ಚಾಮರಾಜನಗರ: ವಯನಾಡಿನ ಚೂರಲ್ ಮಲಾದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಚಾ.ನಗರ ಮೂಲದ ರಾಜೇಂದ್ರ (50) ಅವರ ಶವ ಕೇರಳದ ಕೊಯಿಕ್ಕೂಡು ಸಮೀಪದ ನೆಲಂಬೂರಿನಲ್ಲಿ ಪತ್ತೆಯಾಗಿದೆ.
ಅವರ ಪತ್ನಿ ರತ್ನಮ್ಮ ಸಹ ಮೃತಪಟ್ಟಿದ್ದಾರೆಂದು ಹೇಳಲಾಗಿದ್ದು, ಅವರ ಶವ ಇನ್ನೂ ಸಿಕ್ಕಿಲ್ಲ. ರಾಜೇಂದ್ರ ಅವರ ತಂದೆ ಚಾ.ನಗರ ತಾಲೂಕಿನ ಚಿಕ್ಕಮೋಳೆಯವರು. ಇವರ ಕುಟುಂಬದವರು 50 ವರ್ಷಗಳ ಹಿಂದೆಯೇ ಚೂರಲ್ ಮಲಾದ ಟೀ ಎಸ್ಟೇಟ್‌ಗೆ ತೆರಳಿ ಗಾರೆ ಕೆಲಸ ಮಾಡಿಕೊಂಡಿದ್ದರು. ರಾಜೇಂದ್ರ ಅವರ ಪತ್ನಿ ಚಾ.ನಗರ ತಾಲೂಕಿನ ಇರಸವಾಡಿಯವರು.
ರಾಜೇಂದ್ರ ಅವರು ಆರು ತಿಂಗಳ ಹಿಂದೆ ಗೃಹಪ್ರವೇಶ ಮಾಡಿದ್ದ ಮನೆ ಕೊಚ್ಚಿಕೊಂಡು ಹೋಗಿದೆ. ದಂಪತಿಗೆ ಮಕ್ಕಳಿರಲಿಲ್ಲ.
ರಾಜೇಂದ್ರ ಅವರ ಶವ ಬುಧವಾರ ಸಂಜೆ ನೆಲಂಬೂರು ಬಳಿ ಪತ್ತೆಯಾಗಿದ್ದು, ಶವವನ್ನು ಮೇಪಾಡಿಗೆ ತರಲಾಗುತ್ತಿದೆ ಎಂದು ಅವರ ಸಮೀಪದ ಸಂಬಂಧಿ ವೆಂಕಟಯ್ಯನಛತ್ರ ಗ್ರಾ.ಪಂ. ಸದಸ್ಯ ಶಶಿಕುಮಾರ್ ತಿಳಿಸಿದರು. ರಾಜೇಂದ್ರ ಅವರ ತಾಯಿ ಮತ್ತು ತಂಗಿ ಕೇರಳದ ಕಡೂರು ಎಸ್ಟೇಟ್‌ನಲ್ಲಿ ನೆಲೆಸಿದ್ದಾರೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: Heavy Rain: ಆಗಸ್ಟ್ 1 ರಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ