Advertisement

ನಿಮ್ಮ ಫೋನ್‌ ನೀರು ಕುಡಿಯಿತೇ?

11:52 AM Aug 03, 2020 | mahesh |

– ಮಳೆಗಾಲದಲ್ಲಿ ಸ್ಮಾರ್ಟ್‌ಫೋನ್‌ಗೆ ನೀರು ನುಗ್ಗದಂತೆ ನೋಡಿಕೊಳ್ಳಿ.
– ಒಂದು ವೇಳೆ ನೀರೊಳಗೆ ಫೋನ್‌ ಬಿದ್ದರೆ ಆತಂಕಬೇಡ. ವಾಟರ್‌ ಪ್ರೂಫ್ ಇರುವ ಸ್ಮಾರ್ಟ್‌ ಫೋನ್‌ಗಳು 10- 15 ಸೆಕೆಂಡುಗಳವರೆಗೆ ಹಾನಿ ತಡೆದುಕೊಳ್ಳಬಹುದಷ್ಟೇ.
– ನೀರಿನಿಂದ ಮೇಲೆತ್ತಿದ ಕೂಡಲೇ ಮೊಬೈಲನ್ನು ಮೊದಲು ಸ್ವಿಚ್ಡ್ ಆಫ್ ಮಾಡಿ. ಫೋನೊಳಗೆ ತೇವಾಂಶವಿದ್ದಷ್ಟು ಶಾರ್ಟ್‌ಸರ್ಕ್ನೂಟ್‌ನ ಅಪಾಯ ಅಧಿಕವಿರುತ್ತದೆ.
– ಫೋನೊಳಗಿನ ಸಿಮ್‌ಕಾರ್ಡ್‌, ಮೆಮೊರಿ ಕಾರ್ಡ್‌, ಸುತ್ತಲಿನ ಪ್ಯಾನಲ್‌ಗ‌ಳನ್ನು ಬಿಚ್ಚಿ. ಬ್ಯಾಟರಿಯನ್ನೂ ಹೊರತೆಗೆಯಿರಿ.
– ಹತ್ತಿಬಟ್ಟೆಯಿಂದ ಫೋನನ್ನು ಚೆನ್ನಾಗಿ ಒರೆಸಿ, ತೇವಾಂಶ ಆರುವಂತೆ ನೋಡಿಕೊಳ್ಳಿ.
– ಕಾಟನ್‌ ಬಡ್ಸ್‌ ಮೂಲಕ ಇಯರ್‌ಫೋನ್‌, ಚಾರ್ಜಿಂಗ್‌ ಪಾಯಿಂಟ್‌ ಒಳಗೆ ನೀರು ನುಗ್ಗಿದ್ದರೆ ತೆಗೆಯಿರಿ.
– ಒಂದು ಡಬ್ಬದಲ್ಲಿ ಅಕ್ಕಿಯನ್ನು ತುಂಬಿಸಿ, ಅದರೊಳಗೆ ಫೋನ್‌ ಇಟ್ಟು ಮುಚ್ಚಳವನ್ನು ಭದ್ರವಾಗಿ ಹಾಕಿ.
– 2 ದಿನ ಬಿಟ್ಟು ಫೋನನ್ನು ಡಬ್ಬಿಯಿಂದ ತೆಗೆಯಿರಿ.
– ಈ ವಿಧಾನ ಅನುಸರಿಸುವ ಬಹುತೇಕ ಫೋನ್‌ಗಳು ಮರುಬಳಕೆಗೆ ಯೋಗ್ಯವಿರುತ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next