ಜೆರುಸಲೇಮ್: ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ”ತಮ್ಮ ದೇಶ ಇನ್ನೂ ಯುದ್ಧವನ್ನು ಪ್ರಾರಂಭಿಸಲಿಲ್ಲ, ಆದರೆ ಅದನ್ನು ಕೊನೆಗೊಳಿಸುತ್ತಿದ್ದೇವೆ ಎಂದು ಹಮಾಸ್ ಬಂಡುಕೋರರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಇಸ್ರೇಲ್ ಪ್ರಧಾನಿ “ನಮಗೆ ಈ ಯುದ್ಧ ಬೇಕಾಗಿಲ್ಲ. ಇದು ಅತ್ಯಂತ ಕ್ರೂರ ಮತ್ತು ಅನಾಗರಿಕ ಸಂಸ್ಕೃತಿ ನಮ್ಮ ಮೇಲೆ ಬಲವಂತವಾಗಿ ಇದನ್ನು ಹೇರಲಾಯಿತು. ನಾವು ಈ ಯುದ್ಧವನ್ನು ಪ್ರಾರಂಭಿಸದಿದ್ದರೂ, ನಾವೇ ಅದನ್ನು ಕೊನೆಗೊಳಿಸುತ್ತೇವೆ ”ಎಂದು ಪ್ರಧಾನಿ ಹೇಳಿದರು,
ಶನಿವಾರ ಪ್ರಾರಂಭವಾದ ಇಸ್ರೇಲ್-ಹಮಾಸ್ ಯುದ್ಧವು ಮಂಗಳವಾರ ಸಾವಿನ ಸಂಖ್ಯೆ 1600 ರ ಗಡಿ ದಾಟುವುದರೊಂದಿಗೆ ಉಲ್ಬಣಗೊಳ್ಳುತ್ತಲೇ ಇದೆ.
ಸುಮ್ಮನಿದ್ದ ನಮ್ಮನ್ನು ಕೆರಳಿಸಿ ಹಮಾಸ್ ದೊಡ್ಡ ತಪ್ಪು ಮಾಡಿದೆ ಇದಕ್ಕೆ ತಕ್ಕ ಶಿಕ್ಷೆಯನ್ನು ಅವರು ಅನುಭವಿಸಲೇ ಬೇಕು ಎಂದು ಹೇಳಿದ ಅವರು “ಒಮ್ಮೆ, ಯಹೂದಿ ಜನರು ರಾಷ್ಟ್ರಹೀನರಾಗಿದ್ದರು, ಅಲ್ಲಿನ ಜನ ರಕ್ಷಣೆಯಿಲ್ಲದಿದ್ದರು ಅದೇ ಪರಿಸ್ಥಿತಿ ಈ ಹಮಾಸ್ ಬಂಡುಕೋರರಿಗೂ ಬರಬಹುದು ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಹಮಾಸ್ ಉಗ್ರರು ನಡೆಸಿದ ಅಮಾನುಷ ಕೃತ್ಯಗಳನ್ನು ಇಸ್ರೇಲ್ ಮರೆಯಲು ಸಾಧ್ಯವಿಲ್ಲ ಮಕ್ಕಳು, ಮಹಿಳೆಯರು ಎನ್ನದೆ ಮನ ಬಂದಂತೆ ಗುಂಡುಗಳನ್ನು ಹಾರಿಸಿ ಹತ್ಯೆಗೈಯ್ಯಲಾಗಿತ್ತು ಕೆಲ ಕುಟುಂಬಗಳನ್ನು ಅಪಹರಣ ಮಾಡಿ ಕೊಲೆಗೈಯಲಾಗಿದೆ, ಮಕ್ಕಳು ಮರಿ ಎನ್ನಲೇ ಕುಟುಂಬದವರ ಎದುರೇ ರಾಕ್ಷಸ ಪ್ರವೃತ್ತಿಯನ್ನು ನಡೆಸಿದ ಉಗ್ರರು ಮುಂದಿನ ದಿನಗಳಲ್ಲಿ ಸರಿಯಾದ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Money Laundering Case: ಆಪ್ ನಾಯಕನ ನಿವಾಸದ ಮೇಲೆ ಇಡಿ ದಾಳಿ, ದಾಖಲೆಗಳ ಶೋಧ