Advertisement

ಭಗವಂತನ ಮುಂದೆ ನಮಗೆ ಸ್ವಾತಂತ್ರ್ಯ ಇಲ್ಲ : ವಸಂತ ಪೈ

07:10 AM Aug 04, 2017 | Harsha Rao |

ಶೇಷವನ: ಎಲ್ಲ ಭಕ್ತರು ಭಗವಂತನ ಅಧೀನ ಆದ್ದರಿಂದ ನೈಜ ಭಕ್ತನಿಗೆ ದೇವರ ಮುಂದೆ ಯಾವುದೆ ಸ್ವಾತಂತ್ರ್ಯ ಇಲ್ಲ. ಧರ್ಮದ ಎಲ್ಲಾ ಮಜಲುಗಳಲ್ಲಿ ಭಕ್ತಿ, ನಿಷ್ಠೆ, ಕಟ್ಟುಪಾಡುಗಳಿವೆ. ಅದನ್ನು ಪಾಲಿಸುವುದೇ ನೈಜ ಭಕ್ತಿಯಾಗಿದೆ. ಆದ್ದರಿಂದ ಧರ್ಮಮಾರ್ಗದಲ್ಲಿ ಮುಂದುವರಿಯುವ ಯಾವುದೇ ಭಕ್ತ ಅದನ್ನು ಬಯಸುವುದೂ ಇಲ್ಲ ಎಂದು ಧಾರ್ಮಿಕ ಮುಂದಾಳು ವಸಂತ ಪೈ ಅಭಿಪ್ರಾಯ ಪಟ್ಟರು. ಅವರು ಕೂಡ್ಲಿನ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಉತ್ಸವ ಸಮಿತಿ ರೂಪೀಕರಣ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. 

Advertisement

ಮುಂದೆ ನಡೆಯಲಿರುವ ಕಾರ್ತಿಕ ಮಾಸ ದೀಪೋತ್ಸವದಲ್ಲಿ ಎಲ್ಲರೂ ಪಾಲ್ಗೊಂಡು ಪುನೀತ ರಾಗುವುದರ ಜೊತೆಗೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಹಕರಿಸಬೇಕೆಂದು ಕೇಳಿಕೊಂಡರು. ಸಭೆಯ ಅಧ್ಯಕ್ಷತೆಯನ್ನು ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್‌ನ ಆಡಳಿತ ಮೊಕ್ತೇಸರರಾದ ವೇಣುಗೋಪಾಲ ಮಾಸ್ತರ್‌ ವಹಿಸಿದ್ದು ಕ್ಷೇತ್ರದಲ್ಲಿ ನಡೆಯುವ ಎಲ್ಲಾ ವಾರ್ಷಿಕ ಉತ್ಸವಗಳನ್ನು ಯಶಸ್ಸಿನಿಂದ ನಿಭಾಯಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರವನ್ನು ಕೇಳಿಕೊಂಡರು.

ಸಭೆಯಲ್ಲಿ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್‌ ಆನುವಂಶಿಕ ಮೊಕ್ತೇಸರ ಸದಾಶಿವ, ಸದಸ್ಯರಾದ ಶಶೀಂದ್ರನ್‌, ವಸಂತ, ಯುವಕ ಸಂಘದ ಅಧ್ಯಕ್ಷ ಮಹೇಶ್‌ ಕನ್ನಿಗುಡ್ಡೆ, ಮಹಿಳಾ ಸಂಘದ ಅಧ್ಯಕ್ಷೆ ದೀಪಾ ನಾಂಗುರಿ  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಉತ್ಸವ ಸಮಿತಿಯನ್ನು ರಚಿಸಲಾಯಿತು. ಅದರಂತೆ ಉತ್ಸವ ಸಮಿತಿಯ ರûಾಧಿಕಾರಿಯಾಗಿ ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಅರವತ್‌ ದಾಮೋದರ ತಂತ್ರಿವರ್ಯರು, ಗೌರವ ಅಧ್ಯಕ್ಷರಾಗಿ ಮಧೂರು ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀಕೃಷ್ಣ ಉಪಾಧ್ಯಾಯರು, ಅಧ್ಯಕ್ಷರಾಗಿ ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ, ಕಾರ್ಯಾಧ್ಯಕ್ಷರಾಗಿ ವೇಣುಗೋಪಾಲ ಬಾಮ, ಉಪಾಧ್ಯಕ್ಷರಾಗಿ ರಾಜೇಶ್‌ ರೈ, ರಘು ಮೀಪುಗುರಿ,  ಲೋಕೇಶ್‌ ಮೀಪುಗುರಿ, ಶ್ರೀಧರ ಕೂಡ್ಲು, ಅಚ್ಯುತ ಬಲ್ಯಾಯ, ಶಶಿ ಆಲಂಗೋಡು, ಯಶೋದಾ ಕನ್ನಿಗುಡ್ಡೆ, ವೆಂಕಟೇಶ್‌ ಬಾದಾರ, ಲೀಲ, ಜಯಶೀಲ ಕೂಡ್ಲು, ಮಹೇಶ ಕನ್ನಿಗುಡ್ಡೆ, ದೀಪಾ ನಾಂಗುರಿ, ಡಾ. ಶ್ರೀರಾಜ್‌, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್‌ ಪ್ರಸಾದ್‌ ಕೂಡ್ಲು, ಕಾರ್ಯದರ್ಶಿ ಯಾಗಿ  ಗಿರೀಶ್‌ ಸಂಧ್ಯಾ, ಕೂಡ್ಲು, ಗಣೇಶ್‌ ಬಾಲಮುರಳಿ, ದಿನೇಶ್‌ ರೈ, ಅಶೋಕ್‌ ನಾಯ್ಕ,  ರೇಣುಕ ಕೂಡ್ಲು, ಮುರಳೀಧರ ಶೆಟ್ಟಿ, ಕೋಶಾಧಿಕಾರಿಯಾಗಿ ಭಾನು ಪ್ರಕಾಶ್‌ ಅವರು ಆಯ್ಕೆಯಾದರು. ಸುರೇಶ್‌ ಕೃಷ್ಣಾ  ಹಾರ್ಡ್‌ವೇರ್‌, ಕೆ.ಎಸ್‌.ಮಲ್ಯ ಕಾಸರಗೋಡು, ಬಾಲ ಸುಬ್ರಹ್ಮಣ್ಯ, ಕೃಷ್ಣ ಮಯ್ಯ, ಜನಾದ‌ìನ, ನರಸಿಂಹ ಹೊಸಮನೆ, ಆನಂದ ಕನ್ನಿಗುಡ್ಡೆ ಅವರನ್ನು ಸಲಹಾ ಸಮಿತಿಯಲ್ಲಿ ನೇಮಿಸಲಾಯಿತು. 

ಅಕ್ಟೋಬರ್‌ ತಿಂಗಳ 20ರಿಂದ ನವೆಂಬರ್‌ ತಿಂಗಳ 18ರತನಕ ಜರಗುವ ಕಾರ್ತಿಕ ಮಾಸವನ್ನು ವಿಜೃಂಭಣೆಯಿಂದ ಆಚರಿಸಲು ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು. ಉಪಸಮಿತಿ ಗಳಾದ ಆರ್ಥಿಕ ಸಮಿತಿ ಅಧ್ಯಕ್ಷರು ಲೋಕೇಶ್‌ ಮೀಪುಗುರಿ, ಸಂಚಾಲಕ ಭಾನು ಪ್ರಕಾಶ್‌, ಸಹ ಸಂಚಾಲಕರಾಗಿ ಸುರೇಶ್‌ ಅಭಿನಂದನ್‌, ಜಯರಾಮ್‌ ರೈ ನೀರ್ಚಾಲು, ಆಹಾರ ಸಮಿತಿ ಅಧ್ಯಕ್ಷರು ಗಿರೀಶ್‌ ಸಂಧ್ಯಾ, ಸಂಚಾಲಕ ಶರತ್‌ ನಾಯ್ಕ, ಸಹ ಸಂಚಾಲಕರಾಗಿ ರವಿ ಮಣಿಯಾಣಿ, ಮೂರ್ತಿ ಪೆರ್ನಡ್ಕ, ಪ್ರಚಾರ ಸಮಿತಿ ಅಧ್ಯಕ್ಷರು ಲವ ಮೀಪುಗುರಿ, ಸಂಚಾಲಕ ಗಿರೀಶ್‌, ಸಹ ಸಂಚಾಲಕ ಜಯಪ್ರಕಾಶ್‌ ಕೆ.ವಿ, ಧ್ವನಿ, ಬೆಳಕು ಮತ್ತು ಅಲಂಕಾರ ಸಮಿತಿ ಅಧ್ಯಕ್ಷರು  ಸುರೇಶ್‌ ಅಭಿನಂದನ್‌, ಸಂಚಾಲಕ ನವೀನ್‌, ಸಹ ಸಂಚಾಲಕ ನಿತಿನ್‌, ಸ್ವಯಂಸೇವಕ ಸಮಿತಿ ಅಧ್ಯಕ್ಷರು ರಮೇಶ್‌ ರೈ, ಸಂಚಾಲಕ ಮುರಳೀಧರ ಶೆಟ್ಟಿ, ಸಹ ಸಂಚಾಲಕರು ಪ್ರತಾಪ್‌ ಶೆಟ್ಟಿ, ರೇಣುಕ, ವೈದಿಕ ಸಮಿತಿ ಅಧ್ಯಕ್ಷರು ಮುಟ್ಟತ್ತೋಡಿ ಕೃಷ್ಣ ಪ್ರಸಾದ್‌ ಅಡಿಗ ಸಂಚಾಲಕ ಗೋಪಾಲಕೃಷ್ಣ ಕಾರಂತ, ಸಹ ಸಂಚಾಲಕ ಆಶಾ ಉಪಾಧ್ಯಾಯ ಮಧೂರು, ನೀರು ಹಾಗು ಶುಚಿತ್ವ ಅಧ್ಯಕ್ಷರು ಸೂರ್ಯ, ಸಂಚಾಲಕ ರವಿ ಮಣಿಯಾಣಿ ಪಾಯಿಚ್ಚಾಲು, ಸಹ ಸಂಚಾಲಕ ಉಮಾ, ಪ್ರಸಾದ ವಿತರಣಾ ಸಮಿತಿ  ಅಧ್ಯಕ್ಷರು ಕೋಟಿ ಪೂಜಾರಿ, ಸಂಚಾಲಕ ಸುಧಾಕರ, ಸಹ ಸಂಚಾಲಕ ರವೀಶ ಹಳೆಮನೆ, ಭಜನೆ ಹಾಗು ಸಾಂಸ್ಕೃತಿಕ  ಸಮಿತಿ ಅಧ್ಯಕ್ಷರು ಜಯ ಬಲ್ಯಾಯ ಸಂಚಾಲಕ ಲೀಲಾಧರ ಸಹಸಂಚಾಲಕ ರಾಜ, ಕಚೇರಿ ನಿರ್ವಹಣಾ ಸಮಿತಿ ಅಧ್ಯಕ್ಷರು ಕೃಷ್ಣ, ನಿವೃತ್ತ ಪೊಲೀಸ್‌, ಸಂಚಾಲಕ ಜಯಲಕ್ಷ್ಮೀ ಅಡಪ, ಸಹ ಸಂಚಾಲಕ ಭಾನುಪ್ರಕಾಶ್‌, ಸತೀಶ, ಮೆರವಣಿಗೆ ಸಮಿತಿ ಅಧ್ಯಕ್ಷರು ರಮೇಶ್‌ ರೈ, ಸಂಚಾಲಕ ಮಹೇಶ್‌ ಕನ್ನಿಗುಡ್ಡೆ, ಸಹ ಸಂಚಾಲಕ ಸನತ್‌ ಅವರನ್ನು ಆಯ್ಕೆಮಾಡಲಾುತು. ಟ್ರಸ್ಟ್‌ ಕಾರ್ಯದರ್ಶಿ ಸುರೇಶ್‌ ಮಣಿಯಾಣಿ ಸ್ವಾಗತಿಸಿ, ಟ್ರಸ್ಟ್‌ ಕೋಶಾಧಿಕಾರಿ ಪ್ರಕಾಶ್‌ ಶೆಟ್ಟಿ ವಂದಿಸಿದರು. ಟ್ರಸ್ಟ್‌ ಸದಸ್ಯರಾದ ಸುರೇಶ್‌ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next