Advertisement
ಶಬರಿಮಲೆ ವಿಷಯದ ಹಿನ್ನೆಲೆಯಲ್ಲಿ ಮತಗಳಿಕೆಯ ಲೆಕ್ಕಾಚಾರದಲ್ಲಿರುವ ಬಿಜೆಪಿಗೆ ತಮ್ಮ ದೇಗುಲ ಭೇಟಿ ಮೂಲಕ ರಾಹುಲ್ ಚೆಕ್ ಕೊಟ್ಟಿದ್ದಾರೆ. ಈ ಮೂಲಕ ಪರೋಕ್ಷವಾಗಿ ಹಿಂದೂ ಮತಗಳಿಕೆಗೆ ಕಣ್ಣಿಟ್ಟಿದ್ದಾರೆ. ರಾಹುಲ್ ದೇಗುಲ ಭೇಟಿ ಹಿಂದಿನ ಮರ್ಮವೇನು ಎಂಬುದನ್ನೂ ಈಗ ಚುನಾವಣ ಪಂಡಿತರು ಲೆಕ್ಕಹಾಕುತ್ತಿದ್ದಾರೆ.
Related Articles
ತಮ್ಮ ತಂದೆಯವರಿಗಾಗಿ ದೇಗುಲದ ಪ್ರಸಿದ್ಧ ಸೇವೆಯಲ್ಲೊಂದಾದ ಬಲಿತರ್ಪಣವನ್ನು ರಾಹುಲ್ ನೀಡಿದ್ದಾರೆ. ಸಾಂಪ್ರದಾಯಿಕ ವೇಷ್ಟಿ, ಶಲ್ಯ ಹೊದ್ದು ಸೇವೆಗಳನ್ನೂ ಮಾಡಿಸಿ ಪ್ರದಕ್ಷಿಣೆಯನ್ನೂ ಪೂರೈಸಿದರು. ರಾಹುಲ್ ಅವರ ದೇಗುಲ ಭೇಟಿ ವೈಯಕ್ತಿಕವಾಗಿರಬಹುದು. ಆದರೆ ಇದರ ಹಿಂದೆ ಗುಪ್ತ ಲೆಕ್ಕಾಚಾರವಿದೆ. ಬಿಜೆಪಿ ರಾಹುಲ್ ಅವರ ನಂಬಿಕೆಗಳ ಬಗ್ಗೆ ಯಾವತ್ತೂ ಪ್ರಶ್ನೆಗಳನ್ನೆತ್ತಿದೆ. ಈ ಸಂಬಂಧ ಉತ್ತರಿಸಲು ವಯನಾಡ್‌ನ ಸಂದರ್ಭವನ್ನು ರಾಹುಲ್ ಬಳಸಿದರು ಎನ್ನಲಾಗುತ್ತಿದೆ.. ಅಲ್ಲದೆ ಬಿಜೆಪಿಯ ಪ್ರಖರ ಹಿಂದುತ್ವ ಎದುರಿಸಲು ರಾಹುಲ್ ಮೃದು ಹಿಂದುತ್ವದ ದಾಳವನ್ನು ಎಸೆಯುತ್ತಿದ್ದಾರೆ ಎನ್ನಲಾಗಿದೆ.
Advertisement
ರಾಹುಲ್ ವಯನಾಡ್‌ನಲ್ಲಿ ಚುನಾವಣೆಗೆ ನಿಂತ ಕೂಡಲೇ ಬಿಜೆಪಿ ಹಿಂದೂಗಳ ಮತಗಳು ಕಡಿಮೆ ಇರುವ ವಯನಾಡ್ ಅನ್ನೇ ರಾಹುಲ್ ಆಯ್ದುಕೊಂಡರು ಎಂದು ಲೇವಡಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ ವಯನಾಡ್‌ನಲ್ಲಿ ಶೇ.41ರಷ್ಟಿರುವ ಹಿಂದೂಗಳ ಓಟು ಗಳಲ್ಲಿ ಸ್ವಲ್ಪವನ್ನಾದರೂ ತಮ್ಮ ಬುಟ್ಟಿಗೆ ಹಾಕಿಕೊಳ್ಳುವುದು ರಾಹುಲ್ ಯತ್ನ. ಅಷ್ಟೇ ಅಲ್ಲದೆ, ಹಿಂದೂ ಸಂಪ್ರದಾಯ, ಪರಂಪರೆಗಳನ್ನು ಗೌರವಿಸುವೆ ಎಂದು ಕೇರಳದ ಹಿಂದೂಗಳಿಗೆ ತಿಳಿಸುವ ಪ್ರಯತ್ನವೂ ಹೌದು.
ಶಬರಿಮಲೆ ವಿಷಯದಲ್ಲಿ ಹಿಂದೂಗಳಿಗೆ ತಮ್ಮ ಪಕ್ಷವೇ ಏಕೈಕ ದಿಕ್ಕು ಎಂದು ಪ್ರತಿಪಾದಿಸಲು ಬಿಜೆಪಿ ಹೊರಟಿತ್ತು. ಈ ಮತ ಧ್ರುವೀಕರಣ ತಡೆಯುವ ಪ್ರಯತ್ನ ರಾಹುಲ್ ಅವರದ್ದು ಎಂಬ ವ್ಯಾಖ್ಯಾನ ಚಾಲ್ತಿಯಲ್ಲಿದೆ.