Advertisement

ನಾವು ನಿಮ್ಮೊಡನಿದ್ದೇವೆ!

06:20 PM Jun 29, 2019 | Sriram |

ಮುಂದುವರಿದುದು-5. ಉತ್ತಮ ಮಾನಸಿಕ ಆರೋಗ್ಯವನ್ನು ಪುನರ್‌ಸ್ಥಾಪಿಸುವುದು ಮತ್ತು ಕಾಪಾಡಿಕೊಳ್ಳುವುದಕ್ಕಾಗಿ ಆರೋಗ್ಯಯುತ ಜೀವನಶೈಲಿಯನ್ನು ರೂಢಿಸಿಕೊಳ್ಳುವುದಕ್ಕೆ ಸಹಾಯ ಮಾಡುವುದು.

Advertisement

ಇತರ ಕಾಯಿಲೆಗಳಿಂದ ಬಳಲಿ ಗುಣಮುಖರಾಗುತ್ತಿರುವವರಂತೆಯೇ ಮಾನಸಿಕ ಅಸ್ವಾಸ್ಥ್ಯ ಹೊಂದಿ ಗುಣ ಕಾಣುತ್ತಿರುವವರು ಕೂಡ ಆರೋಗ್ಯಯುತ ಮತ್ತು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಪ್ರಯೋಜನ ಪಡೆಯಬಹುದಾಗಿದೆ. ತಮ್ಮ ಸದಸ್ಯ ಸಕ್ರಿಯ ಸಾಮಾಜಿಕ ಜೀವನವನ್ನು ಮುನ್ನಡೆಸುವುದರಲ್ಲಿ ಕುಟುಂಬಗಳು ನಿರ್ಣಯಾತ್ಮಕ ಪಾತ್ರವನ್ನು ವಹಿಸಬಹುದಾಗಿದೆ. ವ್ಯಕ್ತಿ ಸಾಕಷ್ಟು ವ್ಯಾಯಾಮ ಮಾಡುವುದು ಅಥವಾ ತಮ್ಮ ಸೃಜನಶೀಲ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಸಹಾಯ ಮಾಡಬಹುದಾದ ಕ್ಲಬ್‌ ಅಥವಾ ಸಮೂಹಗಳನ್ನು ಸೇರಿಕೊಳ್ಳುವುದಕ್ಕೆ ಕುಟುಂಬಗಳು ನೆರವಾಗಬಹುದು. ಯೋಗ ಚಿಕತ್ಸೆ ಮತ್ತು ಇತರ ವಿಧವಾದ ಸೃಜನಶೀಲ ಅಭಿವ್ಯಕ್ತಿಗಳು ಈ ನಿಟ್ಟಿನಲ್ಲಿ ಪ್ರಯೋಜನಕಾರಿಯಾಗಿವೆ.

6. ತುರ್ತು ಸಂದರ್ಭಗಳಲ್ಲಿ ಕುಟುಂಬಗಳ ಪಾತ್ರ
ಮಾನಸಿಕ ಅಸ್ವಾಸ್ಥ್ಯ ಹೊಂದಿರುವವರ ಆರೋಗ್ಯ ಕುಸಿತ ಅಥವಾ ತುರ್ತು ಸಂದರ್ಭ ಉದ್ಭವಿಸಿದಾಗ ಆರೋಗ್ಯ ಸೇವಾ ಸೌಲಭ್ಯ ಅಥವಾ ತಂಡಗಳಿಗೆ ಮುನ್ಸೂಚನೆ ನೀಡಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಕುಟುಂಬವು ಮಹತ್ತರ ಪಾತ್ರವನ್ನು ನಿಭಾಯಿಸಬಹುದಾಗಿದೆ.

ಮಾನಸಿಕ ಅಸ್ವಾಸ್ಥ್ಯವೂ ಇನ್ನಿತರ ಅನಾರೋಗ್ಯಗಳಂಥದ್ದೇ: ಸರಿಯಾದ ವೈದ್ಯಕೀಯ ಆರೈಕೆ, ನಿಭಾವಣೆ ಮತ್ತು ಬಲವಾದ ಬೆಂಬಲವಿದ್ದರೆ ರೋಗಪೀಡಿತರು ಗುಣಮುಖ ರಾಗಬಹುದಾಗಿದೆ. ಚಿಕಿತ್ಸಾ ಪ್ರಕ್ರಿಯೆಯಲ್ಲಿ ಕುಟುಂಬಗಳು ಸಕ್ರಿಯ ತೊಡಗಿಸಿಕೊಳ್ಳುವಿಕೆಯು ರೋಗಿಯು ಗುಣ ಹೊಂದುವ ಫ‌ಲಿತಾಂಶ ಮತ್ತು ಕುಟುಂಬದ ಒಟ್ಟಾರೆ ಕ್ಷೇಮದಲ್ಲಿ ಪ್ರಯೋಜನವನ್ನು ನೀಡುತ್ತದೆ. ಈ ವಿಚಾರದಲ್ಲಿ ಕುಟುಂಬಗಳ ಅತ್ಯಂತ ಶೀಘ್ರವಾಗಿ ತೊಡಗಿಕೊಳ್ಳಬೇಕು ಮತ್ತು ಒಳಗೊಳ್ಳಬೇಕು. ಮಾನಸಿಕ ಅಸ್ವಾಸ್ಥ್ಯ ಹೊಂದಿರುವವರಿಗೆ ನೆರವು, ಬೆಂಬಲದಲ್ಲಿ ಕುಟುಂಬಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next