Advertisement

ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ: ಸುನಿಲ್ ಕುಮಾರ್

06:21 PM May 18, 2022 | Team Udayavani |

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆಯ ಕುರಿತು ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಸಚಿವ ಸುನಿಲ್ ಕುಮಾರ್ ಅವರು ಟ್ವೀಟ್ ಮಾಡಿ ಕಾಂಗ್ರೆಸ್ ಮತ್ತು ಟೀಕಾ ಕಾರರಿಗೆ ತಿರುಗೇಟು ನೀಡಿದ್ದಾರೆ.

Advertisement

”ಭಾರತದ ಶೌರ್ಯ,ಪರಾಕ್ರಮದ ಇತಿಹಾಸವನ್ನು ಪಠ್ಯಕ್ರಮದಲ್ಲಿ ಉದ್ದೇಶಪೂರ್ವಕವಾಗಿ ಮರೆಮಾಚಿ, ತಿರುಚಿದ ಇತಿಹಾಸವನ್ನು ತಿಳಿಸುವ ಕೃತ್ಯವನ್ನು ಕಾಂಗ್ರೆಸ್ ಪಕ್ಷ ಕಳೆದ 70 ವರ್ಷಗಳಲ್ಲಿ ಮಾಡುತ್ತಾ ಬಂದಿತ್ತು. ಈಗ ಭಾರತದ ಯುವಕರಿಗೆ ಬೇಕಾಗಿರುವುದು ಭಾರತದ ನೈಜ ಇತಿಹಾಸವೇ ಹೊರತು ದಾಸ್ಯದ ಇತಿಹಾಸವಲ್ಲ” ಎಂದು ಸಿದ್ದರಾಮಯ್ಯ ಅವರ ಟ್ವೀಟ್ ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.

”ಆ ಇತಿಹಾಸವನ್ನು ಪಠ್ಯಕ್ರಮದಲ್ಲಿ ಜೋಡಿಸುವಂತಹ ಕಾರ್ಯವನ್ನು ತಜ್ಞರ ಸಮಿತಿ ಕೈಗೊಂಡಿರುವುದು ಸ್ವಾಗತಾರ್ಹ. ಭಾರತದ ಯುವ ಜನತೆಗೆ ಬೇಕಾಗಿರುವುದು ವಿವೇಕಾನಂದ,ವಿಜಯನಗರ,ನಾರಾಯಣ ಗುರು, ಶಂಕರಾಚಾರ್ಯರಂತಹ ದಾರ್ಶನಿಕರ ಜೀವನ ಕ್ರಮವೇ ಹೊರತು ಮೆಕಾಲೆ ಪ್ರೇರಿತ, ಮೊಘಲರ, ಟಿಪ್ಪು ಸುಲ್ತಾನರ ಇತಿಹಾಸವಲ್ಲ” ಎಂದು ಇನ್ನೊಂದು ಟ್ವೀಟ್ ನಲ್ಲಿ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ : ತಿಳಿಗೇಡಿ ಯುವಕನಿಂದ ಪಠ್ಯ ಪರಿಷ್ಕರಣೆ ಮಾಡಿಸಿದ್ದಾರೆ: ಸಿದ್ದರಾಮಯ್ಯ ಕಿಡಿ

”ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ. ಯಾವ ತಪ್ಪನ್ನು ಕಾಂಗ್ರೆಸ್ ಮಾಡಿತ್ತೋ ಅದನ್ನು ಸರಿಪಡಿಸುವ ಕೆಲಸ ನಾವು ಮಾಡುತ್ತಿದ್ದೇವೆ” ಎಂದು ಟ್ವೀಟ್ ನಲ್ಲಿ ಹೇಳಿಕೊಂಡಿದ್ದಾರೆ.

Advertisement

ಪಠ್ಯಪುಸ್ತಕ ಪರಿಷ್ಕರಣೆಯ ವಿವಾದದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಲೆ ತಗ್ಗಿಸುವಂತಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯಂತಹ ಗಂಭೀರ ಕಾರ್ಯವನ್ನು ನಾಡಿನ ಹಿರಿಯ ಲೇಖಕರು, ಸಮಾಜ ಸುಧಾರಕರನ್ನು ಅವಹೇಳನ ಮಾಡುತ್ತಾ ಬಂದಿರುವ ಅನರ್ಹ, ಪೂರ್ವಗ್ರಹ ಪೀಡಿತ ವ್ಯಕ್ತಿಯಿಂದ ಮಾಡಿಸಿರುವುದೇ ನಾಡು-ನುಡಿಗೆ ಬಗೆದಿರುವ ದ್ರೋಹ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next