Advertisement

ಸ್ಥಾನ ‌ಲೆಕ್ಕದಲ್ಲಿ ಸೋತರೂ ಶೇ. ಅಂಕದಲ್ಲಿ ಕಾಂಗ್ರೆಸ್ ಗೆಲುವು: ಸಿದ್ದರಾಮಯ್ಯ

04:32 PM Nov 12, 2019 | keerthan |

ವಿಜಯಪುರ: ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಸ್ಥಾನ ಲೆಕ್ಕದಲ್ಲಿ ಬಿಜೆಪಿ ಗೆದ್ದಿದ್ದರೂ, ಶೇಕಡಾವಾರು ಮತ ಪಡೆಯುವಲ್ಲಿ ಕಾಂಗ್ರೆಸ್ ಅಗ್ರಸ್ಥಾನದಲ್ಲಿದೆ. ಆದರೂ ಬಿಜೆಪಿ ವಾಮ ಮಾರ್ಗದಲ್ಲಿ ಅಧಿಕಾರಕ್ಕೇರಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

ವಿಜಯಪುರದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, 104 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ನಾಯಕರು ತಮಗೆ ಜನಾಶೀರ್ವಾದವಿದೆ ಎಂದು ಯಡಿಯೂರಪ್ಪ ಅನೈತಿಕ ಸರ್ಕಾರ ನಡೆಸುತ್ತಿದ್ದಾರೆ ಎಂದರು.

ನಾನು ರಾಜ್ಯಾದ್ಯಂತ ಪ್ರವಾಸ ಮಾಡುವಾಗ ಜನರೆ ಈ ಬಗ್ಗೆ ಟೀಕಿಸುತ್ತಿದ್ದಾರೆ. ಮತ್ತೆ‌‌ ಕಾಂಗ್ರೆಸ್ ಗೆದ್ದು ನೀವು ಅಧಿಕಾರಕ್ಕೆ ಬರಬೇಕು, ಯಾವ ನಿಬಂಧನೆ ಇಲ್ಲದೇ  ರೈತರು ಮಾಡಿದ 50 ಸಾವಿರ ರೂ. ವರೆಗಿನ ಸಹಕಾರಿ ಸಾಲ ಮನ್ನಾ ಮಾಡಿದ್ದೀರಿ. ಹೀಗಾಗಿ‌ ಮತ್ತೆ ನೀವೇ ಅಧಿಕಾರಕ್ಕೆ ಬರುತ್ತೀರಿ ಎನ್ನುತ್ತಿದ್ದಾರೆ.ಯಾವುದೇ ಹಳ್ಳಿಗೆ ಹೋದ್ರೆ ಅಕ್ಕಿ, ಹಾಲು, ವಿದ್ಯಾಸಿರಿ, ಮಾತೃಪೂರ್ಣ, ಶೂಭಾಗ್ಯ ಕೊಟ್ಟವರು ನೀವೇ ಎಂದು ನೆನಪು ಮಾಡಿ ಕೊಳ್ಳುತ್ತಾರೆ. ಆದರೆ ಬಿ.ಎಸ್. ಯಡಿಯೂರಪ್ಪ ನೀವೇನು ಮಾಡಿದಿರಿ ಎಂದು ಕುಟುಕಿದರು.

ನನ್ನ ಸರಕಾರಕ್ಕೆ‌ ನೂರು ದಿನ ತುಂಬಿದಾಗ ಕರ್ನಾಟಕದ ಚಿತ್ರ ಬದಲಾವಣೆ ಮಾಡುತ್ತೇನೆ ಎಂದಿದ್ದ ಸಿ.ಎಂ. ಯಡಿಯೂರಪ್ಪ ಏನೆನು ಬದಲಾವಣೆ ಮಾಡಿದ್ದಾರೆ. ಈ ಹಿಂದೆ ಮೂರು ವರ್ಷ ಸಿಎಂ ಆಗಿದ್ದಾಗ ಏನು ಮಾಡಿದ್ರಿ ಎಂದು ವಾಗ್ದಾಳಿ ನಡೆಸಿದರು.

ತಂತಿ ಮೇಲೆ ನಡೆಯುವುದಾಗಿ ಹೇಳಿದ ನೀವು ರಾಜ್ಯವನ್ನು ಹೇಗೆ ಅಭಿವೃದ್ಧಿ ಮಾಡ್ತೀರಿ. ಪಾಪ ವಯಸ್ಸಾಗಿದೆ ಬಿದ್ದು ಬಿಟ್ಟೀರಾ, ಬಿಟ್ಟುಹೋಗಿ ನಾವು ಅಭಿವೃದ್ಧಿ ಮಾಡ್ತೆವೆ ಎಂದರು.

Advertisement

ಸಿದ್ದರಾಮಯ್ಯ ಕೊಟ್ಟ ಅಕ್ಕಿಯನ್ನು ಮೋದಿ ಕೊಟ್ಟಿದ್ದು ಎಂದು ಯಡಿಯೂರಪ್ಪ ಸುಳ್ಳು ಹೇಳಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಎಲ್ಲೆಲ್ಲಿ ಅಕ್ಕಿ-ಜೋಳ ಕೊಟ್ಟೀದ್ದೀರಿ ತೋರಿಸಿ ಎಂದು ಸವಾಲು ಹಾಕಿದರು.

ಉಚಿತ ಅಕ್ಕಿ ಕೊಟ್ಟಿದ್ದು ಬಿಜೆಪಿ, ಜೆಡಿಎಸ್ ಅಲ್ಲ, ಕಾಂಗ್ರೆಸ್‌ ಸರಕಾರ. ರಾಜ್ಯದಲ್ಲಿ ಯಾರೂ ಹಸಿದಿರಬಾರದು ಎಂದು ನಾವು ಕೊಟ್ಟಿದ್ದು. ಬಡವರಿಗೆ ಅಕ್ಕಿ ಕೊಡಬೇಕೆಂದು ಕೇಂದ್ರದಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದವರು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಎಂದರು.

ಬಿಜೆಪಿ ಅವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೆರೇನು ಗೊತ್ತಿಲ್ಲ. 22 ಜಿಲ್ಲೆಗಳಲ್ಲಿ 103 ತಾಲೂಕುಗಳಲ್ಲಿ ಪ್ರವಾಹ ಬಂದು 3 ತಿಂಗಳಾದರೂ ಪ್ರಧಾನಿ ಮೋದಿ ಸಂಕಷ್ಟಕ್ಕೆ ಸಿಲುಕಿದವರ ಸ್ಪಂದಿಸಿಲ್ಲ. ಪ್ರವಾಹದಿಂದ ಒಂದು ಲಕ್ಷ ಕೋಟಿ ನಷ್ಟ ಆಗಿದೆ, ಅವರು ಮೂರು ತಿಂಗಳಾದ‌ ಮೇಲೆ 1200ಕೋಟಿ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮೋದಿ, ಯಡಿಯೂರಪ್ಪ ಅವರಿಗೆ ನಾವು ಪತ್ರ ಬರೆದು ಭೇಟಿಗೆ ಸಮಯ ಕೇಳಿದರೂ ನಮಗೆ ಅವಕಾಶ ಕೊಡಲಿಲ್ಲ. ಬಡವರ, ರೈತರ ಬಗ್ಗೆ ಕಾಳಜಿಯೇ ಇಲ್ಲ.‌ 56 ಇಂಚಿನ ಎದೆ ಅದು ಬಹಳ ಜನರಿಗೆ ಇರ್ತದೆ. ಆದ್ರೆ ಎಷ್ಟು ಇಂಚು ಎದೆ ಇದೆ‌ ಅನ್ನೋದು ಮುಖ್ಯವಲ್ಲ, ಅದರಲ್ಲಿ ಮಾತೃ ಹೃದಯ ಇರೋದು ಮುಖ್ಯ ಎಂದು ಪ್ರಧಾನಿ ಮೋದಿ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಕಳೆದ ಚುನಾವಣೆಯಲ್ಲಿ ಯುವಕರಿಗೆ ಗೊತ್ತಾಗದೆ ಮೋದಿ ಮೋದಿ ಮೋದಿ ಎಂದು ಭಾವನಾತ್ಮಕವಾಗಿ ಅಧಿಕಾರ ಹಿಡಿದ್ರು,ಇವತ್ತು ಅದೇ ಯುವ ಸಮೂಹಕ್ಕೆ ಉದ್ಯೋಗ ಕೊಡದೇ ಪಂಗನಾಮ‌ ಹಾಕಿದ್ದಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next