬೇಕು’

02:15 AM Jul 13, 2017 | Team Udayavani |

ನೆಹರೂನಗರ:  ನಾವು ಏನಾಗಬೇಕು, ಏನು ಸಾಧಿಸ ಬೇಕು ಎಂಬುದನ್ನು  ನಿರ್ಧರಿಸಿಕೊಳ್ಳಬೇಕು. ಆಲೋಚನೆ, ನಡತೆ ಯನ್ನು ನಿಯಂತ್ರಿಸಿಕೊಳ್ಳಬಲ್ಲ  ಶಕ್ತಿ ನಮಗಿರಬೇಕು. ಆ ಮೂಲಕ ನಮಗೆ ನಾವೇ ನಾಯಕರಾಗಬೇಕು ಎಂದು ಜೇಸಿಐ ರಾಷ್ಟ್ರೀಯ ತರಬೇತುದಾರ ಕೃಷ್ಣ ಮೋಹನ್‌ ಹೇಳಿದರು.ಅವರು ವಿವೇಕಾನಂದ ಕಾಲೇಜಿನ 2017-18ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಸಮಾರಂಭದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

Advertisement

ವಿದ್ಯಾಭ್ಯಾಸ ಕೇವಲ ಪಠ್ಯ ಮತ್ತು ಅಂಕಕ್ಕೆ ಸೀಮಿತಗೊಳ್ಳದೆ, ಅದರ ಹೊರತಾದ ನೈತಿಕ ಶಿಕ್ಷಣದ ಕುರಿತೂ ವಿಸ್ತಾರವಾಗಬೇಕಾಗಿದೆ. ಚುನಾವಣೆ ಕೇವಲ ಕಾಲೇಜಿಗಷ್ಟೇ ಅಲ್ಲದೆ ದೇಶದ ಭವಿಷ್ಯಕ್ಕಾಗಿ ಯೂ ಅಗತ್ಯವಿದೆ. ಉತ್ತಮರ ಆಯ್ಕೆಗಾಗಿ ಚುನಾವಣೆ ಅನಿವಾರ್ಯ. ಶಾಲಾ ಕಾಲೇಜಿನಲ್ಲಿ ದೊರೆತ ನಾಯಕತ್ವದ ಅನುಭವ ವಿದ್ಯಾಭ್ಯಾಸದ ಅನಂತರದ ಜೀವನಕ್ಕೂ ಅನ್ವಯವಾಗಲಿ ಎಂದು ಹಾರೈಸಿದರು.

ಉನ್ನತಿಗಾಗಿ ವಿನಿಯೋಗ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲ ಪ್ರೊ| ಗೋಪಿನಾಥ್‌ ಶೆಟ್ಟಿ, ಅಧಿಕಾರದ ಆಸೆಗೆ ಪ್ರಜಾಪ್ರಭುತ್ವದ ಕಗ್ಗೊಲೆ ಆಗುವುದನ್ನು ತಡೆಯುವ ಶಕ್ತಿ ಯುವಜನತೆಯಲ್ಲಿದೆ. ಭ್ರಷ್ಟಾಚಾರ ಅಳಿಯುವಂತೆ ಮಾಡಲು ಯುವ ಪೀಳಿಗೆಯ ರಾಜಕೀಯ ಪ್ರವೇಶ ಇಂದಿನ ಅಗತ್ಯವಿದೆ. ಅನುಭವ, ವಿದ್ಯೆ ಕೇವಲ ಪ್ರಮಾಣ ಪತ್ರಕ್ಕೆ ಸೀಮಿತವಾಗದೆ, ಸಮಾಜದ, ದೇಶದ ಒಳಿತಿಗಾಗಿ, ಉನ್ನತಿಗಾಗಿಯೂ ಹೆಚ್ಚು ವಿನಿಯೋಗವಾಗಬೇಕು ಎಂದು ಹೇಳಿದರು.

ಪರಿಪೂರ್ಣತೆ ಸಾಧ್ಯ
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ. ಶ್ರೀನಿವಾಸ್‌ ಪೈ ಮಾತನಾಡಿ, ವಿದ್ಯಾಸಂಸ್ಥೆ  ಒಂದು ಶ್ರದ್ಧಾ  ಕೇಂದ್ರ. ಅದು ದೇಶಪ್ರೇಮ, ಗೌರವ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ದೇವಾಲಯವಾಗಬೇಕು. ವಿದ್ಯಾರ್ಥಿ ಸಂಘಗಳು ಒಗ್ಗಟ್ಟಾಗಿ, ಸಂಸ್ಥೆ ಹಾಗೂ ಸ್ವ ಅಭಿವೃದ್ಧಿಗಾಗಿ ಶ್ರಮಿಸಿದಾಗ ಶೈಕ್ಷಣಿಕ ಪರಿಪೂರ್ಣತೆ ಹೊಂದಲು ಸಾಧ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ  ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಜಯರಾಮ್‌ ಭಟ್‌ ಎಂ.ಟಿ., ಕೋಶಾಧಿಕಾರಿ ಸೇಡಿಯಾಪು ಜನಾರ್ದನ ಭಟ್‌, ಶೈಕ್ಷಣಿಕ ನಿರ್ದೇಶಕ ಡಾ| ವಿN°àಶ್ವರ ವರ್ಮುಡಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪಂಕಜ್‌ ಎ.ಸಿ. ಉಪಸ್ಥಿತರಿದ್ದರು.

Advertisement

ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಪ್ರಸ್ತಾವನೆಗೈದರು. ವಿದ್ಯಾರ್ಥಿ ಕ್ಷೇಮ ಪಾಲಕ ಪ್ರೊ| ಕೃಷ್ಣ ಕಾರಂತ್‌ ನೂತನ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷ ಭಗತ್‌ ಡಿ.ಎಸ್‌. ಸ್ವಾಗತಿಸಿ, ಜತೆ ಕಾರ್ಯದರ್ಶಿ ಮೋಕ್ಷಿತಾ ಎಂ. ವಂದಿಸಿದರು. ಸುಬ್ರಹ್ಮಣ್ಯ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next