Advertisement

ಮಧ್ಯವರ್ತಿಗಳ ಹಾವಳಿ: ಕಂಗಾಲಾದ ಕಲ್ಲಂಗಡಿ ಬೆಳೆಗಾರರು

12:30 AM Feb 23, 2019 | |

ಬೈಂದೂರು: ಬೇಸಗೆಯಲ್ಲಿ ಬಹು ನಿರೀಕ್ಷೆ ಮೂಡಿಸಿದ ಕಲ್ಲಂಗಡಿ ಬೆಳೆಯ ಧಾರಣೆ ಕುಸಿತ ಮತ್ತು ಮಧ್ಯವರ್ತಿಗಳ ಹಾವಳಿ ತಾಲೂಕಿನ ಅಸಂಖ್ಯಾತ ಯುವ ಕೃಷಿಕರಿಗೆ ನಿರಾಸೆ ಮೂಡಿಸಿದೆ. 

Advertisement

ಬೆಲೆ ಇಳಿಮುಖ 
ಕರಾವಳಿಯಲ್ಲಿ ಜನವರಿ ಅಂತ್ಯ ಹಾಗೂ ಎಪ್ರಿಲ್‌ ತಿಂಗಳು ಸೇರಿ ಎರಡು ಹಂತದಲ್ಲಿ ಕಲ್ಲಂಗಡಿ ಬೆಳೆ ಕಟಾವಿಗೆ ದೊರೆಯುತ್ತದೆ. 
ಕಳೆದ ವರ್ಷ 8ರಿಂದ 10 ರೂ.ತನಕ ಬೆಲೆ ಸಿಕ್ಕಿದೆ. ಆದರೆ ಈ ಬಾರಿ ಆರಂಭದಲ್ಲೇ ಬೆಲೆ ಇದಕ್ಕೂ ಕಡಿಮೆ ಇದೆ. ಮಧ್ಯವರ್ತಿಗಳಿಂದಾಗಿ ಈ ಬೆಲೆ ಕಡಿಮೆಯಾಗಿದೆ ಎನ್ನುತ್ತಾರೆ ಕೃಷಿಕರು. ಇದಕ್ಕೆ ಕಾರಣ ಗ್ರಾಮೀಣರು ನೇರವಾಗಿ ಮಾರುಕಟ್ಟೆಗೆ ಕೊಂಡೊಯ್ದು ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಮಾರುಕಟ್ಟೆ ತಲುಪಿಸಲು ಮಧ್ಯವರ್ತಿಗಳಿಗೆ ನೀಡುತ್ತಿದ್ದು, ಅವರು ಸೂಕ್ತ ಬೆಲೆ ನೀಡುತ್ತಿಲ್ಲ ಎನ್ನಲಾಗಿದೆ.  ಇನ್ನು, ಈ ವರ್ಷ ಚಳಿ ಪ್ರಮಾಣ ಅಧಿಕವಿದ್ದರಿಂದ ಕೆಲವೆಡೆ ಇಳುವರಿ ಕೊರತೆಯಾಗಿದೆ. 
 
ಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಗುತ್ತಿಲ್ಲ
ಕಳೆದ ನಾಲ್ಕು ವರ್ಷಗಳಿಂದ ಕಲ್ಲಂಗಡಿ ಬೆಳೆಯುತ್ತಿದ್ದೇನೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಇಳುವರಿ ಮತ್ತು ಧಾರಣೆ ತೀರ ಕಡಿಮೆ. ಉತ್ತಮ ದರ ಇದ್ದರೂ ಮಧ್ಯವರ್ತಿಗಳ ಸಮಸ್ಯೆಯಿಂದ ಶ್ರಮಕ್ಕೆ ಪ್ರತಿಫ‌ಲ ಸಿಗುತ್ತಿಲ್ಲ. ಹೀಗಾಗಿ ನೇರ ಮಾರುಕಟ್ಟೆ ಅವಕಾಶ ಬೇಕು ಎಂದು ಕೃಷಿಕ ಪ್ರದೀಪ್‌ ಶೆಟ್ಟಿ ಹೇಳುತ್ತಾರೆ

ಮಾರುಕಟ್ಟೆಯಲ್ಲಿ 20 ರೂ., ಬೆಳೆಗಾರರಿಗೆ 8 ರೂ.!
ರೈತರಿಂದ ಏಳೆಂಟು ರೂಪಾಯಿಗೆ ಖರೀದಿಸುವ ದಲ್ಲಾಗಳಿಗಳು, ಮಾರುಕಟ್ಟೆಯಲ್ಲಿ 15-20 ರೂ.ಗೆ ಮಾರಾಟ ಮಾಡುತ್ತಾರೆ. ಕಲ್ಲಂಗಡಿಗೆ ಕೇರಳ, ಬೆಂಗಳೂರು ಹಾಗೂ ಸ್ಥಳೀಯವಾಗಿ ಉತ್ತಮ ಬೇಡಿಕೆಯಿದೆ. ಮುಂಬೈ ಮಾರುಕಟ್ಟೆಗೆ ಸಾಗಿಸಲು ಅವಕಾಶ ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆ ಮಧ್ಯಪ್ರವೇಶಿಸಬೇಕಿದೆ. ಇಲಾಖೆಗಳು ರೈತರು ಸಾವಯವ ಗೊಬ್ಬರ ಬಳಸಲು ವಿಶೇಷ ಪ್ರೋತ್ಸಾಹ ನೀಡುತ್ತಿವೆ. ಆದರೆ ಇಳುವರಿ ಕಡಿಮೆ ಎಂಬ ಕಾರಣಕ್ಕೆ ರೈತರು ಇನ್ನೂ ರಾಸಾಯನಿಕ ಗೊಬ್ಬರಗಳನ್ನು ತ್ಯಜಿಸಿಲ್ಲ.  

Advertisement

Udayavani is now on Telegram. Click here to join our channel and stay updated with the latest news.

Next