Advertisement

ರಿವರ್ಸ್ ಆಪರೇಷನ್ ಅಸಾಧ್ಯ..ನಾವು 105 ಮಂದಿ ಹುಲಿಗಳಿದ್ದಂತೆ! ಕೆಎಸ್ ಈಶ್ವರಪ್ಪ

09:54 AM May 29, 2019 | Team Udayavani |

ಶಿವಮೊಗ್ಗ:ನಾವು ಆಪರೇಷನ್ ಕಮಲ ಮಾಡಲ್ಲ. ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ. ಸರ್ಕಾರ ಬೀಳಿಸುವ ಪ್ರಯತ್ನ ನಾವು ಮಾಡಲ್ಲ. ನಮ್ಮ ಯಾವ ಶಾಸಕರನ್ನೂ ಮುಟ್ಟುವ ಶಕ್ತಿ ಯಾರಿಗೂ ಇಲ್ಲ. ನಾವು 105 ಹುಲಿಗಳಿದ್ದಂಗೆ ಎಂಬುದಾಗಿ ಬಿಜೆಪಿ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪ ತಿಳಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೈತ್ರಿ ಬೇಡ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಹೇಳೋರು, ಕೇಳೋರು ಯಾರು ಇಲ್ಲ. ಚುನಾವಣೆಗೆ ಹೋಗುವ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.

ನದಿ, ನೀರು, ಹೆಣ್ಣು ಮಕ್ಕಳ ಬಗ್ಗೆ ಗಮನ ಕೊಡುತ್ತಿಲ್ಲ. ಜಿಂದಾಲ್ ನವರು ಸಾವಿರಾರು ಕೋಟಿ ಬಾಕಿ ಕೊಡಬೇಕಿದೆ. ಆದರೂ 3,666 ಎಕರೆ 30 ಕೋಟಿಗೆ ಮಾರಾಟ ಮಾಡಲು ಹೊರಟಿದ್ದಾರೆ.ಎಷ್ಟು ಆಗುತ್ತೋ…ಅಷ್ಟನ್ನು ದೋಚಿಕೊಂಡು ಹೋಗಲು ಸರ್ಕಾರ ತೀರ್ಮಾನ ಮಾಡಿದೆ ಎಂದು ಆರೋಪಿಸಿದರು.

ಚುನಾವಣೆಯಲ್ಲಿ ಹೀನಾಯವಾಗಿ ಸೋತ ಮೇಲೂ ಈ ತೀರ್ಮಾನ ಕೈಗೊಂಡಿದ್ದಾರೆ. ರಾಜ್ಯ ಉಳಿಸಿ, ಮಾರಾಟ ಮಾಡಬೇಡಿ. ಜಿಂದಾಲ್ ಗೆ ಭೂಮಿ ಕೊಡುವ ನಿರ್ಣಯವನ್ನು ರದ್ದು ಮಾಡಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next