Advertisement

ಕೈ ಶಾಸಕರು ರಾಜೀನಾಮೆ ಕೊಟ್ರೆ ನಾವು ಕಾರಣರಲ್ಲ

06:00 AM Sep 12, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿದರೂ ರಾಷ್ಟ್ರಪತಿ ಆಡಳಿತ ಜಾರಿಗೊಳ್ಳುವುದಿಲ್ಲ. ಲೋಕಸಭೆ ಚುನಾವಣೆ ವೇಳೆಯೂ ಸರ್ಕಾರ ಇರುತ್ತದೆ. ಆದರೆ, ಅದು ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರವೇ ಅಥವಾ ಬೇರೆ ಸರ್ಕಾರವೇ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ರಚಿಸಲು ಬಿಟ್ಟಿದ್ದೇವೆ.

Advertisement

ಶಾಸಕರನ್ನು ಸೆಳೆದು ಸರ್ಕಾರ ಅಸ್ತಿರಗೊಳಿಸುವುದಿಲ್ಲ. ಮೇಲಾಗಿ 104 ಶಾಸಕರನ್ನು ಹೊಂದಿರುವ ನಮಗೆ ಸರ್ಕಾರ ರಚಿಸಲು ಬಹುಮತವೂ ಇಲ್ಲ ಹಾಗೂ ಸರ್ಕಾರ ರಚಿಸುವ ಹುರುಪಿನಲ್ಲೂ ನಾವಿಲ್ಲ. ಆದರೆ, ಮಿತ್ರಪಕ್ಷಗಳು ಬೇರ್ಪಟ್ಟರೆ ಅಥವಾ ಕಾಂಗ್ರೆಸ್‌ ಶಾಸಕರು ರಾಜೀನಾಮೆ
ಕೊಟ್ಟರೆ ಅದು ಅವರ ಸಮಸ್ಯೆ. ಅವರೇ ಅದನ್ನು ಬಗೆಹರಿಸಬೇಕೇ ಹೊರತು ಬಿಜೆಪಿ ಸರ್ಕಾರ ಉರುಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಬಾರದು ಎಂದರು. 

ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನಿಸುವುದಿಲ್ಲ. ಒಂದೊಮ್ಮೆ ಅದಾಗಿಯೇ ಪತನಗೊಂಡರೆ ಸರ್ಕಾರ ರಚನೆ ಅವಕಾಶ ಬಳಸಿಕೊಳ್ಳದೆ ಇರಲು ನಾವು ಮೂರ್ಖರಲ್ಲ .
● ಸಿ.ಟಿ.ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next