Advertisement

ಜೀವನದ ಏರುಪೇರುಗಳಿಗೆ ನಾವೇ ಹೊಣೆಗಾರರು

12:30 PM Aug 24, 2018 | Team Udayavani |

ಕಲಬುರಗಿ: ಜೀವನದಲ್ಲಿ ಆಗುವ ಏರು ಪೇರುಗಳಿಗೆ ನಾವೇ ಹೊಣೆಗಾರರೇ ಹೊರತು ಬೇರೊಬ್ಬರಲ್ಲ ಎಂದು ಹೈದ್ರಾಬಾದ್‌ನ ಯುವರಾಜ ಮೋಟಿವೇಟರ್ ಸಂಸ್ಥೆ ತರಬೇತುದಾರ ನಾಗಪ್ರಸಾದ ಹೇಳಿದರು. 

Advertisement

ನಗರದ ಅಪ್ಪಾ ಪಬ್ಲಿಕ್‌ ಶಾಲೆ ಆವರಣದ ಶರಣಬಸವೇಶ್ವರ ಶತಮಾನೋತ್ಸವ ಸಭಾಂಗಣದಲ್ಲಿ ಶರಣಬಸವ ವಿಶ್ವವಿದ್ಯಾಲಯದಿಂ ದ ಹಮ್ಮಿಕೊಂಡಿರುವಇಂಡಕ್ಷನ್‌ ಪ್ರೋಗ್ರಾಂ ತರಬೇತಿ ಕಾರ್ಯಕ್ರಮದಲ್ಲಿ ಮೋಟಿವೇಶನ್‌ ಎನ್ನುವ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ನಾವು ಪ್ರಯತ್ನಿಸಿದರೆ ನಮ್ಮ ಹಣೆಬರಹ ನಾವೇ ಬರೆದುಕೊಳ್ಳಬಹುದು. ಇದಕ್ಕೆ ಬೇಕಾಗಿರುವುದು ಪ್ರಬಲ ಇಚ್ಛಾಶಕ್ತಿ. ಬಯಸಿದರೆ ನಮ್ಮ ಸಾವನ್ನೂ ಮುಂದೂಡಬಹುದು. ಈ ನಿಟ್ಟಿನಲ್ಲಿ ನಮ್ಮ ಯೋಚನೆಗಳು, ಯೋಜನೆಗಳು ಇರಬೇಕು ಎಂದರು.

ಜೀವನದಲ್ಲಿ ಗುರಿ ಇರದೆ ಇದ್ದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಗುರಿ ಮುಟ್ಟುವ ವರೆಗೆ ಅನೇಕ ಅಡಚಣೆಗಳು, ತೊಂದರೆಗಳು ಎದುರಾಗುತ್ತವೆ. ಅವುಗಳಿಂದ ಪಾರಾಗುವುದರಲ್ಲಿಯೇ ಜೀವನದ ಕೌಶಲ್ಯ ಅಡಗಿದೆ. ಪ್ರಯತ್ನಪಡದ ಹೊರತು ಏನೂ ಲಭಿಸುವುದಿಲ್ಲ. ಅದಕ್ಕಾಗಿ ನಿರಂತರ ಆಶಾವಾದಿಯಾಗಿದ್ದು, ಕಠಿಣ ಪರಿಶ್ರಮದಿಂದ ಜೀವನದ ಗುರಿ ತಲುಪಬೇಕು ಎಂದು ಹೇಳಿದರು.
 
ಭೂಮಿ ಮೇಲೆ ಇರುವ ನಿಜವಾದ ದೇವರುಗಳೆಂದರೆ ತಂದೆ-ತಾಯಿ. ಅವರ ನೋವು-ನಲಿವಿನಲ್ಲಿ ಭಾಗಿಗಳಾಗಿ ಕುಟುಂಬದವರ ಜೊತೆ ಕಾಲ ಕಳೆಯಬೇಕು. ನಾವು ಸಾಮಾನ್ಯವಾಗಿ ಹಣ ಖರ್ಚು ಮಾಡುವುದನ್ನು ಕಲಿತಿದ್ದೇವೆಯೇ ಹೊರತು ಗಳಿಸುವುದು, ಉಳಿಸುವುದನ್ನು ಕಲಿತಿಲ್ಲ. ಮೊದಲು ಹಣವನ್ನು ಮಿತವಾಗಿ ಖರ್ಚು ಮಾಡುವುದನ್ನು ಕಲಿಯಿರಿ ಎಂದು ಸಲಹೆ ನೀಡಿದರು.
 
ಶರಣಬಸವ ವಿಶ್ವವಿದ್ಯಾಲಯದ ಡೀನ್‌ ಡಾ| ಲಿಂಗರಾಜ ಶಾಸ್ತ್ರೀ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಸ್ನಾತಕ ಪದವಿ ವಿಭಾಗದ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು  

Advertisement

Udayavani is now on Telegram. Click here to join our channel and stay updated with the latest news.

Next