Advertisement

Vijayapura; ಅವಕಾಶವಾದಿ ರಾಜಕೀಯ ಮಾಡುವವರ ಬಗ್ಗೆ ನಾವೇನೂ ಮಾಡಲಾಗದು: ಎಂ.ಬಿ.ಪಾಟೀಲ

03:05 PM Jan 28, 2024 | Team Udayavani |

ವಿಜಯಪುರ: ಅವಕಾಶವಾದಿ ರಾಜಕೀಯ ಮಾಡುವವರ ಬಗ್ಗೆ ನಾವೇನೂ ಮಾಡಲಾಗದು, ಇದೆಲ್ಲ ಜಗತ್ತಿನ ನಿಯಮ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಬಿಹಾರ ರಾಜಕೀಯ ಬೆಳವಣಿಗೆ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೋಗುವವರು ಹೋಗುತ್ತಾರೆ, ನಾವು ನಮ್ಮ ಸಿದ್ಧಾಂತದೊಂದಿಗೆ ಮುಂದುವರೆಯುತ್ತೇವೆ. ಇದರಿಂದ ನಾವು ಮತ್ತಷ್ಡು ಹೆಚ್ಚಿನ ರೀತಿಯಲ್ಲಿ ನಮ್ಮ ಬದ್ಧತೆಯಿಂದ ಸಿದ್ದಾಪುಗಳೊಂಡಿದೆ ಕೆಲಸ ಮಾಡಲು ಸಹಕಾರಿ ಆಗಲಿದೆ ಎಂದರು.

ಆಗಾಗ ಕಾಲಕಾಲಕ್ಕೆ ಇಂಥದ್ದನ್ನೆಲ್ಲ ನೋಡುತ್ತಿದ್ದೇವೆ. ಇಂಥದ್ದೆಲ್ಲ ಶುದ್ಧವಾಗಬೇಕಿದೆ ಎಂದರು.

ಸಚಿವ ಸತೀಶ ಜಾರಕಿಹೊಳಿ ನನ್ನ ಆತ್ಮೀಯ ಸ್ನೇಹಿತರು, ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವುದಿಲ್ಲ. ಸತೀಶ ಬಿಜೆಪಿ ಸೇರುತ್ತಾರೆಂದು ನಿಮಗೆ ಯಾರು ಹೇಳಿದರು ಎಂದು ಪತ್ರಕರ್ತರನ್ನೇ ಪ್ರಶ್ನಿಸಿದ ಸಚಿವ ಎಂ.ಬಿ.ಪಾಟೀಲ, ಬಿಜೆಪಿ ನಾಯಕರನ್ನು ಭೇಟಿ ಮಾಡಿದ ವಿಷಯ ನನಗೆ ಗೊತ್ತಿಲ್ಲ ಎಂದರು.

ಬಿಜೆಪಿ ಪಕ್ಷದಲ್ಲೇ ಇದ್ದ ಶಾಸಕ ಜನಾರ್ಧನ ರೆಡ್ಡಿ ವಿರುದ್ದ ಗಣಿ ಹಗರಣದ ಪ್ರಕರಣ ದಾಖಲಾಗಿದ್ದವು. ಬಿಜೆಪಿ ಪಕ್ಷದಿಂದ ಹೊರಬಂದು ಮತ್ತೆ ಅಲ್ಲಿಗೆ ಮರಳುತ್ತಿರುವ ಅವರ ಕುರಿತು ನಾನು ಪ್ರತಿಕ್ರಿಯಿಸಲಾರೆ ಎಂದರು.

Advertisement

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಆಪರೇಶನ್ ಕಮಲ ಮಾಡುವ ಮಾತಿರಲಿ, ನಾವೇ ಆಪರೇಶನ್ ಹಸ್ತ ಮಾಡುತ್ತೇವೆ. ಮಾಧ್ಯಮಗಳ ಮುಂದೆ ಎಲ್ಲವನ್ನೂ ಹೇಳಲಾಗದು. ಚುನಾವಣೆ ಹೊತ್ತಿಗೆ ಬಿಜೆಪಿ ಪಕ್ಷದ ಹಲವು ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂದರು.

ಪರಿಶಿಷ್ಟ ಜಾತಿಗೆ ಮೀಸಲಿರುವ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಥಳೀಯರಿಗೆ ಆದ್ಯತೆ ಸಿಗಲಿದೆ. ಆದರೂ ಗೆಲ್ಲುವ ಅರ್ಹತೆ, ಮಾನದಂಡದ ಆಧಾತದಲ್ಲಿ ಹೊರಗಿನವರನ್ನೂ ಪರಿಗಣಿಸಲಾಗುತ್ತದೆ. ಈ ಕುರಿತು ಪಕ್ಷದಲ್ಲಿ ಚರ್ಚಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next