Advertisement
ಈ ನಡುವೆ ರಾಜ್ಯಪಾಲರು ಶನಿವಾರದಂದು ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಅತೀದೊಡ್ಡ ಪಕ್ಷವಾಗಿ ಮೂಡಿಬಂದಿರುವ ಭಾರತೀಯ ಜನತಾ ಪಕ್ಷವನ್ನು ಸರಕಾರ ರಚನೆಗೆ ಆಹ್ವಾನಿಸಿದ್ದಾರೆ.
Related Articles
Advertisement
‘ಮಹಾಯುತಿಗೆ ಜನಾದೇಶ ಸಿಕ್ಕಿದೆ. ಆದರೆ ಶಿವಸೇನೆ ನಮ್ಮನ್ನು ಬೆಂಬಲಿಸಲು ಒಪ್ಪುತ್ತಿಲ್ಲ. ಹಾಗಾಗಿ ನಾವು ರಾಜ್ಯದಲ್ಲಿ ನೂತನ ಸರಕಾರ ರಚಿಸುತ್ತಿಲ್ಲ ಎಂಬ ವಿಚಾರವನ್ನು ರಾಜ್ಯಪಾಲರಿಗೆ ತಿಳಿಸಿದ್ದೇವೆ’ ಎಂದು ಚಂದ್ರಕಾಂತ್ ಪಾಟೀಲ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಶಿವಸೇನೆಯು ಎನ್.ಸಿ.ಪಿ. ಮತ್ತು ಕಾಂಗ್ರೆಸ್ ಜೊತೆ ಸೇರಿಕೊಂಡು ಸರಕಾರ ರಚಿಸುವುದಾದರೆ ನಾವು ಅವರಿಗೆ ‘ಆಲ್ ದಿ ಬೆಸ್ಟ್’ ಹೇಳಲು ಇಚ್ಛಿಸುತ್ತೇವೆ ಎಂದು ಚಂದ್ರಕಾಂತ್ ಪಾಟೀಲ್ ಅವರು ಹೇಳಿದರು.
‘ಜನರು ನಮ್ಮ ಮೈತ್ರಿಗೆ ಜನಾದೇಶ ನೀಡಿದ್ದರು, ಆದರೆ ಶಿವಸೇನೆ ಈಗ ಅದನ್ನು ಧಿಕ್ಕರಿಸಿ ಎನ್.ಸಿ.ಪಿ. ಮತ್ತು ಕಾಂಗ್ರೆಸ್ ಜೊತೆ ಸರಕಾರ ರಚಿಸುವುದಾದರೆ ಅವರಿಗೆ ಒಳ್ಳೆಯದಾಗಲಿ ಎಂದಷ್ಟೇ ನಾವು ಹೇಳಬಯಸುತ್ತೇವೆ’ ಎಂದು ಪಾಟೀಲ್ ಹೇಳಿದರು.