Advertisement

ಅಸ್ವಸ್ಥ ಕಾಂಗ್ರೆಸ್‌ ನಾಯಕ ಸೌಮೇನ್‌ ಮಿತ್ರಾ ಏಮ್ಸ್‌ಗೆ ದಾಖಲು

11:43 AM Mar 20, 2018 | Team Udayavani |

ಹೊಸದಿಲ್ಲಿ :  ಪಶ್ಚಿಮ ಬಂಗಾಲದ ಕಾಂಗ್ರೆಸ್‌ ನಾಯಕ ಸೌಮೇನ್‌ ಮಿತ್ರಾ ಅವರು ತೀವ್ರ ಅನಾರೋಗ್ಯದ ಕಾರಣ ಇಲ್ಲಿನ ಏಮ್ಸ್‌ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Advertisement

ಎದೆಯಲ್ಲಿ ದ್ರವವು ತುಂಬಿಕೊಂಡ ಕಾರಣ ಅವರಿಗೆ ಅನಾರೋಗ್ಯ ಉಂಟಾಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ಸಮಯದಿಂದ ಅವರು ಈ ತೊಂದರೆಯಿಂದ ಬಳಲುತ್ತಿದ್ದು ಮೊನ್ನೆ ಭಾನುವಾರ ಅವರನ್ನು ಆಸ್ಪತ್ರೆಗೆ ಸೇರಿಸಲಾಗತ್ತು ಎಂದು ಮೂಲಗಳು ತಿಳಿಸಿವೆ. 

ಮಿತ್ರಾ ಅವರು ಕಾರ್ಡಿಯಾಲಜಿ ವಿಭಾಗದ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next