ವಿಜಯಪುರ: ಇಸ್ಲಾಂ ಧರ್ಮದಲ್ಲಿ ಮೂರ್ತಿ ಪೂಜೆಯಾಗಲಿ, ಫೋಟೋ ಇಟ್ಟು ದೀಪ ಹಚ್ಚುವ ಪದ್ಧತಿ ಇಲ್ಲ. ನಮ್ಮಲ್ಲಿ ಬ್ಯಾಂಡ್ ಬಾರಿಸಿ ಮೆರವಣಿಗೆ ಮಾಡುವ ಪದ್ಧತಿಯೂ ಇಲ್ಲ. ಹೀಗಾಗಿ ಮುಂದಿನ ವರ್ಷದಿಂದ ಮುಸ್ಲಿಮರೆಲ್ಲ ಸೇರಿ ಶಿವಾಜಿ ಜಯಂತಿ ಆಚರಿಸುತ್ತೇವೆ..ಇದು ಟಿಪ್ಪು ಜಯಂತಿ ಕುರಿತಂತೆ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ನೀಡಿರುವ ಪ್ರತಿಕ್ರಿಯೆ.
ಬುಧವಾರ ವಿಜಯಪುರದಲ್ಲಿ ಸುದ್ದಿಗಾರರು ರಾಜ್ಯದಲ್ಲಿ ರಾಜ್ಯ ಸರ್ಕಾರದ ಟಿಪ್ಪು ಜಯಂತಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಟಿಪ್ಪು ಜಯಂತಿ ಬಗ್ಗೆ ಬಿಜೆಪಿಯವರು ಮಾತನಾಡೋದನ್ನು ಕೇಳಿದರೆ ಬೇಸರವಾಗುತ್ತದೆ. ಈ ವಿವಾದ ಬಳಸಿಕೊಂಡು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದರು.
ಇಸ್ಲಾಂನಲ್ಲಿ ಮೂರ್ತಿ ಪೂಜೆ, ಫೋಟೋಗೆ ಪೂಜೆ ಮಾಡುವ ಸಂಪ್ರದಾಯ ಇಲ್ಲ. ಈ ನಿಟ್ಟಿನಲ್ಲಿ ಶಿವಾಜಿ ಜಯಂತಿ ಮಾಡುವ ಬಗ್ಗೆ ಸುತ್ತೂರು ಶ್ರೀ ಸೇರಿದಂತೆ ಸೂಫಿ ಸಂತರು, ರಾಜಕಾರಣಿಗಳು ಪ್ರಮುಖರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಟಿಪ್ಪು ಜಯಂತಿ ಆಚರಣೆಗೆ ಬೇರೆಯದ್ದೇ ಆದ ಪದ್ಧತಿ ಇದೆ. ಟಿಪ್ಪು ಜಯಂತಿ ದಿನದಂದೇ ನಾವು ಶಿವಾಜಿ ಜಯಂತಿ ಆಚರಿಸುತ್ತೇವೆ. ಶಿವಾಜಿ ಭಾರತದ ಅಪ್ರತಿಮ ರಾಜ. ಶಿವಾಜಿ ಜಯಂತಿ ಆಚರಣೆಗಾಗಿ ಎಲ್ಲಾ ಅಂಜುಮಾನ್(ಮುಸ್ಲಿಂ ಧಾರ್ಮಿಕ ಆಚರಿಸುವ) ಕಮಿಟಿಗಳಿಗೂ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.