Advertisement
ಹೌದು. ಕ್ಯಾಲಿಫೋರ್ನಿಯಾದ ಜಾಯಿಂಟ್ ಜಿನೋಮ್ ಇನ್‌ಸ್ಟಿಟ್ಯೂಟ್ ಮತ್ತು ಸ್ಟಾನ್ ಫೋರ್ಡ್ ವಿವಿಯ ಸಂಶೋಧಕರು ಜಂಟಿಯಾಗಿ ನಡೆಸಿದ ಅಧ್ಯಯನದಿಂದ ಈ ಅಚ್ಚರಿಯ ಅಂಶ ಬಯಲಾಗಿದೆ. ವಿಶೇಷವೆಂದರೆ, ಮಾನವನ ಮಲದಲ್ಲಿರುವ 50 ಸಾವಿರಕ್ಕೂ ಅಧಿಕ ವೈರಸ್ ಗಳ ಪೈಕಿ ಶೇ.92ರಷ್ಟು ಈವರೆಗೆ ಪತ್ತೆಯಾಗದಂಥ ವೈರಸ್ ಗಳು ಎಂಬುದೂ ತಿಳಿದುಬಂದಿದೆ. ನೇಚರ್ ಮೈಕ್ರೋ ಬಯಾಲಜಿ ನಿಯತಕಾಲಿಕೆಯಲ್ಲಿ ಈ ಸಂಶೋಧನೆಯ ವರದಿ ಪ್ರಕಟವಾಗಿದೆ.
ಮಲದಲ್ಲಿ ಕಂಡುಬರುವಂಥ ಬಹುತೇಕ ವೈರಸ್ ಗಳು ಬ್ಯಾಕ್ಟೀರಿಯಾವನ್ನು ತಿನ್ನುತ್ತವೆ. ಆದರೆ, ಅವುಗಳು ಮಾನವನ ಕೋಶಗಳ ಮೇಲೆ ದಾಳಿ ನಡೆಸುವುದಿಲ್ಲ ಎಂದು ವರದಿ ಹೇಳಿದೆ. ನಮ್ಮ ಕರುಳಿನಲ್ಲಿರುವ ಸೂಕ್ಷ್ಮಾಣು ಜೀವಿಗಳು ನಾವು ತಿನ್ನುವ ಆಹಾರ ಪಚನವಾಗುವಂತೆ ನೋಡಿಕೊಳ್ಳುತ್ತವೆ ಮಾತ್ರವಲ್ಲ, ಅವುಗಳು ರೋಗಕಾರಕ ಬ್ಯಾಕ್ಟೀರಿಯಾಗಳಿಂದ ನಮ್ಮನ್ನು ಸಂರಕ್ಷಿಸುತ್ತವೆ. ನಮ್ಮ ಮಾನಸಿಕ ಯೋಗಕ್ಷೇಮ, ರೋಗ ನಿರೋಧಕ ವ್ಯವಸ್ಥೆಯ ಬಲಿಷ್ಠತೆ ಕಾಪಾಡಿಕೊಳ್ಳುವಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಈ ವರದಿ ಹೇಳಿದೆ. ಇದನ್ನೂ ಓದಿ :ಇಂಡೋ-ಜಪಾನೀಸ್ ಸಂಬಂಧ ‘ಜಾಗತಿಕ ಸ್ಥಿರತೆಗೆ ಪ್ರಸ್ತುತವಾಗಿದೆ’ : ಪ್ರಧಾನಿ ಮೋದಿ
Related Articles
24 ದೇಶಗಳಲ್ಲಿ ಸಾರ್ವಜನಿಕವಾಗಿ ಲಭ್ಯವಾಗುವ ಮನುಷ್ಯನ ಮಲವನ್ನು ಬಳಸಿಕೊಂಡು ಈ ಅಧ್ಯಯನ ನಡೆಸಲಾಗಿದೆ. ಒಟ್ಟಾರೆ 11,810 ಸ್ಯಾಂಪಲ್ ಗಳನ್ನು ಪರೀಕ್ಷಿಸಲಾಗಿದೆ. ಆಗ ಪತ್ತೆಯಾದ 54,118 ವೈರಸ್ ಗಳ ಪೈಕಿ ಶೇ.90ಕ್ಕೂ ಹೆಚ್ಚು ವೈಜ್ಞಾನಿಕ ಲೋಕಕ್ಕೇ ಹೊಸದು ಎಂದೂ ಸಂಶೋಧಕರು ಕಂಡುಕೊಂಡಿದ್ದಾರೆ.
Advertisement