ಶಿವಮೊಗ್ಗ: ನಾವು ತಪ್ಪು ಮಾಡಿಲ್ಲ, ಆಪ್ತ ಉಮೇಶ್ ಮನೆಯ ಮೇಲಿನ ಐಟಿ ದಾಳಿಯಿಂದ ನಮಗೆ ಯಾವುದೇ ತೊಂದರೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ, ಅಧಿಕಾರಿಗಳು ಅವರ ಕರ್ತವ್ಯ ಮಾಡಿದ್ದಾರೆ.ಅದನ್ನ ತಡಿಯೋಕೆ ನಾವ್ಯಾರು? ಅವರ ಡ್ಯೂಟಿ ಅವರು ಮಾಡುತ್ತಾರೆ ಎಂದರು.
ಐಟಿ ದಾಳಿಗೂ ನಮ್ಮ ಕುಟುಂಬದವರಿಗೆ ಯಾವುದೇ ಸಂಬಂಧ ಇಲ್ಲ. ನಾವು ತಪ್ಪು ಮಾಡಿಲ್ಲ. ನಮಗೆ ಯಾವುದೇ ತೊಂದರೆ ಇಲ್ಲ.ಅದಕ್ಕೆ ಗೊಂದಲ ಮಾಡಿಕೊಳ್ಳುವ ಅಗತ್ಯವಿಲ್ಲ.ನಿಶ್ಚಿತವಾಗಿ ಯಾವುದೇ ಸಮಸ್ಯೆಯಿಲ್ಲ.ವಿಪಕ್ಷಗಳಿಗೆ ಹೇಳಲು ಏನೂ ಇಲ್ಲವಾಗಿದ್ದು ,ಅದಕ್ಕೆ ಈ ವಿಷಯ ಹೇಳುತ್ತಿದ್ದಾರೆ ಎಂದರು.
ಪ್ರಧಾನಿ ಮೋದಿಯವರ ಕಾರ್ಯ ಹಾಗೂ ನಮ್ಮ ಸರಕಾರದ ಒಳ್ಳೆಯ ಕಾರ್ಯಗಳಿಂದಾಗಿ ಉಪಚುನಾವಣೆಯ ಎರಡೂ ಕ್ಷೇತ್ರದಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ. ನಾನು ಹಾಗೂ ವಿಜಯೇಂದ್ರ ಎರಡೂ ಕ್ಷೇತ್ರದಲ್ಲಿ ಓಡಾಟ ಮಾಡುತ್ತೇವೆ. ಕೊನೆಯ 2-3 ದಿನ ಸಮಯ ಮಾಡಿಕೊಂಡು ಪ್ರಚಾರ ಮಾಡುತ್ತೇನೆ ಎಂದರು.
ಬೇರೆಯವರ ಟೀಕೆ ಟಿಪ್ಪಣಿಗೆ ನಾನು ಉತ್ತರ ಕೋಡಲು ಹೋಗುವುದಿಲ್ಲ. ಬೆಲೆ ಏರಿಕೆಯ ಕಾರಣಗಳು ಜನರಿಗೆ ಗೊತ್ತಿದೆ. ವಿಶ್ವಕ್ಕೆ ಗೊತ್ತಿದೆ ಈ ಕಾರಣ ಇಟ್ಟುಕೊಂಡು ಚುನಾವಣೆಯಲ್ಲಿ ಜನ ಹಿನ್ನಡೆ ಮಾಡುತ್ತಾರೆ ಎಂದು ನನಗೆ ಅನ್ನಿಸಿಲ್ಲ ಎಂದರು.
ಆರ್ ಎಸ್ ಎಸ್ ಕುರಿತ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಕುಮಾರಸ್ವಾಮಿ ಅವರ ಹತ್ತಿರ ಮಾತನಾಡುತ್ತೇನೆ.
ಬಾಯಿತಪ್ಪಿ ಎನೋ ಎರಡು- ಮೂರು ಮಾತನಾಡಿದ್ದಾರೆ. ತಪ್ಪು ಗ್ರಹಿಕೆ ಅಗಿರಬಹುದು.ನಾನೇ ಹೋಗಿ ಕುಳಿತು ಅವರ ಬಳಿ ಮಾತನಾಡುತ್ತೇನೆ ಎಂದರು.