Advertisement

ಗೋವಾ ಕಾಂಗ್ರೆಸ್‌ ನಾಯಕರನ್ನು ನಾವು ಒಪ್ಪಿಸ್ತೇವೆ: ಪರಮೇಶ್ವರ್‌

07:00 AM Dec 29, 2017 | Team Udayavani |

ಬೆಂಗಳೂರು: ಮಹದಾಯಿ ವಿಚಾರದಲ್ಲಿ ಗೋವಾದ ಕಾಂಗ್ರೆಸ್‌ ನಾಯಕರನ್ನು ಒಪ್ಪಿಸಲು ನಾವು ಸಿದಟಛಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾತುಕತೆಗೆ ಸಮಯ ನಿಗದಿಗೊಳಿಸಿ ಗೋವಾ ಮುಖ್ಯಮಂತ್ರಿ ನಮ್ಮ ಮುಖ್ಯಮಂತ್ರಿ ಅಥವಾ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದರೆ ನಾವು ಗೋವಾ ಕಾಂಗ್ರೆಸ್‌ ನಾಯಕರನ್ನು ಒಪ್ಪಿಸುತ್ತೇವೆ ಎಂದು ಹೇಳಿದರು.

Advertisement

ಮಾತುಕತೆಗೆ ಸಿದಟಛಿ ಇರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ಮುಖ್ಯಮಂತ್ರಿಗೆ ಎಷ್ಟು ಬಾರಿ ಪತ್ರ ಬರೆದರೂ ಉತ್ತರ ಕೊಟ್ಟಿಲ್ಲ. ಇದೀಗ ಯಡಿಯೂರಪ್ಪ ಪತ್ರಕ್ಕೆ ಉತ್ತರ ಕೊಟ್ಟಿರುವುದು ಎಷ್ಟು ಸರಿ ಎಂದರು. ರೈತರು ತಮ್ಮ ಬೇಡಿಕೆಯಿಟ್ಟುಕೊಂಡು ಪ್ರತಿಭಟನೆ ಮಾಡಿದರು. ಆದರೆ, ಬಿಜೆಪಿಯವರು ಕೆಪಿಸಿಸಿ ಕಚೇರಿಗೆ ಬಂದು ಪ್ರತಿಭಟನೆ ಮಾಡಿದ್ದು ಯಾಕೆ? ಪಕ್ಷದ ಕಚೇರಿ ಮುಂದೆ ಮತ್ತೂಂದು ಪಕ್ಷದವರು ಬಂತು ಪ್ರತಿಭಟನೆ ಮಾಡಿದ್ದನ್ನು ನಾನು ಎಲ್ಲಿಯೂ ಕೇಳಿರಲಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next